ಅಮ್ಮಂದಿರ ದಿನ 2025: ಮದರ್ಸ್‌ ಡೇಗೆ ನಿಮ್ಮ ಅಮ್ಮನಿಗೆ ಸ್ಪೆಷಲ್‌ ಸರ್ಪ್ರೈಸ್ ಕೊಡಬೇಕಾ, ಇಲ್ಲಿವೆ ಬೊಂಬಾಟ್ ಐಡಿಯಾಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಮ್ಮಂದಿರ ದಿನ 2025: ಮದರ್ಸ್‌ ಡೇಗೆ ನಿಮ್ಮ ಅಮ್ಮನಿಗೆ ಸ್ಪೆಷಲ್‌ ಸರ್ಪ್ರೈಸ್ ಕೊಡಬೇಕಾ, ಇಲ್ಲಿವೆ ಬೊಂಬಾಟ್ ಐಡಿಯಾಗಳು

ಅಮ್ಮಂದಿರ ದಿನ 2025: ಮದರ್ಸ್‌ ಡೇಗೆ ನಿಮ್ಮ ಅಮ್ಮನಿಗೆ ಸ್ಪೆಷಲ್‌ ಸರ್ಪ್ರೈಸ್ ಕೊಡಬೇಕಾ, ಇಲ್ಲಿವೆ ಬೊಂಬಾಟ್ ಐಡಿಯಾಗಳು

ಪ್ರತಿವರ್ಷ ಮೇ ತಿಂಗಳ ಎರಡನೇ ಭಾನುವಾರ ಹಲವು ದೇಶಗಳಲ್ಲಿ ಮದರ್ಸ್ ಡೇ ಆಚರಿಸುತ್ತಾರೆ. ಈ ವರ್ಷ ನಾಳೆ ಅಂದರೆ ಮೇ 11ಕ್ಕೆ ತಾಯಂದಿರ ದಿನಾಚರಣೆ ಇದ್ದು, ನಿಮ್ಮ ಅಮ್ಮನಿಗೆ ಸ್ಪೆಷಲ್ ಸರ್ಪ್ರೈಸ್ ನೀಡಬೇಕು ಅಂತಿದ್ದರೆ ಈ ಐಡಿಯಾಗಳನ್ನು ಗಮನಿಸಿ.

ಈ ವರ್ಷ ಅಮ್ಮಂದಿರ ದಿನವನ್ನು ವಿಶೇಷವನ್ನಾಗಿಸಬೇಕು, ಅಮ್ಮನಿಗೆ ಸ್ಪೆಷಲ್ ಸರ್ಪ್ರೈಸ್ ನೀಡಬೇಕು ಅಂತಿದ್ದು ಏನು ಮಾಡಬಹುದು ಎಂದು ನೀವು ಯೋಚಿಸುತ್ತಿರಬಹುದು. ಸಿಂಪಲ್ ಆಗಿ ಅಮ್ಮ ಮೆಚ್ಚುವಂತೆ ಸರ್ಪ್ರೈಸ್ ಕೊಡಬೇಕು ಅಂತಿದ್ದರೆ ಈ ಐಡಿಯಾಗಳು ನಿಮಗೆ ಇಷ್ಟವಾಗಬಹುದು. ಈ ಸರ್ಪ್ರೈಸ್‌ಗಳಿಂದ ಖಂಡಿತ ನಿಮ್ಮ ತಾಯಿ ಖುಷಿಪಡುತ್ತಾರೆ.
icon

(1 / 9)

ಬೆಳಗೆದ್ದು ಅಮ್ಮನ ಇಷ್ಟದ ತಿಂಡಿ ರೆಡಿ ಮಾಡಿ: ಅಮ್ಮ ಪ್ರತಿದಿನ ಬೆಳಗೆದ್ದು ಎಲ್ಲರಿಗೂ ತಿಂಡಿ ಮಾಡಿ ಬಡಿಸುತ್ತಾರೆ. ಆದರೆ ಅಮ್ಮಂದಿರ ದಿನದ ವಿಶೇಷವಾಗಿ ಅಮ್ಮನ ಎದ್ದೇಳುವ ಮೊದಲೇ ಅವರಿಗೆ ಇಷ್ಟವಾಗುವ ತಿಂಡಿ ರೆಡಿ ಮಾಡಿ, ಅವರಿಗೆ ಸರ್ಪ್ರೈಸ್ ನೀಡಿ. ಖಂಡಿತ ಇಂತಹ ಸರ್ಪ್ರೈಸ್‌ಗಳನ್ನು ತಾಯಿ ಇಷ್ಟಪಡದೇ ಇರುವುದಿಲ್ಲ.
icon

(2 / 9)

(PC: Canva)

