ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mothers Day 2024: ಅಮ್ಮಂದಿರ ದಿನವನ್ನು ಮರೆಯಲಾಗದ ದಿನವನ್ನಾಗಿಸುವ ಬಯಕೆ ಇದ್ಯಾ, ಹಾಗಿದ್ರೆ ಹೀಗೆ ಆಚರಿಸಿ

Mothers Day 2024: ಅಮ್ಮಂದಿರ ದಿನವನ್ನು ಮರೆಯಲಾಗದ ದಿನವನ್ನಾಗಿಸುವ ಬಯಕೆ ಇದ್ಯಾ, ಹಾಗಿದ್ರೆ ಹೀಗೆ ಆಚರಿಸಿ

  • ಪ್ರತಿ ವರ್ಷದಂತೆ ಈ ವರ್ಷವೂ ತಾಯಂದಿರ ದಿನ ಬಂದಿದೆ. ಅಮ್ಮಂದಿರ ದಿನಕ್ಕೆ ವಿಶೇಷ ಉಡುಗೊರೆ ನೀಡುವ ಆಸೆ ನಿಮ್ಮಲ್ಲೂ ಇರಬಹುದು. ಆದರೆ ನೀವು ಅವರೊಂದಿಗೆ ಕಳೆಯುವ ಸಮಯಕ್ಕಿಂತ ಬೆಸ್ಟ್‌ ಗಿಫ್ಟ್‌ ಯಾವುದೂ ಇರಲಿಕ್ಕಿಲ್ಲ. ಈ ವರ್ಷ ತಾಯಂದಿರ ದಿನವನ್ನು ಹೀಗೆ ಆಚರಿಸಿ, ಮರೆಯಲಾಗದ ದಿನವನ್ನಾಗಿಸಿ.

ಮೇ ತಿಂಗಳ 2ನೇ ಭಾನುವಾರವನ್ನು ವಿಶ್ವ ತಾಯಂದಿರ ದಿನ ಎಂದು ಆಚರಿಸಲಾಗುತ್ತದೆ. ಈ ದಿನ ನಿಮ್ಮ ಸರ್ವಸ್ವ ಮತ್ತು ನಿಮಗೆ ಸದಾ ಬೆಂಬಲವಾಗಿರುವ ತಾಯಿಗೆ ವಿಶೇಷವಾಗಿ ಮೀಸಲಿರಿಸಲಾದ ದಿನವಾಗಿದೆ. ಈ ವರ್ಷ ಅಮ್ಮಂದಿರ ದಿನವನ್ನು ವಿಶೇಷವಾಗಿ ಆಚರಿಸುವ ಬಯಕೆ ನಿಮ್ಮಲ್ಲಿದ್ದರೆ ನೀವು ಐಡಿಯಾಗಳನ್ನು ಪಾಲಿಸಬಹುದು. ತಾಯಿಗೆ ಮಕ್ಕಳು ತಮ್ಮ ಜೊತೆ ಇರುವುದಕ್ಕಿಂತ ಬೆಸ್ಟ್‌ ಗಿಫ್ಟ್‌ ಯಾವುದೂ ಇಲ್ಲ ಎಂಬುದನ್ನು ತಪ್ಪಿಯೂ ಮರಿಬೇಡಿ. 
icon

(1 / 8)

ಮೇ ತಿಂಗಳ 2ನೇ ಭಾನುವಾರವನ್ನು ವಿಶ್ವ ತಾಯಂದಿರ ದಿನ ಎಂದು ಆಚರಿಸಲಾಗುತ್ತದೆ. ಈ ದಿನ ನಿಮ್ಮ ಸರ್ವಸ್ವ ಮತ್ತು ನಿಮಗೆ ಸದಾ ಬೆಂಬಲವಾಗಿರುವ ತಾಯಿಗೆ ವಿಶೇಷವಾಗಿ ಮೀಸಲಿರಿಸಲಾದ ದಿನವಾಗಿದೆ. ಈ ವರ್ಷ ಅಮ್ಮಂದಿರ ದಿನವನ್ನು ವಿಶೇಷವಾಗಿ ಆಚರಿಸುವ ಬಯಕೆ ನಿಮ್ಮಲ್ಲಿದ್ದರೆ ನೀವು ಐಡಿಯಾಗಳನ್ನು ಪಾಲಿಸಬಹುದು. ತಾಯಿಗೆ ಮಕ್ಕಳು ತಮ್ಮ ಜೊತೆ ಇರುವುದಕ್ಕಿಂತ ಬೆಸ್ಟ್‌ ಗಿಫ್ಟ್‌ ಯಾವುದೂ ಇಲ್ಲ ಎಂಬುದನ್ನು ತಪ್ಪಿಯೂ ಮರಿಬೇಡಿ. (Unsplash)

