ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮುಂಬಯಿ ಘಾಟ್‌ಕೋಪರ್‌ನಲ್ಲಿ ಕುಸಿದು ಬಿದ್ದ ಹೋರ್ಡಿಂಗ್, ನಟ ಕಾರ್ತಿಕ್ ಆರ್ಯನ್ ಸಂಬಂಧಿಕರೂ ಸೇರಿ 16 ಸಾವು, ಫೋಟೋಸ್

ಮುಂಬಯಿ ಘಾಟ್‌ಕೋಪರ್‌ನಲ್ಲಿ ಕುಸಿದು ಬಿದ್ದ ಹೋರ್ಡಿಂಗ್, ನಟ ಕಾರ್ತಿಕ್ ಆರ್ಯನ್ ಸಂಬಂಧಿಕರೂ ಸೇರಿ 16 ಸಾವು, ಫೋಟೋಸ್

ಮುಂಬಯಿ ಘಾಟ್‌ಕೋಪರ್‌ನಲ್ಲಿ ಕುಸಿದು ಬಿದ್ದ ಹೋರ್ಡಿಂಗ್ ಸಂಕಷ್ಟ ಇನ್ನೂ ಕಡಿಮೆಯಾಗಿಲ್ಲ. ಎರಡು ದಿನಗಳ ಮೊದಲು ಸಂಭವಿಸಿದ ಈ ದುರಂತದಲ್ಲಿ ನಟ ಕಾರ್ತಿಕ್ ಆರ್ಯನ್ ಸಂಬಂಧಿಕರೂ ಸೇರಿ 16 ಜನರ ಸಾವು ಸಂಭವಿಸಿದೆ. ಗಾಯಾಳುಗಳೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಲ್ಲಿದೆ ಚಿತ್ರನೋಟ.  

ಮುಂಬೈ ಘಾಟ್ಕೋಪರ್ ಹೋರ್ಡಿಂಗ್ ಕುಸಿದು ಬಿದ್ದ ಘಟನೆ ನಡೆದು ಎರಡು ದಿನಗಳಾದವು. ಈ ದುರಂತದಲ್ಲಿ ಒಟ್ಟು 16 ಜನ ಮೃತಪಟ್ಟಿದ್ದು, ಅವರ ಪೈಕಿ ಕಾರ್ತಿಕ್ ಆರ್ಯನ್ ಅವರ ಸಂಬಂಧಿಕರೂ ಇದ್ದರು. ಕಾರ್ತಿಕ್ ತಾಯಿಯ ತಂಗಿ ಚಿಕ್ಕಮ್ಮ ಮತ್ತು ಚಿಕ್ಕಪ್ಪ ಮೃತರು. ನಿವೃತ್ತ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಅಧಿಕಾರಿ ಮನೋಜ್ ಚಾನ್ಸೋರಿಯಾ ಮತ್ತು ಅವರ ಪತ್ನಿ ಅನಿತಾ ಚಾನ್ಸೋರಿಯಾ ಎಂದು ಗುರುತಿಸಲಾಗಿದೆ.
icon

(1 / 7)

ಮುಂಬಯಿಯ ಘಾಟ್‌ಕೋಪರ್‌ನ ಛೇಡಾನಗರ್ ಪ್ರದೇಶದ ಪೆಟ್ರೋಲ್ ಪಂಪ್ ಮೇಲೆ ಇದ್ದ 120X120 ಅಡಿ ಎತ್ತರದ ಹೋರ್ಡಿಂಗ್ ಕುಸಿದು ಬಿದ್ದು ದುರಂತ ಸಂಭವಿಸಿತ್ತು. ಈ ದುರಂತದಲ್ಲಿ 16 ಜನರು ಸಾವನ್ನಪ್ಪಿದ್ದಾರೆ. 75ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
icon

(2 / 7)

ಮುಂಬಯಿಯ ಘಾಟ್‌ಕೋಪರ್‌ನ ಛೇಡಾನಗರ್ ಪ್ರದೇಶದ ಪೆಟ್ರೋಲ್ ಪಂಪ್ ಮೇಲೆ ಇದ್ದ 120X120 ಅಡಿ ಎತ್ತರದ ಹೋರ್ಡಿಂಗ್ ಕುಸಿದು ಬಿದ್ದು ದುರಂತ ಸಂಭವಿಸಿತ್ತು. ಈ ದುರಂತದಲ್ಲಿ 16 ಜನರು ಸಾವನ್ನಪ್ಪಿದ್ದಾರೆ. 75ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.(HT Photo)

ವರದಿಗಳ ಪ್ರಕಾರ, ಪೆಟ್ರೋಲ್ ಪಂಪ್ ಸಮೀಪ ಇದ್ದ ಕೆಂಪು ಎಸ್‌ಯುವಿಯಲ್ಲಿ ಕಾರ್ತಿಕ್ ಆರ್ಯನ್ ಚಿಕ್ಕಪ್ಪ ಮನೋಹರ್ ಮತ್ತು ಚಿಕ್ಕಮ್ಮ ಅನಿತಾ ಇದ್ದರು. ಹೋರ್ಡಿಂಗ್ ಕುಸಿದು ಬಿದ್ದಾಗ ಅದರ ಅಡಿಯಲ್ಲಿ ಈ ಎಸ್‌ಯುವಿ ಕೂಡ ಇತ್ತು. ಎರಡು ದಿನಗಳ ನಂತರ ಅವರ ಶವಗಳನ್ನು ಮೇಲೆತ್ತಲಾಗಿದೆ.
icon

