300ಕ್ಕೂ ಹೆಚ್ಚು ಡಾಟ್ ಬಾಲ್ ಎಸೆದ ಬುಮ್ರಾ; ವಿಶ್ವಕಪ್ 2023ರಲ್ಲಿ ರನ್ ಸೋರಲು ಬಿಡದ ಅಗ್ರ ಐವರು ಬೌಲರ್‌ಗಳು
- Most Dot Balls In World Cup 2023: ವಿಶ್ವಕಪ್ 2023ರ ಲೀಗ್ ಹಂತದ ಪಂದ್ಯಗಳು ಮುಗಿದಿದ್ದು, ಪ್ರಸ್ತುತ ವಿಶ್ವಕಪ್‌ನಲ್ಲಿ ಹೆಚ್ಚು ಡಾಟ್ ಬಾಲ್‌ಗಳನ್ನು ಎಸೆದ ಬೌಲರ್‌ಗಳು ಯಾರ್ಯಾರು ಎಂಬುದನ್ನು ನೋಡಿ.
- Most Dot Balls In World Cup 2023: ವಿಶ್ವಕಪ್ 2023ರ ಲೀಗ್ ಹಂತದ ಪಂದ್ಯಗಳು ಮುಗಿದಿದ್ದು, ಪ್ರಸ್ತುತ ವಿಶ್ವಕಪ್‌ನಲ್ಲಿ ಹೆಚ್ಚು ಡಾಟ್ ಬಾಲ್‌ಗಳನ್ನು ಎಸೆದ ಬೌಲರ್‌ಗಳು ಯಾರ್ಯಾರು ಎಂಬುದನ್ನು ನೋಡಿ.
(1 / 5)
ಚಿನ್ನಸ್ವಾಮಿ ಮೈದಾನದಲ್ಲಿ ಭಾನುವಾರ ನಡೆದ ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ 1 ಮೇಡನ್ ಸಹಿತ 9 ಓವರ್‌ಗಳನ್ನು ಎಸೆದರು. ಅದರಲ್ಲಿ 33 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು. ಬುಮ್ರಾ ಎಸೆದ ಡಾಟ್ ಬಾಲ್‌ಗಳ ಸಂಖ್ಯೆ 35. ಓವರ್‌ಗಳ ಲೆಕ್ಕದಲ್ಲಿ ಡಾಟ್ ಬಾಲ್‌ಗಳ ಸಂಖ್ಯೆಯನ್ನು ಲೆಕ್ಕ ಹಾಕಿದರೆ, ಬುಮ್ರಾ 9 ಓವರ್‌ಗಳಲ್ಲಿ ಸುಮಾರು 6 ಓವರ್‌ಗಳಲ್ಲಿ ಒಂದೇ ಒಂದು ರನ್ ಬಿಟ್ಟುಕೊಟ್ಟಿಲ್ಲ ಎಂದು ಹೇಳಬಹುದು. ಗಮನಾರ್ಹ ಅಂಶವೆಂದರೆ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ 35 ಡಾಟ್ ಬಾಲ್ ಎಸೆಯುವ ಮೂಲಕ ಬುಮ್ರಾ ಪ್ರಸಕ್ತ ವಿಶ್ವಕಪ್‌ನಲ್ಲಿ ದಾಖಲೆ ನಿರ್ಮಿಸಿದ್ದಾರೆ.(ANI)
(2 / 5)
ಪ್ರಸಕ್ತ ವಿಶ್ವಕಪ್‌ನಲ್ಲಿ 300 ಡಾಟ್ ಬಾಲ್‌ಗಳ ಮೈಲಿಗಲ್ಲು ದಾಟಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಬುಮ್ರಾ ಪಾತ್ರರಾಗಿದ್ದಾರೆ. 