ಮನೆಯಲ್ಲೇ ಸ್ಪಾ ಫೀಲ್‌ ನೀಡಿ: ಇತ್ತೀಚಿನ ಅಮ್ಮಂದಿರು ತಮ್ಮ ಸೌಂದರ್ಯ ಹಾಗೂ ದೇಹದ ಕಾಳಜಿ ಮಾಡಲು ಇಷ್ಟಪಡುತ್ತಾರೆ. ಅದಕ್ಕಾಗಿ ನೀವು ಮನೆಯಲ್ಲೇ ಸ್ಪಾ ರೀತಿ ಅಮ್ಮನ ಸೇವೆ ಮಾಡಬಹುದು. ಅವರಿಗೆ ಆಯಿಲ್‌ ಮಸಾಜ್‌ ಮಾಡುವುದು, ಪೆಡಿಕ್ಯೂರ್‌, ಮೆನಿಕ್ಯೂರ್‌ ಮಾಡುವುದು, ಫೇಶಿಯಲ್‌ ಮಾಡುವುದು ಈ ರೀತಿಯ ಮಾಡುವ ಮೂಲಕ ಅವರನ್ನು ಖುಷಿ ಪಡಿಸಬಹುದು. 
icon

(2 / 8)

ಮನೆಯಲ್ಲೇ ಸ್ಪಾ ಫೀಲ್‌ ನೀಡಿ: ಇತ್ತೀಚಿನ ಅಮ್ಮಂದಿರು ತಮ್ಮ ಸೌಂದರ್ಯ ಹಾಗೂ ದೇಹದ ಕಾಳಜಿ ಮಾಡಲು ಇಷ್ಟಪಡುತ್ತಾರೆ. ಅದಕ್ಕಾಗಿ ನೀವು ಮನೆಯಲ್ಲೇ ಸ್ಪಾ ರೀತಿ ಅಮ್ಮನ ಸೇವೆ ಮಾಡಬಹುದು. ಅವರಿಗೆ ಆಯಿಲ್‌ ಮಸಾಜ್‌ ಮಾಡುವುದು, ಪೆಡಿಕ್ಯೂರ್‌, ಮೆನಿಕ್ಯೂರ್‌ ಮಾಡುವುದು, ಫೇಶಿಯಲ್‌ ಮಾಡುವುದು ಈ ರೀತಿಯ ಮಾಡುವ ಮೂಲಕ ಅವರನ್ನು ಖುಷಿ ಪಡಿಸಬಹುದು. (Unsplash)

ಅಮ್ಮನ ನೆಚ್ಚಿನ ಅಡುಗೆ ಮಾಡಿ ತಿನ್ನಿಸಿ: ಅಮ್ಮ ಆದವಳು ಯಾವಾಗಲೂ ಮಕ್ಕಳ ನೆಚ್ಚಿನ ಖಾದ್ಯಗಳನ್ನು ಮಾಡಿ ತಿನ್ನಿಸುತ್ತಾಳೆ, ಈ ದಿನ ಸ್ಪೆಷಲ್‌ ಆಗಿ ನಿಮ್ಮ ಅಮ್ಮನಿಗೆ ಇಷ್ಟವಾಗುವ ಖಾದ್ಯವನ್ನು ನೀವು ತಯಾರಿಸಿ ತಿನ್ನಿಸಿ. ಇದರಿಂದ ಅಮ್ಮ ಡಬಲ್‌ ಖುಷಿ ಆಗುತ್ತಾರೆ. 
icon

(3 / 8)