ಅಮ್ಮನನ್ನು ಹೊರಗಡೆ ಊಟಕ್ಕೆ ಕರೆದುಕೊಂಡು ಹೋಗಿ: ಸಾಮಾನ್ಯವಾಗಿ ಅಮ್ಮ ಹೊರಗಡೆ ಹೋಗಿ ಊಟ ಮಾಡುವುದು ಕಡಿಮೆ. ಅಮ್ಮಂದಿರ ದಿನದ ವಿಶೇಷವಾಗಿ ಒಂದು ಉತ್ತಮ ಹೋಟೆಲ್‌ ಬುಕ್‌ ಮಾಡಿ ಅಲ್ಲಿ ಅಮ್ಮನ ಇಷ್ಟದ ಖಾದ್ಯಗಳನ್ನು ತಿನ್ನಿಸಿ. ಹೋಟೆಲ್‌ನಲ್ಲಿ ಕೇಕ್ ಕಟ್ ಮಾಡಿಸಿ ಅಮ್ಮನಿಗೆ ಸರ್ಪ್ರೈಸ್ ನೀಡಿ. ಅಮ್ಮನ ಜೊತೆ ಮನೆಯವರನ್ನೆಲ್ಲಾ ಹೊರಗಡೆ ಕರೆದುಕೊಂಡು ಹೋಗಿ. ಇದರಿಂದ ಅಮ್ಮ ಖಂಡಿತ ಸರ್ಪ್ರೈಸ್ ಆಗುವುದರ ಜೊತೆ ಖುಷಿಯನ್ನೂ ವ್ಯಕ್ತಪಡಿಸುತ್ತಾರೆ.
icon

(3 / 9)

ಶಾಪಿಂಗ್ ಕರೆದುಕೊಂಡು ಹೋಗಿ: ತಾಯಿಯಾದವಳು ಮಕ್ಕಳಿಗಾಗಿ ಎಲ್ಲವನ್ನೂ ಕೊಡುತ್ತಾಳೆ. ಆದರೆ ಅಮ್ಮನಿಗೆ ನಾವೇನು ನೀಡಿದ್ದೇವೆ ಎಂದು ಮಕ್ಕಳು ಯೋಚಿಸಲು ಇದು ಬೆಸ್ಟ್ ಸಮಯ. ಅಮ್ಮಂದಿರ ದಿನದ ಸ್ಪೆಷಲ್ ಆಗಿ ನಿಮ್ಮ ಅಮ್ಮನನ್ನು ಶಾಪಿಂಗ್ ಕರೆದುಕೊಂಡು ಹೋಗಿ. ಅವರು ಮೆಚ್ಚುವುದನ್ನೆಲ್ಲಾ ಕೊಡಿಸಿ.  ಅಮ್ಮ ಇಷ್ಟಪಡುವ ವಸ್ತುಗಳನ್ನು ಕೊಡಿಸಿ ಅವರಿಗೆ ಸರ್ಪ್ರೈಸ್ ನೀಡಿ.
icon

(4 / 9)

ಆತ್ಮೀಯ ಗೆಳತಿಯರ ಬಳಿ ಕರೆದುಕೊಂಡು ಹೋಗಿ: ತಾಯಿಯಾದವಳು ಯಾವಾಗಲೂ ಮನೆ, ಮಕ್ಕಳು, ಗಂಡ–ಸಂಸಾರ ಇದರಲ್ಲೇ ಮುಳುಗಿರುತ್ತಾಳೆ. ನೀವು ನಿಮ್ಮ ಅಮ್ಮನಿಗೆ ಸ್ಪೆಷಲ್ ಸರ್ಪ್ರೈಸ್ ಹಾಗೂ ಎಂದು ಮರೆಯದ ಗಿಫ್ಟ್ ಕೊಡಬೇಕು ಅಂತಿದ್ರೆ ಅಮ್ಮಂದಿರ ದಿನದ ಸಲುವಾಗಿ ಅವರ ಆತ್ಮೀಯ ಗೆಳತಿಯರನ್ನು ಭೇಟಿ ಮಾಡಿಸಿ. ಈ ಸರ್ಪ್ರೈಸ್‌ ಖಂಡಿತ ಅವರಿಗೆ ವಿಶೇಷವಾಗಿರುತ್ತೆ, ಮಾತ್ರವಲ್ಲ ಈ ಮದರ್ಸ್ ಡೇ ಅವರಿಗೆ ಸಖತ್ ಮೆಮೊರೇಬಲ್ ಆಗಿರುತ್ತೆ.
icon

(5 / 9)

