ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅಧಿಕ ಶತಕ ಸಿಡಿಸಿದ ಭಾರತೀಯರು; ವಿಜಯ್ ಹಜಾರೆ ದಾಖಲೆ ಮುರಿದ ಪೂಜಾರ
- Most First Class Centuries For India: ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತ್ಯಧಿಕ ಅತಿಹೆಚ್ಚು ಶತಕ ಸಿಡಿಸಿದ ಭಾರತದ ಆಟಗಾರರ ಪೈಕಿ ಚೇತೇಶ್ವರ್ ಪೂಜಾರ ನಾಲ್ಕನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಪ್ರಸಕ್ತ ರಣಜಿಯಲ್ಲಿ ಶತಕ ಸಿಡಿಸಿದ ನಂತರ ಈ ಸಾಧನೆ ಮಾಡಿದ್ದಾರೆ.
- Most First Class Centuries For India: ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತ್ಯಧಿಕ ಅತಿಹೆಚ್ಚು ಶತಕ ಸಿಡಿಸಿದ ಭಾರತದ ಆಟಗಾರರ ಪೈಕಿ ಚೇತೇಶ್ವರ್ ಪೂಜಾರ ನಾಲ್ಕನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಪ್ರಸಕ್ತ ರಣಜಿಯಲ್ಲಿ ಶತಕ ಸಿಡಿಸಿದ ನಂತರ ಈ ಸಾಧನೆ ಮಾಡಿದ್ದಾರೆ.
(1 / 8)
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತ್ಯಧಿಕ ಅತಿಹೆಚ್ಚು ಶತಕ ಸಿಡಿಸಿದ ಭಾರತದ ಆಟಗಾರರ ಪೈಕಿ ಚೇತೇಶ್ವರ್ ಪೂಜಾರ ನಾಲ್ಕನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಪ್ರಸಕ್ತ ರಣಜಿಯಲ್ಲಿ ಶತಕ ಸಿಡಿಸಿದ ನಂತರ ಈ ಸಾಧನೆ ಮಾಡಿದ್ದಾರೆ.
(2 / 8)
2024ರ ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಸೌರಾಷ್ಟ್ರದ ಚೇತೇಶ್ವರ ಪೂಜಾರ ಶತಕ ಸಿಡಿಸಿದರು. ಆ ಮೂಲಕ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡರು. ಭಾರತ ಕ್ರಿಕೆಟ್ನ ದಿಗ್ಗಜ ಆಟಗಾರ ವಿಜಯ್ ಹಜಾರೆ ಅವರನ್ನು ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಸೌರಾಷ್ಟ್ರದ ಸ್ಟಾರ್ ಕ್ರಿಕೆಟಿಗ ಹಿಂದಿಕ್ಕಿದ್ದಾರೆ.
(3 / 8)
ಜಾರ್ಖಂಡ್ ವಿರುದ್ಧದ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಪೂಜಾರ 162 ಎಸೆತಗಳಲ್ಲಿ 10 ಬೌಂಡರಿಗಳ ಸಹಾಯದಿಂದ ತಮ್ಮ ವೈಯಕ್ತಿಕ ಶತಕ ಪೂರೈಸಿದರು. 2ನೇ ದಿನದ ಅಂತ್ಯಕ್ಕೆ ಅವರು 157 ರನ್ಗಳ ಅಜೇಯ ಇನ್ನಿಂಗ್ಸ್ ಕಟ್ಟಿದ್ದರು. ಚೇತೇಶ್ವರ್ 239 ಎಸೆತಗಳ ಇನ್ನಿಂಗ್ಸ್ನಲ್ಲಿ 19 ಬೌಂಡರಿ ಬಾರಿಸಿದ್ದರು. ಇದೀಗ ಅವರು ದ್ವಿಶತಕ ಸಿಡಿಸಿದ್ದಾರೆ.
(4 / 8)
ಇದು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಪೂಜಾರ ಅವರ 61ನೇ ಶತಕವಾಗಿದೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅಧಿಕ ಶತಕ ಗಳಿಸಿದ ಭಾರತೀಯರಲ್ಲಿ ಚೇತೇಶ್ವರ್ ವಿಜಯ್ ಹಜಾರೆ ಅವರನ್ನು ಹಿಂದಿಕ್ಕಿದರು. ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಗಣ್ಯರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದಾರೆ.
(5 / 8)
ಚೇತೇಶ್ವರ ಪೂಜಾರ ಅವರು 258 ಪ್ರಥಮ ದರ್ಜೆ ಪಂದ್ಯಗಳ 426 ಇನ್ನಿಂಗ್ಸ್ಗಳಲ್ಲಿ 61 ಶತಕಗಳನ್ನು ಗಳಿಸಿದ್ದಾರೆ. ವಿಜಯ್ ಹಜಾರೆ ಅವರು 238 ಪ್ರಥಮ ದರ್ಜೆ ಪಂದ್ಯಗಳ 367 ಇನ್ನಿಂಗ್ಸ್ಗಳಲ್ಲಿ 60 ಶತಕಗಳನ್ನು ಗಳಿಸಿದ್ದಾರೆ.
(6 / 8)
ಸಚಿನ್ ತೆಂಡೂಲ್ಕರ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಭಾರತೀಯರಲ್ಲಿ ಜಂಟಿ-ಅತಿ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ. 310 ಪ್ರಥಮ ದರ್ಜೆ ಪಂದ್ಯಗಳ 490 ಇನ್ನಿಂಗ್ಸ್ಗಳಲ್ಲಿ 81 ಶತಕಗಳನ್ನು ಗಳಿಸಿದ್ದಾರೆ.
(7 / 8)
ಸಚಿನ್ ಅವರಂತೆಯೇ ಸುನಿಲ್ ಗವಾಸ್ಕರ್ ಕೂಡ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 81 ಶತಕ ಗಳಿಸಿದ್ದಾರೆ. ಅವರು 348 ಪಂದ್ಯಗಳ 563 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಈ ಸಾಧನೆ ಮಾಡಿದರು.
ಇತರ ಗ್ಯಾಲರಿಗಳು