Monsoon Travel 2025 : ಮುಂಗಾರು ಪ್ರವಾಸಕ್ಕೆ ಯೋಜಿಸುತ್ತೀದ್ದೀರಾ, ಕೊಡಗಿನ ಬೆಟ್ಟಗಳ ತಾಣವಾದ ಈ ಅಭಯಾರಣ್ಯ ಆಯ್ಕೆ ಮಾಡಿಕೊಳ್ಳಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Monsoon Travel 2025 : ಮುಂಗಾರು ಪ್ರವಾಸಕ್ಕೆ ಯೋಜಿಸುತ್ತೀದ್ದೀರಾ, ಕೊಡಗಿನ ಬೆಟ್ಟಗಳ ತಾಣವಾದ ಈ ಅಭಯಾರಣ್ಯ ಆಯ್ಕೆ ಮಾಡಿಕೊಳ್ಳಿ

Monsoon Travel 2025 : ಮುಂಗಾರು ಪ್ರವಾಸಕ್ಕೆ ಯೋಜಿಸುತ್ತೀದ್ದೀರಾ, ಕೊಡಗಿನ ಬೆಟ್ಟಗಳ ತಾಣವಾದ ಈ ಅಭಯಾರಣ್ಯ ಆಯ್ಕೆ ಮಾಡಿಕೊಳ್ಳಿ

ಕೊಡಗು ಜಿಲ್ಲೆ ಅಭಯಾರಣ್ಯಗಳ ತವರು. ಇಲ್ಲಿನ ಸೋಮವಾರಪೇಟೆ ತಾಲ್ಲೂಕಿನಲ್ಲಿರುವ ಪುಷ್ಪಗಿರಿ ಅಭಯಾರಣ್ಯವು ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ. ಎಚ್ಚರಿಕೆಯೊಂದಿಗೆ ಮಳೆಗಾಲದಲ್ಲಿ ಪ್ರವಾಸ ಕೈಗೊಂಡು ಮೈ ಮನ ಪುಳಕಗೊಳಿಸಿಕೊಳ್ಳಿ.ಚಿತ್ರಗಳು: ಅನನ್ಯಕುಮಾರ್‌, ಎಸಿಎಫ್‌ ನಾಗರಹೊಳೆ

ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯವು ಉತ್ತರ ಕೊಡಗಿನಲ್ಲಿರುವ ಅತ್ಯುತ್ತಮ ತಾಣಗಳಲ್ಲಿ ಒಂದು. ಉತ್ತರ ಕೊಡಗಿನಲ್ಲಿರುವ ಸೋಮವಾರಪೇಟೆ ತಾಲ್ಲೂಕಿನ ಹಸಿರು ಬೆಟ್ಟಗಳು, ಅರಣ್ಯ ಇರುವ ತಾಣ.
icon

(1 / 10)

(Ananya Kumar)

 ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ 102.92 ಚ.ಕಿ.ಮೀ. ಪ್ರದೇಶದಲ್ಲಿ ಹಂಚಿ ಹೋಗಿದೆ.ಈ ಅಭಯಾರಣ್ಯ ಕಡಮಕ್ಕಲ್‌ ಮೀಸಲು ಅರಣ್ಯದ ಒಂದಿಷ್ಟು ಭಾಗವನ್ನು ವ್ಯಾಪಿಸಿದೆ. ಈ ಅಭಯಾರಣ್ಯದ ಅತಿ ಎತ್ತರದ ಸ್ಥಳ ಪುಷ್ಪಗಿರಿ (ಕುಮಾರ ಪರ್ವತ) (1,172 ಮೀ.) ಈ ಅಭಯಾರಣ್ಯ ಹಾಸನ ವಿಭಾಗದ ಬಿಸಿಲೆ ಘಾಟ್‌ ಅರಣ್ಯ ಮತ್ತು ಮಂಗಳೂರು ವಿಭಾಗದ ಕುಕ್ಕೆ ಸುಬ್ರಹ್ಮಣ್ಯ ಅರಣ್ಯದೊಂದಿಗೆ ಗಡಿ ಹಂಚಿಕೊಂಡಿದೆ
icon

