ಅಪ್ಪ ಸಾಲ ಮಾಡಿ ಬ್ಯಾಟ್ ಕೊಡ್ಸಿದ್ರೆ, ಅಮ್ಮ ಚಿನ್ನದ ಸರ ಮಾರಿ ಬ್ಯಾಟ್ ಕಿಟ್ ಕೊಡ್ಸಿದ್ರು; ಧ್ರುವ್ ಜುರೆಲ್ ಹೋರಾಟದ ಕಥೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಪ್ಪ ಸಾಲ ಮಾಡಿ ಬ್ಯಾಟ್ ಕೊಡ್ಸಿದ್ರೆ, ಅಮ್ಮ ಚಿನ್ನದ ಸರ ಮಾರಿ ಬ್ಯಾಟ್ ಕಿಟ್ ಕೊಡ್ಸಿದ್ರು; ಧ್ರುವ್ ಜುರೆಲ್ ಹೋರಾಟದ ಕಥೆ

ಅಪ್ಪ ಸಾಲ ಮಾಡಿ ಬ್ಯಾಟ್ ಕೊಡ್ಸಿದ್ರೆ, ಅಮ್ಮ ಚಿನ್ನದ ಸರ ಮಾರಿ ಬ್ಯಾಟ್ ಕಿಟ್ ಕೊಡ್ಸಿದ್ರು; ಧ್ರುವ್ ಜುರೆಲ್ ಹೋರಾಟದ ಕಥೆ

  • Dhruv Jurel: ಇಂಗ್ಲೆಂಡ್ ಟೆಸ್ಟ್ ಸರಣಿಗೆ ಆಯ್ಕೆಯಾದ ಉತ್ತರ ಪ್ರದೇಶದ ಧ್ರುವ್ ಜುರೆಲ್, ಬೆಳೆದು ಬಂದ ಹಾದಿ ರೋಚಕವೇ ಸರಿ. ರಾಷ್ಟ್ರೀಯ ತಂಡದಲ್ಲಿ ತನ್ನ ಸಾಮರ್ಥ್ಯ ನಿರೂಪಿಸಿ ಸಾಧನೆಯ ಶಿಖರ ಏರಲು ಸಜ್ಜಾಗಿದ್ದಾರೆ. ನಾವೀಗ ಯುವ ಆಟಗಾರ ಬೆಳೆದು ಬಂದ ಹಾದಿ ಹೇಗಿದೆ ಎಂಬುದನ್ನ ನೋಡೋಣ.

ಜನವರಿ 25ರಿಂದ ಆರಂಭವಾಗುವ 5 ಪಂದ್ಯಗಳ ಸರಣಿಯ ಮೊದಲ ಎರಡು ಟೆಸ್ಟ್​ಗಳಿಗೆ ಭಾರತ ತಂಡವನ್ನು ಜನವರಿ 12ರಂದು ಬಿಸಿಸಿಐ ಪ್ರಕಟಿಸಿದೆ. ಕೆಲವರು ಗಾಯದಿಂದ ಹೊರ ಬಿದ್ದರೆ, ಇನ್ನೂ ಹಲವರಿಗೆ ಕೊಕ್​ ನೀಡಲಾಗಿದೆ. ಸರಣಿಗೆ ಅಚ್ಚರಿ ಆಯ್ಕೆಯೊಂದು ನಡೆದಿದೆ.
icon

(1 / 10)

