Most runs: 2024ರಲ್ಲಿ ಅತಿ ಹೆಚ್ಚು ಟಿ20ಐ ರನ್ ಕಲೆ ಹಾಕಿದ ಟಾಪ್-5 ಭಾರತದ ಆಟಗಾರರು; ಸೂರ್ಯಕುಮಾರ್ಗಿಲ್ಲ ಅಗ್ರಸ್ಥಾನ
- 2024ರ ಕ್ಯಾಲೆಂಡರ್ ವರ್ಷ ಮುಕ್ತಾಯಕ್ಕೆ ದಿನಗಣನೆ ಶುರುವಾಗಿದೆ. ಈ ವರ್ಷ ಭಾರತ ತಂಡ ಯಾವುದೇ ಟಿ20 ಪಂದ್ಯಗಳನ್ನು ಆಡುವುದಿಲ್ಲ. ಇದೀಗ ಟೀಮ್ ಇಂಡಿಯಾ ಪರ ಅತಿ ಹೆಚ್ಚು ಟಿ20ಐ ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿ ಇಲ್ಲಿದೆ.
- 2024ರ ಕ್ಯಾಲೆಂಡರ್ ವರ್ಷ ಮುಕ್ತಾಯಕ್ಕೆ ದಿನಗಣನೆ ಶುರುವಾಗಿದೆ. ಈ ವರ್ಷ ಭಾರತ ತಂಡ ಯಾವುದೇ ಟಿ20 ಪಂದ್ಯಗಳನ್ನು ಆಡುವುದಿಲ್ಲ. ಇದೀಗ ಟೀಮ್ ಇಂಡಿಯಾ ಪರ ಅತಿ ಹೆಚ್ಚು ಟಿ20ಐ ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿ ಇಲ್ಲಿದೆ.
(1 / 6)
2024ರ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಟಾಪ್ 5ರಲ್ಲಿ ಸ್ಥಾನ ಪಡೆದಿದ್ದಾರೆ.
(Surjeet Yadav)(2 / 6)
ದಕ್ಷಿಣ ಆಫ್ರಿಕಾ ವಿರುದ್ಧದ ಆಡಿದ ಟಿ20ಐ ಸರಣಿಯಲ್ಲಿ ಭರ್ಜರಿ ಎರಡು ಶತಕ ಸಿಡಿಸಿದ ತಿಲಕ್ ವರ್ಮಾ ಅಗ್ರ-5ನೇ ಸ್ಥಾನ ಪಡೆದಿದ್ದಾರೆ. ತಿಲಕ್ ಈ ವರ್ಷ 102 ಸರಾಸರಿಯಲ್ಲಿ 306 ರನ್ ಗಳಿಸಿದ್ದಾರೆ. 187.73ರಲ್ಲಿ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ.
(AFP)(3 / 6)
ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 352 ರನ್ ಗಳಿಸಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 17 ಪಂದ್ಯಗಳ ಪೈಕಿ 14 ಇನ್ನಿಂಗ್ಸ್ಗಳಲ್ಲಿ ಕಣಕ್ಕಿಳಿದಿದ್ದು, 44ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.
(AP)(4 / 6)
ಟಿ20 ವಿಶ್ವಕಪ್ ನಂತರ ಟಿ20ಐ ಕ್ರಿಕೆಟ್ನಿಂದ ನಿವೃತ್ತರಾಗಿರುವ ರೋಹಿತ್ ಶರ್ಮಾ ಅವರು ಟಾಪ್-5 ನಲ್ಲಿದ್ದಾರೆ. 2024ರಲ್ಲಿ ಭಾರತದ ಮಾಜಿ ನಾಯಕ 11 ಪಂದ್ಯಗಳಲ್ಲಿ 42ರ ಸರಾಸರಿಯಲ್ಲಿ 378 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.
(REUTERS)(5 / 6)
ಈ ಪಟ್ಟಿಯಲ್ಲಿ ಭಾರತ ತಂಡದ ಟಿ20ಐ ನಾಯಕ ಸೂರ್ಯಕುಮಾರ್ ಯಾದವ್ 429 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲಿಲ್ಲ. 17 ಇನ್ನಿಂಗ್ಸ್ಗಳಲ್ಲಿ 4 ಅರ್ಧಶತಕ ಸಹಿತ 429 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 26.81.
(AP)ಇತರ ಗ್ಯಾಲರಿಗಳು