ಅಮ್ಮನ ನೆಚ್ಚಿನ ಅಡುಗೆ ಮಾಡಿ ತಿನ್ನಿಸಿ: ಅಮ್ಮ ಆದವಳು ಯಾವಾಗಲೂ ಮಕ್ಕಳ ನೆಚ್ಚಿನ ಖಾದ್ಯಗಳನ್ನು ಮಾಡಿ ತಿನ್ನಿಸುತ್ತಾಳೆ, ಈ ದಿನ ಸ್ಪೆಷಲ್‌ ಆಗಿ ನಿಮ್ಮ ಅಮ್ಮನಿಗೆ ಇಷ್ಟವಾಗುವ ಖಾದ್ಯವನ್ನು ನೀವು ತಯಾರಿಸಿ ತಿನ್ನಿಸಿ. ಇದರಿಂದ ಅಮ್ಮ ಡಬಲ್‌ ಖುಷಿ ಆಗುತ್ತಾರೆ. (Unsplash)

ಪಿಕ್ನಿಕ್‌ ಕರೆದುಕೊಂಡು ಹೋಗಿ: ಅಮ್ಮ ಸದಾ ಮನೆಯಲ್ಲೇ ಇರುತ್ತಾರೆ. ಹೊರಗಡೆ ಹೋಗುವುದು ಅವರಿಗೆ ಇಷ್ಟವಿಲ್ಲವೆಂದಲ್ಲ. ಆದರೆ ಮನೆಗೆಲಸದ ನಡುವೆ ಅವರು ಅದೆಲ್ಲವನ್ನೂ ಮರೆತಿರುತ್ತಾರೆ. ಹಾಗಾಗಿ ಅಮ್ಮಂದಿರ ದಿನದಂದು ನಿಮ್ಮ ಅಮ್ಮನನ್ನು ಪಿಕ್ನಿಕ್‌ ಕರೆದುಕೊಂಡು ಹೋಗಿ, ಹೊರಗಡೆ ಅವರಿಷ್ಟದ ವಸ್ತುವನ್ನು ಉಡುಗೊರೆಯಾಗಿ ನೀಡಿ. ಇದರಿಂದ ಅವರು ಸಖತ್‌ ಖುಷಿಯಾಗುತ್ತಾರೆ. 
icon

(4 / 8)

ಪಿಕ್ನಿಕ್‌ ಕರೆದುಕೊಂಡು ಹೋಗಿ: ಅಮ್ಮ ಸದಾ ಮನೆಯಲ್ಲೇ ಇರುತ್ತಾರೆ. ಹೊರಗಡೆ ಹೋಗುವುದು ಅವರಿಗೆ ಇಷ್ಟವಿಲ್ಲವೆಂದಲ್ಲ. ಆದರೆ ಮನೆಗೆಲಸದ ನಡುವೆ ಅವರು ಅದೆಲ್ಲವನ್ನೂ ಮರೆತಿರುತ್ತಾರೆ. ಹಾಗಾಗಿ ಅಮ್ಮಂದಿರ ದಿನದಂದು ನಿಮ್ಮ ಅಮ್ಮನನ್ನು ಪಿಕ್ನಿಕ್‌ ಕರೆದುಕೊಂಡು ಹೋಗಿ, ಹೊರಗಡೆ ಅವರಿಷ್ಟದ ವಸ್ತುವನ್ನು ಉಡುಗೊರೆಯಾಗಿ ನೀಡಿ. ಇದರಿಂದ ಅವರು ಸಖತ್‌ ಖುಷಿಯಾಗುತ್ತಾರೆ. (Unsplash)

ನಿಮ್ಮ ತಾಯಿಯ ಇಷ್ಟದ ಸಿನಿಮಾವನ್ನು ಅವರ ಜೊತೆ ಕುಳಿತ ನೀವು ನೋಡಬಹುದು ಅಥವಾ ಅವರನ್ನು ಥಿಯೇಟರ್‌ಗೆ ಸಿನಿಮಾಗೆ ಕರೆದುಕೊಂಡು ಹೋಗಬಹುದು. ಅಲ್ಲಿ ಪಾಪ್‌ಕಾರ್ನ್‌ ತಿಂಡಿ ತಿಂದು ಎಂಜಾಯ್‌ ಮಾಡಿ. 
icon

(5 / 8)