2023ರ ವಿಶ್ವಕಪ್‌ನ ಕೇವಲ 9 ಪಂದ್ಯಗಳಲ್ಲಿ ಜಸ್ಪ್ರೀತ್ 72.5 ಓವರ್‌ಗಳನ್ನು ಬೌಲಿಂಗ್ ಮಾಡಿದ್ದಾರೆ. ಅದರಲ್ಲಿ 266 ರನ್‌ಗಳನ್ನು ಬಿಟ್ಟುಕೊಟ್ಟು 17 ವಿಕೆಟ್ ಪಡೆದಿದ್ದಾರೆ. ಬುಮ್ರಾ ಪ್ರತಿ ಓವರ್‌ಗೆ 3.65 (ಎಕಾನಮಿ) ರನ್‌ಗಳಂತೆ ಮಾತ್ರ ನೀಡಿದ್ದಾರೆ. ಅಂದರೆ ಒಟ್ಟು 9 ಪಂದ್ಯಗಳಲ್ಲಿ 303 ಡಾಟ್ ಬಾಲ್‌ಗಳನ್ನು ಎಸೆದಿದ್ದಾರೆ.(AP)
(3 / 5)
ಪ್ರಸಕ್ತ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಡಾಟ್ ಬಾಲ್‌ಗಳನ್ನು ಎಸೆದ ಬೌಲರ್‌ಗಳ ಪಟ್ಟಿಯಲ್ಲಿ ನ್ಯೂಜಿಲ್ಯಾಂಡ್‌ನ ಟ್ರೆಂಟ್ ಬೋಲ್ಟ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು 81 ಓವರ್‌ಗಳನ್ನು ಬೌಲ್ ಮಾಡಿದ್ದು, 9 ಪಂದ್ಯಗಳಲ್ಲಿ 290 ಡಾಟ್ ಬಾಲ್‌ಗಳನ್ನು ಎಸೆದಿದ್ದಾರೆ. 6 ಮೇಡನ್ ಸೇರಿದಂತೆ 418 ರನ್ ಬಿಟ್ಟುಕೊಟ್ಟು ಟೂರ್ನಿಯಲ್ಲಿ 13 ವಿಕೆಟ್ ಪಡೆದಿದ್ದಾರೆ.(PTI)
(4 / 5)
ಪ್ರಸಕ್ತ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಎಸೆದ ಬೌಲರ್‌ಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ ಮೂರನೇ ಸ್ಥಾನದಲ್ಲಿದ್ದಾರೆ. ಅವರು 9 ಪಂದ್ಯಗಳಲ್ಲಿ 79 ಓವರ್ ಬೌಲಿಂಗ್ ಮಾಡಿದ್ದಾರೆ. 282 ಡಾಟ್ ಬಾಲ್ ಎಸೆದಿದ್ದಾರೆ. 346 ರನ್ ನೀಡಿ 14 ವಿಕೆಟ್ ಪಡೆದಿದ್ದಾರೆ.(AFP)
(5 / 5)
ಪಾಕಿಸ್ತಾನದ ಸ್ಟಾರ್ ವೇಗಿ ಶಾಹೀನ್ ಅಫ್ರಿದಿ ಪ್ರಸ್ತುತ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು 9 ಪಂದ್ಯಗಳಲ್ಲಿ 273 ಡಾಟ್ ಬಾಲ್‌ಗಳನ್ನು ಎಸೆದಿದ್ದಾರೆ. ಅತ್ತ ಆಸ್ಟ್ರೇಲಿಯಾ ವೇಗಿ ಜೋಶ್ ಹೇಜಲ್‌ವುಡ್ ಸೆಮಿಫೈನಲ್ ಹಂತದಲ್ಲಿ ಅಫ್ರಿದಿಯನ್ನು ಹಿಂದಿಕ್ಕುವ ಅವಕಾಶ ಹೊಂದಿದ್ದಾರೆ. ಆಸೀಸ್ ಸ್ಟಾರ್ ಪ್ರಸಕ್ತ ವಿಶ್ವಕಪ್‌ನಲ್ಲಿ ಇದುವರೆಗೆ 273 ಡಾಟ್ ಬಾಲ್‌ಗಳನ್ನು ಎಸೆದಿದ್ದಾರೆ.(ANI)
ಇತರ ಗ್ಯಾಲರಿಗಳು