(3 / 7)

ವರದಿಗಳ ಪ್ರಕಾರ, ಪೆಟ್ರೋಲ್ ಪಂಪ್ ಸಮೀಪ ಇದ್ದ ಕೆಂಪು ಎಸ್‌ಯುವಿಯಲ್ಲಿ ಕಾರ್ತಿಕ್ ಆರ್ಯನ್ ಚಿಕ್ಕಪ್ಪ ಮನೋಹರ್ ಮತ್ತು ಚಿಕ್ಕಮ್ಮ ಅನಿತಾ ಇದ್ದರು. ಹೋರ್ಡಿಂಗ್ ಕುಸಿದು ಬಿದ್ದಾಗ ಅದರ ಅಡಿಯಲ್ಲಿ ಈ ಎಸ್‌ಯುವಿ ಕೂಡ ಇತ್ತು. ಎರಡು ದಿನಗಳ ನಂತರ ಅವರ ಶವಗಳನ್ನು ಮೇಲೆತ್ತಲಾಗಿದೆ.(PTI)

ದಂಪತಿ ತಮ್ಮ ವೀಸಾಕ್ಕಾಗಿ ಅಗತ್ಯ ದಾಖಲೆ ಕೊಟ್ಟು ಆ ಪ್ರಕ್ರಿಯೆ ಪೂರ್ಣಗೊಳಿಸಲು ಮತ್ತು ತಮ್ಮ ಮಗ ಯಶ್ ಅವರನ್ನು ಭೇಟಿ ಮಾಡಲು ಈ ಪ್ರದೇಶದ ಮೂಲಕ ಸಾಗಿದ್ದರು ಎಂದು ವರದಿಯಾಗಿದೆ.
icon

(4 / 7)

ದಂಪತಿ ತಮ್ಮ ವೀಸಾಕ್ಕಾಗಿ ಅಗತ್ಯ ದಾಖಲೆ ಕೊಟ್ಟು ಆ ಪ್ರಕ್ರಿಯೆ ಪೂರ್ಣಗೊಳಿಸಲು ಮತ್ತು ತಮ್ಮ ಮಗ ಯಶ್ ಅವರನ್ನು ಭೇಟಿ ಮಾಡಲು ಈ ಪ್ರದೇಶದ ಮೂಲಕ ಸಾಗಿದ್ದರು ಎಂದು ವರದಿಯಾಗಿದೆ.(HT Photo/Praful Gangurde)

ಮುಂಬೈನಲ್ಲಿ ಹೋರ್ಡಿಂಗ್ ಅಪಘಾತದ ಸ್ಥಳದಲ್ಲಿ ಕಾರುಗಳು ಸೇರಿದಂತೆ 70 ಕ್ಕೂ ಹೆಚ್ಚು ವಾಹನಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ.
icon

(5 / 7)

ಮುಂಬೈನಲ್ಲಿ ಹೋರ್ಡಿಂಗ್ ಅಪಘಾತದ ಸ್ಥಳದಲ್ಲಿ ಕಾರುಗಳು ಸೇರಿದಂತೆ 70 ಕ್ಕೂ ಹೆಚ್ಚು ವಾಹನಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ.(HT Photo/Praful Gangurde)

ಏತನ್ಮಧ್ಯೆ, ಉಪನಗರ ಘಾಟ್‌ಕೋಪರ್‌ನಲ್ಲಿ 16 ಜನರ ಸಾವಿಗೆ ಕಾರಣವಾದ ಹೋರ್ಡಿಂಗ್‌ ಸ್ಥಾಪಿಸಿದ ಜಾಹೀರಾತು ಸಂಸ್ಥೆಯ ನಿರ್ದೇಶಕ ಭವೇಶ್ ಭಿಂಡೆ ಅವರನ್ನು ಮುಂಬೈ ನ್ಯಾಯಾಲಯವು ಶುಕ್ರವಾರ ಮೇ 26 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
icon

(6 / 7)

ಏತನ್ಮಧ್ಯೆ, ಉಪನಗರ ಘಾಟ್‌ಕೋಪರ್‌ನಲ್ಲಿ 16 ಜನರ ಸಾವಿಗೆ ಕಾರಣವಾದ ಹೋರ್ಡಿಂಗ್‌ ಸ್ಥಾಪಿಸಿದ ಜಾಹೀರಾತು ಸಂಸ್ಥೆಯ ನಿರ್ದೇಶಕ ಭವೇಶ್ ಭಿಂಡೆ ಅವರನ್ನು ಮುಂಬೈ ನ್ಯಾಯಾಲಯವು ಶುಕ್ರವಾರ ಮೇ 26 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.(HT Photo/Anshuman Poyrekar)

ದುರಂತದ ನಂತರ, ಪಂತ್ ನಗರ ಪೊಲೀಸ್ ಠಾಣೆಯಲ್ಲಿ ಭಿಂಡೆ, ಜಾಹೀರಾತು ಸಂಸ್ಥೆ ಇಗೊ ಮೀಡಿಯಾದ ಎಲ್ಲಾ ನಿರ್ದೇಶಕರು, ಅದರ ಅಧಿಕಾರಿಗಳು ಮತ್ತು ಉದ್ಯೋಗಿಗಳ ವಿರುದ್ಧ ಕೊಲೆಗೆ ಸಮವಲ್ಲದ ನರಹತ್ಯೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಈ ಹಿಂದೆ ತಿಳಿಸಿದ್ದರು.
icon

(7 / 7)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು