Varun Chakravarthy: ಅತಿ ಹೆಚ್ಚು ವಿಕೆಟ್, ಸತತ 2 ಸರಣಿಗಳಲ್ಲಿ ಒಂದೇ ದಾಖಲೆ ಮುರಿದ ವರುಣ್ ಚಕ್ರವರ್ತಿ
- Varun Creates Huge Record: ದಕ್ಷಿಣ ಆಫ್ರಿಕಾ ವಿರುದ್ಧದ ಐದನೇ ಟಿ20ಐ ಪಂದ್ಯದಲ್ಲಿ ವರುಣ್ ಚಕ್ರವರ್ತಿ ಹೊಸ ದಾಖಲೆ ಬರೆದಿದ್ದಾರೆ. ಕಳೆದ ಎರಡು ಸರಣಿಗಳಲ್ಲಿ ತನ್ನದೇ ದಾಖಲೆ ಮುರಿದು ಮತ್ತೊಂದು ಸಾಧನೆ ಮಾಡಿದ್ದಾರೆ.
- Varun Creates Huge Record: ದಕ್ಷಿಣ ಆಫ್ರಿಕಾ ವಿರುದ್ಧದ ಐದನೇ ಟಿ20ಐ ಪಂದ್ಯದಲ್ಲಿ ವರುಣ್ ಚಕ್ರವರ್ತಿ ಹೊಸ ದಾಖಲೆ ಬರೆದಿದ್ದಾರೆ. ಕಳೆದ ಎರಡು ಸರಣಿಗಳಲ್ಲಿ ತನ್ನದೇ ದಾಖಲೆ ಮುರಿದು ಮತ್ತೊಂದು ಸಾಧನೆ ಮಾಡಿದ್ದಾರೆ.
(1 / 8)
ಕಳೆದ ವರ್ಷ ಸೌತ್ ಆಫ್ರಿಕಾದಲ್ಲಿ ನಡೆದಿದ್ದ ನಾಲ್ಕು ಟಿ20 ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿ ದಾಖಲೆ ನಿರ್ಮಿಸಿದ್ದ ಸ್ಪಿನ್ನರ್ ವರುಣ್ ಚಕ್ರವರ್ತಿ, ಈಗ ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತನ್ನದೇ ದಾಖಲೆ ಮುರಿದಿರುವ ಜೊತೆಗೆ ವಿಶೇಷ ಸಾಧನೆಯನ್ನೂ ಮಾಡಿದ್ದಾರೆ.
(2 / 8)
ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟಿ20ಐ ಪಂದ್ಯದಲ್ಲೂ ಕೈಚಳಕ ಮುಂದುವರೆಸಿದ ವರುಣ್, ಎಸೆದ 2 ಓವರ್ಗಳ ಬೌಲಿಂಗ್ನಲ್ಲಿ 25 ರನ್ ನೀಡಿ 2 ವಿಕೆಟ್ ಕಿತ್ತರು. ಒಟ್ಟಾರೆ ಸರಣಿಯಲ್ಲಿ 14 ವಿಕೆಟ್ ಉರುಳಿಸಿ, ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಆ ಮೂಲಕ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡರು.
(3 / 8)
ಅಂತಿಮ ಟಿ20ಐ ಪಂದ್ಯದಲ್ಲಿ ವರುಣ್ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅವರನ್ನು ಔಟ್ ಮಾಡುವ ಮೂಲಕ ವೈಯಕ್ತಿಕ ದಾಖಲೆ ನಿರ್ಮಿಸಿದರು. ಇದರೊಂದಿಗೆ ತಮ್ಮದೇ ಆದ ಹಳೆಯ ದಾಖಲೆಯನ್ನು ಹಿಂದಿಕ್ಕಿದರು. ಲಿಯಾಮ್ ಲಿವಿಂಗ್ಸ್ಟನ್ ಅವರನ್ನು ಔಟ್ ಮಾಡಿದ್ದು ಅವರ ಎರಡನೇ ವಿಕೆಟ್.
(4 / 8)
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ 14 ವಿಕೆಟ್ ಪಡೆದರು. ಇದು ದ್ವಿಪಕ್ಷೀಯ ಟಿ20ಐ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಸಾರ್ವಕಾಲಿಕ ದಾಖಲೆಯಾಗಿದೆ. ಅಂದರೆ, ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಬೇರೆ ಯಾವುದೇ ಭಾರತೀಯ ಬೌಲರ್ ಇಷ್ಟು ವಿಕೆಟ್ ಪಡೆದಿಲ್ಲ.
(5 / 8)
ಈ ಹಿಂದೆ ಇದೇ ದಾಖಲೆ ವರುಣ್ ಚಕ್ರವರ್ತಿ ಹೆಸರಿನಲ್ಲೇ. ದಕ್ಷಿಣ ಆಫ್ರಿಕಾ ವಿರುದ್ಧದ 4 ಪಂದ್ಯಗಳಲ್ಲಿ ಅವರು 12 ವಿಕೆಟ್ ಪಡೆದಿದ್ದರು. ಇದರೊಂದಿಗೆ ದ್ವಿಪಕ್ಷೀಯ ಟಿ20ಐ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ದಾಖಲೆ ಬರೆದಿದ್ದರು.
(6 / 8)
ವರುಣ್ ಸತತ ಎರಡು ಸರಣಿಗಳಲ್ಲಿ ಒಂದೇ ದಾಖಲೆಯನ್ನು ಎರಡು ಬಾರಿ ಮುರಿಯುವ ಮೂಲಕ ಗಮನ ಸೆಳೆದಿದ್ದಾರೆ. ಸರಣಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ ವರುಣ್ ಮೊದಲ ಎರಡು ಸ್ಥಾನ ಪಡೆದಿದ್ದರೆ, ನಂತರದ (3 ಮತ್ತು 4ನೇ) ಸ್ಥಾನದಲ್ಲಿ ಆರ್ ಅಶ್ವಿನ್ (11, 9 ವಿಕೆಟ್) ಇದ್ದಾರೆ. ರವಿ ಬಿಷ್ಣೋಯ್ (9) ಐದನೇ ಸ್ಥಾನದಲ್ಲಿದ್ದಾರೆ.
(AFP)(7 / 8)
ವರುಣ್ ಮೊದಲ ಟಿ20ಐ ಪಂದ್ಯದಲ್ಲಿ 23 ರನ್ಗಳಿಗೆ 3 ವಿಕೆಟ್, ಎರಡನೇ ಟಿ20ಐ ಪಂದ್ಯದಲ್ಲಿ 38 ರನ್ಗೆ 2 ವಿಕೆಟ್, ಮೂರನೇ ಟಿ20 ಪಂದ್ಯದಲ್ಲಿ 24 ರನ್ಗೆ 5 ವಿಕೆಟ್, 4ನೇ ಟಿ20ಐನಲ್ಲಿ ವರುಣ್ 28 ರನ್ಗೆ 2 ವಿಕೆಟ್ ಪಡೆದರು. ಇದೀಗ ಕೊನೆಯ ಪಂದ್ಯದಲ್ಲೂ 2 ವಿಕೆಟ್ ಕಿತ್ತರು.
(REUTERS)ಇತರ ಗ್ಯಾಲರಿಗಳು