ಐಪಿಎಲ್ನಲ್ಲಿ ಎಂಎಸ್ ಧೋನಿ ‘ದ್ವಿಶತಕ’; ಈ ಚರಿತ್ರೆ ಸೃಷ್ಟಿಸಿದ ಮೊದಲ ಆಟಗಾರ
- MS Dhoni: ವಿಕೆಟ್ಗಳ ಹಿಂದೆ ಅತ್ಯಂತ ಚಾಣಾಕ್ಷತೆ ತೋರುವ ಸಿಎಸ್ಕೆ ನಾಯಕ ಎಂಎಸ್ ಧೋನಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
- MS Dhoni: ವಿಕೆಟ್ಗಳ ಹಿಂದೆ ಅತ್ಯಂತ ಚಾಣಾಕ್ಷತೆ ತೋರುವ ಸಿಎಸ್ಕೆ ನಾಯಕ ಎಂಎಸ್ ಧೋನಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
(1 / 7)
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ನೂತನ ಇತಿಹಾಸ ಬರೆದಿದ್ದಾರೆ. ಅಲ್ಲದೆ, ಅದ್ಭುತ ಪ್ರದರ್ಶನದ ಮೂಲಕವೂ ಗಮನ ಸೆಳೆದಿದ್ದಾರೆ.
(2 / 7)
ಲಕ್ನೋ ಆಟಗಾರ ಆಯುಷ್ ಬದೋನಿ ಅವರು ಸ್ಟಂಪ್ ಮಾಡಿದ ಬೆನ್ನಲ್ಲೇ ಧೋನಿ, ಐಪಿಎಲ್ ಇತಿಹಾಸದಲ್ಲಿ ಚರಿತ್ರೆ ಸೃಷ್ಟಿಸಿದ್ದಾರೆ. 14ನೇ ಓವರ್ನಲ್ಲಿ ಈ ದೊಡ್ಡ ಮೈಲಿಗಲ್ಲು ತಲುಪಿದ್ದಾರೆ.
(3 / 7)
ಐಪಿಎಲ್ನಲ್ಲಿ ವಿಕೆಟ್ ಹಿಂದೆ ನಿಂತು 200 ವಿಕೆಟ್ ಪಡೆದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಧೋನಿ ಬಿಟ್ಟರೆ ಯಾವೊಬ್ಬ ವಿಕೆಟ್ ಕೀಪರ್ ಕೂಡ ಈ ಸಾಧನೆ ಮಾಡಿಲ್ಲ. ದಿನೇಶ್ ಕಾರ್ತಿಕ್ ಎರಡನೇ ಸ್ಥಾನದಲ್ಲಿದ್ದಾರೆ.
(4 / 7)
ಐಪಿಎಲ್ನಲ್ಲಿ ಇದು ಧೋನಿ ಅವರ 46ನೇ ಸ್ಟಂಪ್. ಇದರಲ್ಲೂ ಅವರೇ ಮುಂದಿದ್ದಾರೆ. 43ನೇ ವಯಸ್ಸಿನಲ್ಲೂ ತನ್ನನ್ನು ಮೀರಿಸುವ ಕ್ರಿಕೆಟಿಗನಿಲ್ಲ. ಇದೇ ಐಪಿಎಲ್ನಲ್ಲಿ ಆಡಿರುವ 7 ಪಂದ್ಯಗಳಲ್ಲಿ 4 ಸ್ಟಂಪ್ ಮಾಡುವ ಗಮನ ಸೆಳೆದಿದ್ದಾರೆ.
(5 / 7)
ಅತ್ಯದ್ಬುತ ಇನ್ನಿಂಗ್ಸ್ನೊಂದಿಗೆ ಗಮನ ಸೆಳೆದಿದ್ದ ಧೋನಿ, ಅತ್ಯುತ್ತಮ ರನೌಟ್ನಿಂದಿಗೆ ಸಂಚಲನ ಸೃಷ್ಟಿಸಿದ್ದಾರೆ. ಓವರ್ನ 20ನೇ ಎಸೆತದಲ್ಲಿ ಮತೀಶ ಪತಿರಾಣ ವೈಡ್ ಹಾಕಿದರು. ಆದರೆ ಅಗಲವಾದ ವೈಡ್ ಹಾಕಿದ ಹಿನ್ನೆಲೆ ರಿಷಭ್ ಪಂತ್ ಓಡಿದರು.
(AP)(6 / 7)
ಆದರೆ ಸ್ಟ್ರೈಕ್ನಲ್ಲಿದ್ದ ಅಬ್ದುಲ್ ಸಮದ್ ನಾನ್ ಸ್ಟ್ರೈಕ್ನತ್ತ ಓಡಿ ಬರುವಷ್ಟರಲ್ಲಿ ಧೋನಿ ಅಂಡರ್ ಆರ್ಮ್ ಥ್ರೋ ಎಸೆದರು. ಈ ಅದ್ಭುತ ರನೌಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಧೋನಿ ಕೀಪಿಂಗ್ ಚಮತ್ಕಾರಕ್ಕೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
(AFP)ಇತರ ಗ್ಯಾಲರಿಗಳು