ಅಮ್ಮನಿಷ್ಟದ ಸ್ಥಳಕ್ಕೆ ಕರೆದುಕೊಂಡು ಹೋಗಿ: ತಾಯಿ ತನ್ನ ಮನದಿಚ್ಛೆಯನ್ನು ಹೇಳಿಕೊಳ್ಳುವುದು ಕಡಿಮೆ. ಹೇಳಿಕೊಂಡರು ಅದು ನೆರವೇರುವುದು ಕಡಿಮೆ. ನಿಮ್ಮ ಅಮ್ಮ ಯಾವುದಾದರು ಒಂದು ವಿಶೇಷ ಸ್ಥಳಕ್ಕೆ ಹೋಗಬೇಕು ಎಂಬ ಆಸೆ ವ್ಯಕ್ತಪಡಿಸುತ್ತಿದ್ದರೆ ಈ ದಿನ ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಸರ್ಪ್ರೈಸ್ ನೀಡಬಹುದು. ಇದರಿಂದ ತಾಯಿಯ ಮನದ ಆಸೆ ಈಡೇರಿಸಿದಂತೆಯೂ ಆಗುತ್ತದೆ.
icon

(6 / 9)

ಉಡುಗೊರೆ ನೀಡಿ: ತಾಯಿ ಎಂದಿಗೂ ತನ್ನ ಮಕ್ಕಳಿಂದ ಪ್ರೀತಿ, ವಿಶ್ವಾಸ ಹೊರತು ಪಡಿಸಿ ಏನನ್ನೂ ನಿರೀಕ್ಷೆ ಮಾಡುವುದಿಲ್ಲ. ಆದರೆ ಈ ವಿಶೇಷ ದಿನದಂದು ನಿಮ್ಮ ತಾಯಿ ಮೆಚ್ಚುವ ರೀತಿಯಲ್ಲಿ ಸ್ಪೆಷಲ್ ಗಿಫ್ಟ್ ನೀಡಿ. ಸೀರೆ, ಮೊಬೈಲ್‌, ಅಡುಗೆಮನೆ ಸಾಮಗ್ರಿಗಳು ಹೀಗೆ ಯಾವುದೇ ವಸ್ತುವನ್ನು ಸರ್ಪ್ರೈಸ್ ಆಗಿ ಕೊಟ್ಟರು ತಾಯಿಗೆ ಅದು ವಿಶೇಷ ಎನ್ನಿಸದೇ ಇರುವುದಿಲ್ಲ.
icon

(7 / 9)

ತಾಯಿಯನ್ನು ಪಿಕ್‌ನಿಕ್ ಕರೆದುಕೊಂಡು ಹೋಗಿ: ಮದರ್ಸ್‌ ಡೇ ಸಲುವಾಗಿ ತಾಯಿಗೆ ಎಲ್ಲಿಗೆ ಏನು ಎಂದು ಹೇಳದೇ ಮನೆಯವರೆಲ್ಲಾ ಒಟ್ಟಾಗಿ ಪಿಕ್‌ನಿಕ್ ಕರೆದುಕೊಂಡು ಹೋಗಿ. ಒಂದೊಳ್ಳೆಯ ತಾಣದಲ್ಲಿ ದಿನವನ್ನು ಎಂಜಾಯ್ ಮಾಡಿ. ಕುಟುಂಬದವರೆಲ್ಲಾ ಒಟ್ಟಿಗೆ ಸೇರುವುದು ಖಂಡಿತ ನಿಮ್ಮ ತಾಯಿಗೆ ಸರ್ಪ್ರೈಸ್ ಆಗಿರುತ್ತದೆ. ‌
icon

(8 / 9)

ನೀವೇ ಉಡುಗೊರೆ ರೆಡಿ ಮಾಡಿ: ಅಮ್ಮಂದಿರ ದಿನಕ್ಕೆ ಹೊರಗಡೆ ಸಿಗುವ ಗಿಫ್ಟ್ ತಂದು ಕೊಡುವ ಬದಲು ನೀವೇ ವಿಶೇಷವಾದ ಗಿಫ್ಟ್ ರೆಡಿ ಮಾಡಿ. ನಿಮ್ಮ ಕೈಯಾರೆ ಮಾಡಿದ ಗಿಫ್ಟ್ ಖಂಡಿತ ಸುಂದರವಾಗಿ, ವಿಶೇಷವಾಗಿರಬೇಕು. ನೀವೇ ರೆಡಿ ಮಾಡಿದ ಗಿಫ್ಟ್ ಎಂದು ಹೇಳಿ ತಾಯಿಗೆ ಕೊಟ್ಟರೆ ಅವರಿಗೆ ಖಂಡಿತ ತುಂಬಾನೇ ಸ್ಪೆಷಲ್ ಹಾಗೂ ಸರ್ಪ್ರೈಸಿಂಗ್ ಆಗಿರುತ್ತದೆ.
icon

(9 / 9)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು