ಮದರ್ಸ್ ಡೇ ವಿಶೇಷ: ಕನ್ನಡ ಧಾರಾವಾಹಿಗಳ ಸೂಪರ್ ಅಮ್ಮಂದಿರು, ಸುಧಾರಾಣಿಯಿಂದ ಮಂಜು ಭಾಷಿಣಿ ತನಕ
ಮೇ 11 ಮದರ್ಸ್ ಡೇ. ಕಿರುತೆರೆ ಧಾರಾವಾಹಿ ಪ್ರಿಯರಿಗೆ ಅಮ್ಮಂದಿರ ದಿನದಂದು ಹಲವು ಸೀರಿಯಲ್ ಮದರ್‌ಗಳು ಕಣ್ಮುಂದೆ ಬರಬಹುದು. ಅಮೃತಧಾರೆ, ಶ್ರೀರಸ್ತು ಶುಭಮಸ್ತು, ಗೌರಿ ಶಂಕರ, ಕರಿಮಣಿ , ಪುಟ್ಟಕ್ಕನ ಮಕ್ಕಳು ಸೇರಿದಂತೆ ಕನ್ನಡದ ವಿವಿಧ ಧಾರಾವಾಹಿಗಳಲ್ಲಿ ಅಮ್ಮನ ಪಾತ್ರಕ್ಕೆ ಜೀವ ತುಂಬುವವರ ಮಾಹಿತಿ ಇಲ್ಲಿದೆ.
(1 / 15)
ಮದರ್ಸ್ ಡೇ ಎಂದಾಗ ಅಮ್ಮನ ನೆನಪಾಗುವುದು ಸಹಜ. ಇದೇ ಸಮಯದಲ್ಲಿ ಅಮ್ಮನಂತೆ ಅಕ್ಕರೆ ತೋರಿದವರ ನೆನಪೂ ಆಗುತ್ತದೆ. ಸೀರಿಯಲ್ ಪ್ರಿಯರಿಗೆ ತಮ್ಮ ನೆಚ್ಚಿನ ಧಾರಾವಾಹಿಗಳ ಅಮ್ಮ ಪಾತ್ರಧಾರಿಗಳು ನೆನಪಿಗೆ ಬರಬಹುದು. ಭಾಗ್ಯಲಕ್ಷ್ಮಿ, ಅಮೃತಧಾರೆ, ಶ್ರೀರಸ್ತು ಶುಭಮಸ್ತು, ವಧು, ಶ್ರಾವಣಿ ಸುಬ್ರಹ್ಮಣ್ಯ, ಲಕ್ಷ್ಮಿ ನಿವಾಸ, ಪುಟ್ಟಕ್ಕನ ಮಕ್ಕಳು, ಸ್ನೇಹದ ಕಡಲಲ್ಲಿ, ಶಾರದೆ, ಆರುಂಧತಿ, ಸಿಂಧು ಭೈರವಿ, ಗೌರಿ ಶಂಕರ ಸೀರಿಯಲ್‌ಗಳಲ್ಲಿ ಅಮ್ಮನ ಪಾತ್ರದಲ್ಲಿ ನಟಿಸುವ ನಟಿಯರ ಮಾಹಿತಿ ಇಲ್ಲಿದೆ.
(2 / 15)
ಸೀರಿಯಲ್ ಅಮ್ಮ ಅಂದರೆ ತಕ್ಷಣ ಉಮಾಶ್ರೀ ನೆನಪಿಗೆ ಬರುತ್ತಾರೆ. ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಪುಟ್ಟಕ್ಕನಾಗಿ ಇವರು ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದಾರೆ.
(4 / 15)
ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಚಿತ್ಕಳಾ ಬಿರಾದಾರ್ ಅವರು ಭಾಗ್ಯಮ್ಮರಾಗಿ ನಟಿಸಿದ್ದಾರೆ. ಇಲ್ಲಿ ಮಲತಾಯಿ ಶಕುಂತಲಾದೇವಿಯಾಗಿ ವನಿತಾ ವಾಸು ಇದ್ದಾರೆ.
(6 / 15)
ಜೀ ಕನ್ನಡ ವಾಹಿನಿಯ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸುಧಾರಾಣಿ ಅಮ್ಮನ ಪಾತ್ರದಲ್ಲಿ ಕಿರುತೆರೆ ಪ್ರೇಕ್ಷಕರ ಪ್ರೀತಿ ಗಳಿಸಿದ್ದಾರೆ.
ಇತರ ಗ್ಯಾಲರಿಗಳು