ಧ್ರುವ್ ಜುರೆಲ್. 22 ವರ್ಷದ ಆಟಗಾರ. ವಿಕೆಟ್ ಕೀಪರ್​ ಕಮ್ ಬ್ಯಾಟ್ಸ್​​ಮನ್​. ಈತನೇ ಅಚ್ಚರಿ ಆಯ್ಕೆಯಾಗಿರುವುದು. ಹೌದು, ಇಶಾನ್​ ಕಿಶನ್​ ಅವರನ್ನೇ ಕೈಬಿಟ್ಟು ಜುರೆಲ್​ಗೆ ಅವಕಾಶ ನೀಡಿದ್ದು ಅಚ್ಚರಿಯೇ ಸರಿ. ತಮ್ಮ ಜೀವನದಲ್ಲಿ ಹೊಸ ಇನಿಂಗ್ಸ್​ ಆರಂಭಿಸುವ ನಿರೀಕ್ಷೆಯಲ್ಲಿರುವ ಜುರೆಲ್, ರಾಷ್ಟ್ರೀಯ ತಂಡದಲ್ಲಿ ತನ್ನ ಸಾಮರ್ಥ್ಯ ನಿರೂಪಿಸಿ ಸಾಧನೆಯ ಶಿಖರ ಏರಲು ಸಜ್ಜಾಗಿದ್ದಾರೆ. ನಾವೀಗ ಉತ್ತರ ಪ್ರದೇಶದ ಈತ ಬೆಳೆದು ಬಂದ ಹಾದಿ ಹೇಗಿದೆ ಎಂಬುದನ್ನ ನೋಡೋಣ.
icon

(2 / 10)

ಜನಿಸಿದ್ದು 2001ರ ಜನವರಿ 21ರಂದು ಉತ್ತರ ಪ್ರದೇಶದಲ್ಲಿ. ಈತ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಆಟಗಾರನಲ್ಲ. ಕ್ರಿಕೆಟ್ ಹಿನ್ನೆಲೆ ಉಳ್ಳವನಲ್ಲ. ತನ್ನ ಕಠಿಣ ಪರಿಶ್ರಮದಿಂದ ಬೆಳೆದು ಬಂದ ಆಟಗಾರ. ಜುರೆಲ್ ಕ್ರಿಕೆಟ್​ ಜರ್ನಿ ತುಂಬಾ ರೋಚಕವಾಗಿದೆ. ಕಡು ಬಡತನದ ಹಿನ್ನೆಲೆಯಿಂದ ಬಂದ ಯುವ ಆಟಗಾರ ಸ್ಫೂರ್ತಿದಾಯಕ. 
icon

(3 / 10)

ಆರ್ಮಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.ರಜೆಗಳಲ್ಲಿ ಏಕಲವ್ಯ ಸ್ಟೇಡಿಯಂಗಳಲ್ಲಿ ಕ್ರಿಕೆಟ್ ಶಿಬಿರಕ್ಕೆ ಸೇರಿದ್ದ ಜುರೆಲ್, ಅಪ್ಪನಿಗೆ ಗೊತ್ತಾಗದಂತೆ ಫಾರ್ಮ್​ ಭರ್ತಿ ಮಾಡಿದ್ದ. ತಂದೆ ನೀಮ್ ಸಿಂಗ್ ಜುರೆಲ್ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದು, ಅವರಂತೆ ಮಗ ಸೈನ್ಯಕ್ಕೆ ಸೇರಬೇಕು. ಅದು ಸಾಧ್ಯವಾಗದಿದ್ದರೆ, ಯಾವುದಾದರೂ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಬೇಕೆಂದು ಬಯಸಿದ್ದ.
icon

(4 / 10)

ಆದರೆ ಕ್ರಿಕೆಟ್ ಸೇರುವ ಬಗ್ಗೆ ಅಪ್ಪನ ಬಳಿ ಹೇಳಿದರೆ ಹೆದುತ್ತಾರೆ. ಹಾಗಾಗಿ ಹೇಗೋ ಧೈರ್ಯ ಮಾಡಿ ಅಮ್ಮನಿಗೆ ಹೇಳಿದ್ದ. ಕ್ರಿಕೆಟ್​ ಬ್ಯಾಟ್ ಕೊಡಿಸೋಕೆ ಅಪ್ಪನಿಗೆ ಹೇಳುವಂತೆ ಕೇಳಿದ್ದ. ಅಮ್ಮ ಇದನ್ನು ಅಪ್ಪನ ಬಳಿ ಹೇಳಿದ್ದರು. ಆದರೆ ಇದು ಅಪ್ಪನಿಗೆ ಇಷ್ಟವಿರಲಿಲ್ಲ. ಬೈದಿದ್ದರು. ನನ್ನ ಕನಸು ಮಗ ಈಡೇರಿಸುತ್ತಿಲ್ಲವಲ್ಲ ಎನ್ನುವ ಕೊರಗು ಅವರಿಗೆ ಕಾಡುವಂತೆ ಮಾಡಿತ್ತು.
icon

