IPL Expensive Players: ಐಪಿಎಲ್ ಪ್ರತಿ ಹರಾಜಿನಲ್ಲೂ ಅತಿ ಹೆಚ್ಚು ಬೆಲೆಗೆ ಬಿಕರಿಯಾದ ಆಟಗಾರರು ಇವರೇ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ipl Expensive Players: ಐಪಿಎಲ್ ಪ್ರತಿ ಹರಾಜಿನಲ್ಲೂ ಅತಿ ಹೆಚ್ಚು ಬೆಲೆಗೆ ಬಿಕರಿಯಾದ ಆಟಗಾರರು ಇವರೇ

IPL Expensive Players: ಐಪಿಎಲ್ ಪ್ರತಿ ಹರಾಜಿನಲ್ಲೂ ಅತಿ ಹೆಚ್ಚು ಬೆಲೆಗೆ ಬಿಕರಿಯಾದ ಆಟಗಾರರು ಇವರೇ

IPL 2025 Mega Auction: 2008 ರಿಂದ 2024ರ ತನಕ ಒಟ್ಟು 17 ಐಪಿಎಲ್​ಗಳು ಮುಕ್ತಾಯಗೊಂಡಿದ್ದು, 15 ಬಾರಿ ಮೆಗಾ ಹರಾಜು ಮತ್ತು ಮಿನಿ ಹರಾಜುಗಳು ನಡೆದಿವೆ. ಪ್ರತಿ ಸೀಸನ್​ನಲ್ಲೂ ಹರಾಜಿನಲ್ಲಿ ಅತಿ ಹೆಚ್ಚು ಬೆಲೆ ಪಡೆದ ಆಟಗಾರರ ಪಟ್ಟಿ ಇಲ್ಲಿದೆ ನೋಡಿ.

Most Expensive Player in IPL: 2008 ರಿಂದ ನಡೆಯುತ್ತಿರುವ ಐಪಿಎಲ್​ 16 ಆವೃತ್ತಿಗಳನ್ನು ಪೂರ್ಣಗೊಂಡಿವೆ. ಈ ಸಂದರ್ಭದಲ್ಲಿ 15 ಐಪಿಎಲ್ ಹರಾಜುಗಳು ನಡೆದಿದ್ದು, ಮತ್ತೊಂದು ಆಕ್ಷನ್​ಗೆ ಬಿಸಿಸಿಐ ಸಜ್ಜಾಗಿದೆ. ಇದೇ ನವೆಂಬರ್ ನವೆಂಬರ್ 24, 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮೆಗಾ ಹರಾಜು ನಡೆಯಲಿದೆ. ಈ ಇಷ್ಟು ಹರಾಜುಗಳ ಪೈಕಿ ಪ್ರತಿ ಸೀಸನ್​ನಲ್ಲೂ ಅತಿ ಹೆಚ್ಚು ಮೊತ್ತಕ್ಕೆ ಖರೀದಿಯಾದ ಆಟಗಾರರು ಯಾರು? ಇಲ್ಲಿದೆ ಪಟ್ಟಿ.
icon

(1 / 8)

2008ರಲ್ಲಿ ಆರಂಭಗೊಂಡ ಐಪಿಎಲ್ ಹರಾಜಿನಲ್ಲಿ ಎಂಎಸ್ ಧೋನಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 9.5 ಕೋಟಿ ರೂಪಾಯಿಗೆ ಖರೀದಿಸಿತ್ತು. ಆ ಸೀಸನ್​ನಲ್ಲಿ ಅವರೇ ದುಬಾರಿ ಆಟಗಾರ. 2009ರ ಹರಾಜಿನಲ್ಲಿ ಕೆವಿನ್ ಪೀಟರ್ಸನ್ ಮತ್ತು ಆಂಡ್ರ್ಯೂ ಫ್ಲಿಂಟಾಫ್ ಅವರನ್ನು ತಲಾ 9.8 ಕೋಟಿ ರೂ.ಗೆ ಕ್ರಮವಾಗಿ ಆರ್​​ಸಿಬಿ ಮತ್ತು ಸಿಎಸ್​ಕೆ ಖರೀದಿಸಿತ್ತು.
icon

(2 / 8)

2010ರಲ್ಲಿ ಶೇನ್ ಬಾಂಡ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಕೀರನ್ ಪೊಲಾರ್ಡ್ ಅವರನ್ನು ಮುಂಬೈ ಇಂಡಿಯನ್ಸ್ ತಲಾ 4.8 ಕೋಟಿ ರೂ.ಗೆ ಖರೀದಿಸಿತ್ತು. ಆಗ ಅವರೇ ಟಾಪರ್ಸ್ ಆಗಿದ್ದರು. 2011ರಲ್ಲಿ ಗೌತಮ್ ಗಂಭೀರ್ ಅವರನ್ನು ಕೋಲ್ಕತಾ 14.9 ಕೋಟಿ ರೂಪಾಯಿಗೆ ಸೇಲ್ ಆಗುವ ಮೂಲಕ ದುಬಾರಿ ಆಟಗಾರನಾಗಿದ್ದರು.
icon

(3 / 8)

2012ರಲ್ಲಿ ರವೀಂದ್ರ ಜಡೇಜಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 12.8 ಕೋಟಿ ರೂ.ಗೆ, ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು 2013ರಲ್ಲಿ ಮುಂಬೈ ಇಂಡಿಯನ್ಸ್ 6.3 ಕೋಟಿ ರೂ.ಗೆ ಹಾಗೂ ಯುವರಾಜ್ ಸಿಂಗ್ ಅವರನ್ನು 2014ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ಕೋಟಿ ರೂ.ಗೆ ಖರೀದಿಸಿತ್ತು.
icon

(4 / 8)

2016ರಲ್ಲಿ ಶೇನ್ ವ್ಯಾಟ್ಸನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9.5 ಕೋಟಿ ರೂ.ಗೆ ಖರೀದಿಯಾಗುವ ಮೂಲಕ ಅತಿ ಹೆಚ್ಚು ಮೊತ್ತಕ್ಕೆ ಸೇಲಾದ ಆಟಗಾರನಾಗಿದ್ದರು. 2017 ರಲ್ಲಿ ಬೆನ್ ಸ್ಟೋಕ್ಸ್ ಅವರನ್ನು ರೈಸಿಂಗ್ ಪುಣೆ ಸೂಪರ್​ ಜೈಂಟ್ಸ್ 14.5 ಕೋಟಿ ರೂ.ಗೆ ಮತ್ತು 2019 ರಲ್ಲಿ ಜಯದೇವ್ ಉನಾದ್ಕತ್ ಅವರನ್ನು 8.4 ಕೋಟಿ ರೂ.ಗೆ ಖರೀದಿಸಿತು. ಇವರು ಆಯಾ ಹರಾಜುಗಳಲ್ಲಿ ದುಬಾರಿ ಆಟಗಾರರಾಗಿದ್ದರು.
icon

(5 / 8)

2020ರಲ್ಲಿ ಪ್ಯಾಟ್ ಕಮಿನ್ಸ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 15.5 ಕೋಟಿ ರೂ.ಗೆ, 2021ರಲ್ಲಿ ಕ್ರಿಸ್ ಮೋರಿಸ್ ಅವರನ್ನು 16.25 ಕೋಟಿ ರೂ.ಗೆ ಮತ್ತು 2022 ರಲ್ಲಿ ಇಶಾನ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ 15.25 ಕೋಟಿ ರೂಪಾಯಿಗೆ ಖರೀದಿಸಿತು.
icon

(6 / 8)

2023ರಲ್ಲಿ ಸ್ಯಾಮ್ ಕರನ್ ಅವರನ್ನು ಪಂಜಾಬ್ ಕಿಂಗ್ಸ್ 18.5 ಕೋಟಿ ರೂ.ಗೆ ಖರೀದಿಸಿದರೆ, 2024 ರಲ್ಲಿ ಮಿಚೆಲ್ ಸ್ಟಾರ್ಕ್ ಅವರನ್ನು  ಕೋಲ್ಕತಾ ನೈಟ್ ರೈಡರ್ಸ್ 24.75 ಕೋಟಿ ರೂ.ಗೆ ಖರೀದಿಸಿತು. ಹಾಗಾದರೆ 2025ರ ಐಪಿಎಲ್ ಹರಾಜಿನಲ್ಲಿ ಯಾರು ದುಬಾರಿ ಮೊತ್ತಕ್ಕೆ ಖರೀದಿಯಾಗಬಹುದು ಎಂಬುದು ಕುತೂಹಲ ಮೂಡಿಸಿದೆ.
icon

(7 / 8)

ಪ್ರಸಕ್ತ ಸಾಲಿನ ಐಪಿಎಲ್​ ಮೆಗಾ ಹರಾಜಿನಲ್ಲಿ ರಿಷಭ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ವಿಲ್ ಜಾಕ್ಸ್ ಸೇರಿದಂತೆ ಪ್ರಮುಖ ಆಟಗಾರರು ಭರ್ಜರಿ ಮೊತ್ತಕ್ಕೆ ಸೇಲ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
icon

(8 / 8)

ಇತರ ಗ್ಯಾಲರಿಗಳು