(2 / 10)

ಪುಷ್ಪಗಿರಿ ಭಾಗವೇ ಆಗಿರುವ ಮಾಂದಾಲ್‌ಪಟ್ಟಿಯು ಈ ಅಭಯಾರಣ್ಯವು ಹಚ್ಚ ಹಸಿರಿನಿಂದ ಮತ್ತು ದಟ್ಟವಾದ ಮರಗಳಿಂದ ಆವೃತವಾಗಿದ್ದು, ಈ ಪ್ರದೇಶದಲ್ಲಿ ಮಾತ್ರ ಕಂಡುಬರುವ ಅಪರೂಪದ ಸಸ್ಯಗಳು ಮತ್ತು ಪ್ರಾಣಿಗಳು ಮತ್ತು ಇತರ ಪಕ್ಷಿ ಪ್ರಭೇದಗಳನ್ನು ಹೊಂದಿದೆ.
icon

(3 / 10)

ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯವನ್ನು ಅನ್ವೇಷಿಸಲು ಚಳಿಗಾಲವು ಸೂಕ್ತ ಸಮಯ. ಅರಣ್ಯವು ತೆರೆದಿರುತ್ತದೆ ಮತ್ತು ಮಳೆಗಾಲ ಕೊನೆಗೊಳ್ಳುತ್ತಿದ್ದಂತೆ ತಾಪಮಾನವು ಸಾಮಾನ್ಯವಾಗುತ್ತದೆ ಮತ್ತು ಹವಾಮಾನವು ಆಹ್ಲಾದಕರವಾಗಿರುತ್ತದೆ. ನವೆಂಬರ್ ಮತ್ತು ಮಾರ್ಚ್ ನಡುವಿನ ತಿಂಗಳುಗಳು ಪ್ರವಾಸಿಗರು ಅಭಯಾರಣ್ಯವನ್ನು ಸಂಪೂರ್ಣವಾಗಿ ಅನ್ವೇಷಿಸಲು ಸೂಕ್ತ ಸಮಯ. ಈ ಸಮಯದಲ್ಲಿ ಸರಾಸರಿ ತಾಪಮಾನವು 12 ಡಿಗ್ರಿ ಸೆಲ್ಸಿಯಸ್ ನಿಂದ 24 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ.
icon

(4 / 10)

ಮಳೆಗಾಲದಲ್ಲೂ ಇಲ್ಲಿ ಪ್ರವಾಸ ಕೈಗೊಳ್ಳಬಹುದಾದರೂ ಮುನ್ನೆಚ್ಚರಿಕೆ ವಹಿಸಲೇಬೇಕಾಗುತ್ತದೆ. ಏಕೆಂದರೆ ಇದು ಕೂಡ ಉತ್ತಮ ಮಳೆಯಾಗುವ ಪ್ರದೇಶ. ಮಳೆ ವೇಳೆ ಬೆಟ್ಟ ಏರುವುದು ಅಪಾಯಕಾರಿಯೇ ಆಗುವುದರಿಂದ ಅರಣ್ಯ ಇಲಾಖೆಯೇ ಈ ಸೂಚನೆ ನೀಡುತ್ತದೆ. ಮುನ್ನೆಚ್ಚರಿಕೆ ವಹಿಸಿ ನಿಗದಿತ ಸ್ಥಳಗಳಿಗೆ ಪೂರ್ವ  ಅನುಮತಿಯೊಂದಿಗೆ ಹೋಗಬೇಕಾಗುತ್ತದೆ.
icon

(5 / 10)