(5 / 10)

ಬೈದ ಅಪ್ಪ ಒಲ್ಲದ ಮನಸ್ಸಿನಿಂದಲೇ ಸಾಲ ಮಾಡಿ 800 ಕೊಟ್ಟು ಬ್ಯಾಟ್ ಕೊಡಿಸಿದ್ದರು. ಕೆಲವು ದಿನಗಳ ನಂತರ ಕ್ರಿಕೆಟ್ ಕಿಟ್ ಬೇಕೆಂದು ಬೇಡಿಕೆ ಇಟ್ಟಿದ್ದ ಜುರೆಲ್. ಅದಕ್ಕೆ 7 ರಿಂದ 8 ಸಾವಿರ ಬೇಕಿತ್ತು. ಆದರೆ ತಂದೆ ಅಷ್ಟೊಂದು ಹಣವಿಲ್ಲವೆಂದು ಮತ್ತೆ ಕೋಪಗೊಂಡಿದ್ದರು. ಮನೆಯ ಪರಿಸ್ಥಿತಿ ಮತ್ತು ಅಪ್ಪನ ಬೈಗುಳಗಳನ್ನು ಕೇಳಲಾಗದೆ ಮನೆಯಿಂದ ಓಡಿ ಹೋಗೋಣ ಎಂದು ಜುರೆಲ್ ನಿರ್ಧರಿಸಿದ್ದ. ಕ್ರಿಕೆಟ್ ಆಡಲು ಅವಕಾಶ ನೀಡದಿದ್ದರೆ ಮನೆ ಬಿಟ್ಟು ಹೋಗುವುದಾಗಿ ಹಠ ಮಾಡಿದ್ದ.
icon

(6 / 10)

ಹೇಳಿದ್ದನ್ನು ಮಾಡಿಬಿಡುತ್ತಾನೆ ಎಂಬ ಭಯದಿಂದ ಅಮ್ಮನಿಗೆ ಕಾಡಿತ್ತು. ಮಗನನ್ನು ಮನೆಯಲ್ಲೇ ಉಳಿಸಿಕೊಳ್ಳಬೇಕೆಂಬ ಮತ್ತು ಅವನ ಕನಸುಗಳನ್ನು ನನಸಾಗಿಸಲು ಶ್ರಮಿಸುವುದಕ್ಕಿಂತ ಹೆಚ್ಚೇನೂ ಸಂತೋಷ ಸಿಗುವುದಿಲ್ಲ ಎಂದು ನಿರ್ಧರಿಸಿದಳು. ಹಾಗಾಗಿ ತನ್ನ ಚಿನ್ನದ ಸರವನ್ನು ಮಾರಿ ಆ ಹಣದಲ್ಲಿ ಧ್ರುವ್​​ನಿಗೆ ಕಿಟ್ ಖರೀದಿಸಿದಳು. ತಾಯಿ ತ್ಯಾಗಕ್ಕೆ ಹೆಚ್ಚು ಸಮರ್ಪಿತನಾಗಲು ಪ್ರಯತ್ನಿಸಿದ. ಜೂನಿಯರ್ ಕ್ರಿಕೆಟ್​ನಲ್ಲಿ ಆಗ್ರಾ ಮತ್ತು ಉತ್ತರ ಪ್ರದೇಶ ತಂಡಗಳಿಗೆ ಆಡಲು ನೋಯ್ಡಾಗೆ ತೆರಳಿದ್ದ.
icon

(7 / 10)

