ಪ್ರಪಂಚಕ್ಕೆ ನೀ ಅಮ್ಮನಾದರೆ, ನನಗೆ ನೀನೇ ಪ್ರಪಂಚ; ಅಮ್ಮಂದಿರ ದಿನಕ್ಕೆ ವಿಶೇಷವಾಗಿ ವಿಶ್ ಮಾಡಲು ಇಲ್ಲಿವೆ ಐಡಿಯಾಗಳು
ಅಮ್ಮ ಎಂಬ ಜಗತ್ತಿನ ಅದ್ಭುತ ಜೀವಕ್ಕೆ ವಿಶೇಷ ಗೌರವ ಸಲ್ಲಿಸುವ ಸಲುವಾಗಿ ಪ್ರತಿವರ್ಷ ಮೇ ತಿಂಗಳ ಎರಡನೇ ಭಾನುವಾರ ಅಮ್ಮಂದಿರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಮೇ 11ಕ್ಕೆ ಅಮ್ಮಂದಿರ ದಿನವಿದ್ದು, ಈ ದಿನ ನಿಮ್ಮ ತಾಯಿಗೆ ವಿಶೇಷವಾಗಿ ವಿಶ್ ಮಾಡಬೇಕು ಅಂತಿದ್ರೆ ಇಲ್ಲಿದೆ ಐಡಿಯಾಗಳು.
(1 / 9)
ಈ ಜಗತ್ತಿನ ಮೊದಲ ಸೃಷ್ಟಿ ಅಮ್ಮ ಎಂದರೆ ತಪ್ಪಲ್ಲ. ಅಮ್ಮ ಒಂದು ಜೀವವಷ್ಟೇ ಅಲ್ಲ ತ್ಯಾಗ, ಪ್ರೀತಿ, ಮಮಕಾರದ ಪ್ರತೀಕ. ಈ ಜಗತ್ತಿನ ಅದ್ಭುತಗಳಲ್ಲಿ ಮೊದಲನೇಯವಳು ಅಮ್ಮ. ಒಂದು ಜೀವಕ್ಕೆ ಜೀವ ಕೊಡುವುದು ಮಾತ್ರವಲ್ಲ, ಆ ಜೀವಕ್ಕೆ ಜೀವನ ಕೊಡುವುದು ತಾಯಿ ಎಂಬ ಮಹಾನ್ ವ್ಯಕ್ತಿ. ಇಂತಹ ತಾಯಿಯ ಮಹತ್ವವನ್ನು ಹೆಚ್ಚಿಸುವ, ಅವಳಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತಿವರ್ಷ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಅಮ್ಮಂದಿರ ದಿನಕ್ಕೆ ನಿಮ್ಮ ತಾಯಿಗೆ ವಿಶೇಷವಾಗಿ ವಿಶ್ ಮಾಡಬೇಕು ಅಂತಿದ್ರೆ ಇಲ್ಲಿವೆ ಶುಭಾಶಯ ಸಂದೇಶಗಳು.
(2 / 9)
ಅಮ್ಮ, ನೀನು ನನಗಾಗಿ ಮಾಡಿರುವ ಎಲ್ಲಾ ತ್ಯಾಗಗಳಿಗೆ ಧನ್ಯವಾದ ಹೇಳಲು ಮತ್ತು ನನಗೆ ನಿನ್ನ ಮೇಲಿರುವ ಪ್ರೀತಿ ವ್ಯಕ್ತಪಡಿಸಲು ಪದಗಳು ಎಂದಿಗೂ ಸಾಲುವುದಿಲ್ಲ, ನೀನು ಎಂದೆಂದಿಗೂ ಬೆಸ್ಟ್. ಅಮ್ಮಂದಿರ ದಿನದ ಶುಭಾಶಯಗಳು ನಿನಗೆ.
(3 / 9)
ನಿನ್ನ ತ್ಯಾಗ, ತಾಳ್ಮೆ, ಪರಿಶ್ರಮವಿಲ್ಲದೆ ನಮ್ಮ ಕುಟುಂಬವಿಲ್ಲ ಅಮ್ಮ. ನಿನಗಾಗಿ ನಾವೆಲ್ಲರೂ ಕೃತಜ್ಞರಾಗಿರುತ್ತೇವೆ. ಹ್ಯಾಪಿ ಮದರ್ಸ್ ಡೇ ಅಮ್ಮ.
(4 / 9)
ಈ ಜಗತ್ತಿನಲ್ಲಿ ಎಂದಿಗೂ ಬೆಲೆ ಕಟ್ಟಲಾಗದ ಒಂದು ವಿಚಾರವೆಂದರೆ ಅದು ತಾಯಿ ಪ್ರೀತಿ. ನಿನ್ನ ಈ ಪ್ರೀತಿಗೆ, ಅದರ ರೀತಿಗೆ ನಾನೆಂದು ಚಿರಋಣಿ. ಅಮ್ಮಂದಿರ ದಿನದ ಶುಭಾಶಯ
(5 / 9)
ಪ್ರಪಂಚಕ್ಕೆ ನೀನು ನನ್ನ ತಾಯಿ, ಆದರೆ ನನಗೆ ನೀನೇ ಪ್ರಪಂಚ. ನೀನು ಈ ಜಗತ್ತಿನ ಅತಿ ಅದ್ಭುತ. ಅಮ್ಮಂದಿರ ದಿನದ ಶುಭಾಶಯ ನನ್ನೊಲವಿನ ಜೀವ.
(6 / 9)
ಈ ಪ್ರಪಂಚದಲ್ಲಿ ಯಾರು ಯಾರ ಸ್ಥಾನವನ್ನು ಬೇಕಾದರೂ ತುಂಬಬಹುದು, ಆದರೆ ಅಮ್ಮ ನಿನ್ನ ಸ್ಥಾನವನ್ನು ಬೇರೆ ಯಾರಿಂದಲೂ ತುಂಬಲು ಸಾಧ್ಯವಿಲ್ಲ. ನಿನಗೆ ನೀನೇ ಸಾಟಿ ಅಮ್ಮ. ನಿನಗೆ ಅಮ್ಮಂದಿರ ದಿನದ ಶುಭಾಶಯ.
(7 / 9)
ಈ ಜಗತ್ತಿನಲ್ಲಿ ತಾಯಿಯ ಮಡಿಲಿಗಿಂತ ಅದ್ಭುತ ಜಾಗವಿಲ್ಲ. ಈ ಜಾಗಕ್ಕೆ ಸರಿಸಾಟಿ ಬೇರಿಲ್ಲ. ನಿನ್ನ ಪ್ರೀತಿಗೆ ಅದರ ರೀತಿಗೆ ನಾನೆಂದಿಗೂ ಶರಣು. ಅಮ್ಮಂದಿರ ದಿನದ ಶುಭಾಶಯ
(8 / 9)
ತ್ಯಾಗ, ಪ್ರೀತಿ, ಕರುಣೆ, ಮಮಕಾರ ಈ ಎಲ್ಲದ್ದಕ್ಕೂ ಪ್ರತಿರೂಪ ನೀನು ಅಮ್ಮ, ನೀ ಇಲ್ಲ ಎಂದರೆ ನನ್ನ ಬಾಳಿಲ್ಲ. ನೀನು ನನಗಾಗಿ ಮಾಡಿದ ಸಕಲಕ್ಕೂ ಮನದಾಳದ ಧನ್ಯವಾದ. ಹ್ಯಾಪಿ ಮದರ್ಸ್ ಡೇ ಮೈ ಡಿಯರ್
ಇತರ ಗ್ಯಾಲರಿಗಳು