ಈ ಮೀಸಲು ಅರಣ್ಯವು ಮಡಿಕೇರಿಯಿಂದ ಕೇವಲ 25 ಕಿ.ಮೀ ದೂರದಲ್ಲಿದೆ.ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯವು ಪ್ರತಿದಿನ ಬೆಳಿಗ್ಗೆ 5:30 ರಿಂದ ಸಂಜೆ 5:00 ರವರೆಗೆ ಪ್ರವಾಸಿಗರಿಗೆ ತೆರೆದಿರುತ್ತದೆ.ಇದರಿಂದ ನೀವು ಸೂರ್ಯೋದಯಕ್ಕೆ ಮುಂಚಿತವಾಗಿ ಬೆಳಿಗ್ಗೆ ಹಿಂತಿರುಗಬಹುದು ರಾತ್ರಿಯಿಡೀ ತಂಗಲು ಯೋಜಿಸುತ್ತಿರುವವರು, ಅಭಯಾರಣ್ಯದ ಬಳಿ  ಸಾಕಷ್ಟು ಹೋಂಸ್ಟೇ, ರೆಸಾರ್ಟ್‌ ಇದ್ದು ವಾಸ್ತವ್ಯ ಮಾಡಬಹುದು,
icon

(6 / 10)

ಅದ್ಭುತ ಶಿಖರಗಳ ಜೊತೆಗೆ ಹೇರಳವಾದ ಸಸ್ಯ ಮತ್ತು ಪ್ರಾಣಿಗಳನ್ನು ಒಳಗೊಂಡಿರುವ ತಾಣವಾಗಿ ವ್ಯಾಪಕವಾಗಿ ಪ್ರಸಿದ್ಧವಾಗಿರುವ ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯವು ಕರ್ನಾಟಕದ 21 ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾಗಿದೆ, ಇದು ಪ್ರಪಂಚದ ವಿವಿಧ ಭಾಗಗಳಿಂದ ಅಳಿವಿನಂಚಿನಲ್ಲಿರುವ ಪಕ್ಷಿ ಪ್ರಭೇದಗಳನ್ನು ಇಲ್ಲಿ ಕಾಣಬಹುದು,.
icon

(7 / 10)

ಚುಕ್ಕೆ ಜಿಂಕೆ, ಕಾಡು ಹಂದಿ, ದೈತ್ಯ ಅಳಿಲು, ಕಾಡೆಮ್ಮೆ ಸಾಂಬಾರ್, ಆನೆಯಂತಹ ಪ್ರಾಣಿಗಳು ಮಾತ್ರವಲ್ಲದೇ ಈ ಅಭಯಾರಣ್ಯವು ಭಾರತದ ಅಪರೂಪದ ಪಕ್ಷಿ ಪ್ರಭೇದಗಳಿಗೆ ಪುಷ್ಪಗಿರಿ ನೆಲೆಯಾಗಿದೆ,
icon

(8 / 10)

ಕರ್ನಾಟಕದ ಎರಡನೇ ಅತಿ ಎತ್ತರದ ಶಿಖರವಾದ ಕುಮಾರ ಪರ್ವತವು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ನಿಮ್ಮ ಭೇಟಿಯ ಹೆಚ್ಚಿನ ಖುಷಿ ಪಡೆಯಲು ಈ ಅಭಯಾರಣ್ಯದಲ್ಲಿ ಮಲ್ಲಳ್ಳಿ ಜಲಪಾತ ಮತ್ತು ಮಾಂದಲಪಟ್ಟಿ ಶಿಖರವನ್ನು ಸಹ ನೀವು ನೋಡಬಹುದು.
icon

(9 / 10)

ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯಕ್ಕೆ ಭೇಟಿ ನೀಡುವ ಪ್ರವಾಸಿಗರು ಇದರ ಸಾಹಸಮಯ ಚಾರಣ ಹಾದಿಗಳು ಮತ್ತು ನೈಸರ್ಗಿಕ ಆಕರ್ಷಣೆಗಳಿಗಾಗಿ ಇದನ್ನು ಇಷ್ಟಪಡುತ್ತಾರೆ. ನಿಸ್ಸಂದೇಹವಾಗಿಯೂ ಕೂರ್ಗ್ ಚಾರಣಿಗರ ನೆಚ್ಚಿನ ತಾಣವಾಗಿದೆ ಮತ್ತು ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯದಂತಹ ಸ್ಥಳಗಳು ಇದನ್ನು ಇನ್ನಷ್ಟು ಆಕರ್ಷಕವಾಗಿಸುತ್ತವೆ ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿ.
icon

(10 / 10)

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು