ಟೀಮ್ ಇಂಡಿಯಾ ವೇಗಿಗೆ ಮದುವೆ, ಆಸೀಸ್ ಟಿ20 ಸರಣಿ ಮಧ್ಯದಲ್ಲೇ ತಂಡ ತೊರೆದ ಮುಕೇಶ್ ಕುಮಾರ್
- Mukesh Kumar Marriege: ಟೀಮ್ ಇಂಡಿಯಾ ವೇಗಿ ಮುಕೇಶ್ ಕುಮಾರ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಕಾರಣ, ಆಸೀಸ್ ವಿರುದ್ಧದ ಟಿ20 ಸರಣಿಯಿಂದ ಹೊರಹೋಗಿದ್ದಾರೆ. “ಅವರು ತಮ್ಮ ಜೀವನದ ಪ್ರಮುಖ ಪಂದ್ಯವನ್ನು ಆಡಲು ಹೋಗಿದ್ದಾರೆ” ಎಂದು ಭಾರತದ ನಾಯಕ ಸೂರ್ಯಕುಮಾರ್ ಯಾದವ್ 3ನೇ ಟಿ20 ಪಂದ್ಯದ ಟಾಸ್ ಪ್ರಕ್ರಿಯೆ ವೇಳೆ ಹೇಳಿದರು.
- Mukesh Kumar Marriege: ಟೀಮ್ ಇಂಡಿಯಾ ವೇಗಿ ಮುಕೇಶ್ ಕುಮಾರ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಕಾರಣ, ಆಸೀಸ್ ವಿರುದ್ಧದ ಟಿ20 ಸರಣಿಯಿಂದ ಹೊರಹೋಗಿದ್ದಾರೆ. “ಅವರು ತಮ್ಮ ಜೀವನದ ಪ್ರಮುಖ ಪಂದ್ಯವನ್ನು ಆಡಲು ಹೋಗಿದ್ದಾರೆ” ಎಂದು ಭಾರತದ ನಾಯಕ ಸೂರ್ಯಕುಮಾರ್ ಯಾದವ್ 3ನೇ ಟಿ20 ಪಂದ್ಯದ ಟಾಸ್ ಪ್ರಕ್ರಿಯೆ ವೇಳೆ ಹೇಳಿದರು.
(1 / 5)
ಆಸ್ಟ್ರೇಲಿಯ ವಿರುದ್ಧದ ಸರಣಿಯ ಮೂರನೇ ಟಿ20 ಪಂದ್ಯಕ್ಕೆ ಭಾರತದ ಆಡುವ ಬಳಗದಲ್ಲಿ ಆವೇಶ್ ಖಾನ್‌ಗೆ ಸ್ಥಾನ ನೀಡಲಾಯ್ತು. ಮುಕೇಶ್ ಕುಮಾರ್ ಆಡುವ ಬಳಗದಲ್ಲಿ ಇರಲಿಲ್ಲ. ಬಂಗಾಳದ ಸ್ಟಾರ್ ವೇಗಿ ಮೊದಲೆರಡು ಪಂದ್ಯಗಳಲ್ಲಿ ಉತ್ತಮ ಬೌಲಿಂಗ್ ಮಾಡಿದ್ದರು. ಬದಲಿಗೆ, ಡೆತ್ ಓವರ್‌ಗಳಲ್ಲಿ ಅವರ ಬೌಲಿಂಗ್ ಟೀಮ್ ಇಂಡಿಯಾಗೆ ಆತ್ಮವಿಶ್ವಾಸ ತುಂಬಿತ್ತು. ಆದರೆ, ತಂಡದಿಂದ ಅವರು ಹೊರಗುಳಿಯಲು ಪ್ರಮುಖ ಕಾರಣವಿದೆ.(AFP)
(2 / 5)
ಮುಕೇಶ್ ಕುಮಾರ್ ಅವರು ಮದುವೆಯಾಗುತ್ತಿರುವ ಕಾರಣ, ತಂಡದಿಂದ ರಜೆ ಪಡೆದಿದ್ದಾರೆ. ಅವರು ವೈವಾಹಿಕ ಜೀವನಕ್ಕೆ ಕಾಲಿರುತ್ತಿರುವ ಕುರಿತು ಮೂರನೇ ಟಿ20 ಪಂದ್ಯದ ಟಾಸ್ ಪ್ರಕ್ರಿಯೆ ವೇಳೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ತಿಳಿಸಿದ್ದರು.
(3 / 5)
ಈ ಕುರಿತು ಬಿಸಿಸಿಐ ಕೂಡ ಅಧಿಸೂಚನೆ ಹೊರಡಿಸಿದೆ. "ವೇಗದ ಬೌಲರ್ ಮುಖೇಶ್ ಕುಮಾರ್ ಅವರು ಗುವಾಹಟಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯಕ್ಕೂ ಮುಂಚಿತವಾಗಿ ಭಾರತ ತಂಡದಿಂದ ಬಿಡುಗಡೆ ಮಾಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದರು. ಅವರು ವಿವಾಹವಾಗುತ್ತಿದ್ದು, ಮದುವೆಯ ಅವಧಿಗೆ ರಜೆ ನೀಡಲಾಗಿದೆ. ರಾಯ್‌ಪುರದಲ್ಲಿ ನಡೆಯಲಿರುವ 4ನೇ ಟಿ20 ಪಂದ್ಯಕ್ಕೂ ಮುನ್ನ ಅವರು ತಂಡ ಸೇರಿಕೊಳ್ಳಲಿದ್ದಾರೆ. ಸರಣಿಯ ಉಳಿದ ಪಂದ್ಯಗಳಿಗೆ ವೇಗಿ ದೀಪಕ್ ಚಹಾರ್ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಹೇಳಿಕೆ ತಿಳಿಸಿದೆ.(AP)
(4 / 5)
ಕಳೆದ ಫೆಬ್ರವರಿಯಲ್ಲಿ ದಿವ್ಯಾ ಎಂಬವರ ಜೊತೆ ಮುಕೇಶ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಸಮಯದಲ್ಲಿ, ನಿಶ್ಚಿತಾರ್ಥ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಸುದ್ದಿಯನ್ನು ಘೋಷಿಸಿದರು.
ಇತರ ಗ್ಯಾಲರಿಗಳು