ಮೊದಲು ಡೆಲ್ಲಿ ತಂಡದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸಿದ. ಆದರೆ ಆಗ್ರಾದಿಂದ ನೋಯ್ಡಾಕ್ಕೆ ಆಗಾಗ ಪ್ರಯಾಣ ಮಾನಸಿಕವಾಗಿ ಮತ್ತು ದೈಹಿಕವಾಗಿ ಆಯಾಸವಾಗುತ್ತಿತ್ತು. ಆಗ ತಾಯಿ ಕೂಡ ಜೊತೆಗೆ ಬಂದಳು. ನೋಯ್ಡಾದಲ್ಲಿ ತನ್ನ ಮಗನೊಂದಿಗೆ ವಾಸಿಸಲು ವ್ಯವಸ್ಥೆ ಮಾಡಿಕೊಂಡರು. ಹಂತ ಹಂತವಾಗಿ ಬೆಳೆದ ಜುರೆಲ್ ಅಂಡರ್​-19 ವರ್ಷದೊಳಗಿನವರ ಭಾರತ ತಂಡಕ್ಕೆ ಆಯ್ಕೆಯಾದರು.
icon

(8 / 10)

ಅವರ ಅದ್ಭುತ ಪ್ರದರ್ಶನಗಳೊಂದಿಗೆ ಗಮನ ಸೆಳೆದು 2020ರ ಅಂಡರ್-19 ವಿಶ್ವಕಪ್‌ನ ಉಪನಾಯಕರಾಗಿ ನೇಮಕಗೊಂಡರು. ಈ ವಿಶ್ವಕಪ್ ಆಡಿದ್ದ ಜುರೆಲ್, 6 ಪಂದ್ಯಗಳ ಪೈಕಿ 3 ಇನ್ನಿಂಗ್ಸ್​ಗಳಲ್ಲಿ 89 ರನ್ ಗಳಿಸಿದ್ದರು. ಒಂದು ಅರ್ಧಶತಕ ಸಹ ಇತ್ತು. ಆ ಟೂರ್ನಿಯಲ್ಲಿ ಭಾರತದ ಯುವ ತಂಡ ರನ್ನರ್ ಅಪ್ ಆಯಿತು. ಧ್ರುವ್​ನ ಪರಿಶ್ರಮ, ಅರ್ಪಣಾ ಮನೋಭಾವ ನೋಡಿ ಅಪ್ಪನ ಮನವೂ ಕರಗಿತು. ಬಳಿಕ ಜುರೆಲ್​ ಐಪಿಎಲ್ ಕಡೆ ಮರಳಿದರು. 
icon

(9 / 10)

ಐಪಿಎಲ್​ನಲ್ಲಿ ಅಬ್ಬರಿಸಿದ ಜುರೆಲ್, ರಾಜಸ್ಥಾನ್ ರಾಯಲ್ಸ್ ಪರ ಅತ್ಯುತ್ತಮ ಫಿನಿಷರ್​​ ಆಗಿ ರೂಪುಗೊಂಡಿದ್ದಾರೆ. ಆ ಮೂಲಕ ವಿಶ್ವ ಕ್ರಿಕೆಟ್‌ಗೆ ಪರಿಚಿತರಾದರು.​ 13 ಪಂದ್ಯಗಳಲ್ಲಿ 152 ರನ್​ ಬಾರಿಸಿದ್ದಾರೆ. ಮಹೇಂದ್ರ ಸಿಂಗ್​ ಧೋನಿ ಅಪ್ಪಟ ಅಭಿಮಾನಿ. 2022ರಲ್ಲಿ ಉತ್ತರ ಪ್ರದೇಶ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಜುರೆಲ್​, 15 ಪಂದ್ಯಗಳಲ್ಲಿ 46.47ರ ಸರಾಸರಿಯಲ್ಲಿ 790 ರನ್ ಗಳಿಸಿದ್ದಾರೆ. ಡಿಸೆಂಬರ್​ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಕೈಗೊಂಡಿದ್ದ ಭಾರತ ಎ ತಂಡದ ಭಾಗವೂ ಆಗಿದ್ದರು.
icon

(10 / 10)

ಇತರ ಗ್ಯಾಲರಿಗಳು