ನಿಮ್ಮ ತಾಯಿಯ ಇಷ್ಟದ ಸಿನಿಮಾವನ್ನು ಅವರ ಜೊತೆ ಕುಳಿತ ನೀವು ನೋಡಬಹುದು ಅಥವಾ ಅವರನ್ನು ಥಿಯೇಟರ್‌ಗೆ ಸಿನಿಮಾಗೆ ಕರೆದುಕೊಂಡು ಹೋಗಬಹುದು. ಅಲ್ಲಿ ಪಾಪ್‌ಕಾರ್ನ್‌ ತಿಂಡಿ ತಿಂದು ಎಂಜಾಯ್‌ ಮಾಡಿ. (Unsplash)

ನಿಮ್ಮ ಕೈಯಿಂದಲೇ ಕರಕುಶಲ ವಸ್ತುಗಳನ್ನು ತಯಾರಿಸಿ, ತಾಯಿಗೆ ಸರ್ಪ್ರೈಸ್‌ ಗಿಫ್ಟ್‌ ನೀಡಬಹುದು. ಗೃಹೋಪಯೋಗಿ ಕರಕುಶಲ ವಸ್ತುಗಳು ನಿಮ್ಮ ಅಮ್ಮನಿಗೆ ಖಂಡಿತ ಇಷ್ಟವಾಗುತ್ತದೆ. ತಾಯಿ ಮಕ್ಕಳ ಬಾಂಧವ್‌ ತಿಳಿಸುವ ಗಿಫ್ಟ್‌ ಕೂಡ ಅಮ್ಮನಿಗೆ ಇಷ್ಟವಾಗುತ್ತದೆ.
icon

(6 / 8)

ನಿಮ್ಮ ಕೈಯಿಂದಲೇ ಕರಕುಶಲ ವಸ್ತುಗಳನ್ನು ತಯಾರಿಸಿ, ತಾಯಿಗೆ ಸರ್ಪ್ರೈಸ್‌ ಗಿಫ್ಟ್‌ ನೀಡಬಹುದು. ಗೃಹೋಪಯೋಗಿ ಕರಕುಶಲ ವಸ್ತುಗಳು ನಿಮ್ಮ ಅಮ್ಮನಿಗೆ ಖಂಡಿತ ಇಷ್ಟವಾಗುತ್ತದೆ. ತಾಯಿ ಮಕ್ಕಳ ಬಾಂಧವ್‌ ತಿಳಿಸುವ ಗಿಫ್ಟ್‌ ಕೂಡ ಅಮ್ಮನಿಗೆ ಇಷ್ಟವಾಗುತ್ತದೆ.(Unsplash)

ತಾಯಿಯೊಂದಿಗೆ ತೆರಳಿ ಚಾರಿಟಿ ಕೆಲಸಗಳನ್ನು ಮಾಡಬಹುದು. ಸ್ಥಳೀಯ ಚಾರಿಟಿ, ವೃದ್ಧಾಶ್ರಮ, ಅನಾಥಶ್ರಮಗಳಿಗೆ ಹೋಗಿ ಅಲ್ಲಿರುವವರಿಗೆ ಸಹಾಯ ಮಾಡಬಹುದು. ತಾಯಿಯ ಹೆಸರಿನಲ್ಲಿ ಊಟ ತಿಂಡಿ ಕೊಡುವುದು ಮಾಡಬಹುದು.  
icon

(7 / 8)

ತಾಯಿಯೊಂದಿಗೆ ತೆರಳಿ ಚಾರಿಟಿ ಕೆಲಸಗಳನ್ನು ಮಾಡಬಹುದು. ಸ್ಥಳೀಯ ಚಾರಿಟಿ, ವೃದ್ಧಾಶ್ರಮ, ಅನಾಥಶ್ರಮಗಳಿಗೆ ಹೋಗಿ ಅಲ್ಲಿರುವವರಿಗೆ ಸಹಾಯ ಮಾಡಬಹುದು. ತಾಯಿಯ ಹೆಸರಿನಲ್ಲಿ ಊಟ ತಿಂಡಿ ಕೊಡುವುದು ಮಾಡಬಹುದು.  (Unsplash)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 


IPL_Entry_Point

ಇತರ ಗ್ಯಾಲರಿಗಳು