ಕನ್ನಡ ಸುದ್ದಿ  /  Photo Gallery  /  Mumbai Indians Announce Kwena Maphaka As Replacement For Dilshan Madushanka Who Is Kwena Maphaka Ipl 2024 Prs

ದಿಲ್ಶನ್ ಮಧುಶಂಕ ಬದಲಿಗೆ ಮುಂಬೈ ಇಂಡಿಯನ್ಸ್​ ಸೇರಿಕೊಂಡ ಖಡಕ್ ಬೌಲರ್; 17 ವರ್ಷದ ಈ ಕ್ವೆನಾ ಮಫಾಕಾ ಯಾರು?

  • ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮತ್ತೊಂದು ಬದಲಾವಣೆ ಮಾಡಲಾಗಿದೆ. 17 ವರ್ಷದ ವೇಗಿ ಕ್ವೆನಾ ಮಫಾಕಾ ಅವರಿಗೆ ಎಂಐ ಮಣೆ ಹಾಕಿದೆ. ಹಾಗಾದರೆ ಈ ವೇಗದ ಬೌಲರ್ ಯಾರು? ಇಲ್ಲಿದೆ ವಿವರ.

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​​ ಆರಂಭಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಯುವ ವೇಗಿ ಕ್ವೆನಾ ಮಫಾಕಾ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಆಯ್ಕೆ ಮಾಡಿದೆ. ಅಂಡರ್-19 ವಿಶ್ವಕಪ್​ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು ಈ 17 ವರ್ಷದ ವೇಗದ ಬೌಲರ್. ಅವರು 140 ಕಿಲೋ ಮೀಟರ್​​ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ.
icon

(1 / 5)

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​​ ಆರಂಭಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಯುವ ವೇಗಿ ಕ್ವೆನಾ ಮಫಾಕಾ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಆಯ್ಕೆ ಮಾಡಿದೆ. ಅಂಡರ್-19 ವಿಶ್ವಕಪ್​ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು ಈ 17 ವರ್ಷದ ವೇಗದ ಬೌಲರ್. ಅವರು 140 ಕಿಲೋ ಮೀಟರ್​​ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ.(Mumbai Indians)

ಶ್ರೀಲಂಕಾದ ವೇಗಿ ದಿಲ್ಶಾನ್ ಮಧುಶಂಕ ಅವರು ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಹಾಗಾಗಿ ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಗುಳಿದಿದ್ದಾರೆ. ಇದೀಗ ಮಧುಶಂಕ ಬದಲಿಗೆ ಮಫಾಕಾ ಅವರನ್ನು ಮುಂಬೈ ಆಯ್ಕೆ ಮಾಡಿದೆ, ಮಧುಶಂಕ ಅವರು 4.60 ಕೋಟಿಗೆ ಸೇಲ್ ಆಗಿದ್ದರು.
icon

(2 / 5)

ಶ್ರೀಲಂಕಾದ ವೇಗಿ ದಿಲ್ಶಾನ್ ಮಧುಶಂಕ ಅವರು ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಹಾಗಾಗಿ ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಗುಳಿದಿದ್ದಾರೆ. ಇದೀಗ ಮಧುಶಂಕ ಬದಲಿಗೆ ಮಫಾಕಾ ಅವರನ್ನು ಮುಂಬೈ ಆಯ್ಕೆ ಮಾಡಿದೆ, ಮಧುಶಂಕ ಅವರು 4.60 ಕೋಟಿಗೆ ಸೇಲ್ ಆಗಿದ್ದರು.(AFP)

ಇದೇ ವರ್ಷ ಸೌತ್​ ಆಫ್ರಿಕಾದಲ್ಲಿ ನಡೆದ ಅಂಡರ್-19 ವಿಶ್ವಕಪ್​​​​ನಲ್ಲಿ​​ ಕ್ವಿನಾ ಮಫಾಕಾ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು. 6 ಪಂದ್ಯಗಳಲ್ಲಿ 21 ವಿಕೆಟ್ ಉರುಳಿಸಿದ್ದರು. ಅಂಡರ್ 19 ವಿಶ್ವಕಪ್ ಆವೃತ್ತಿಯಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
icon

(3 / 5)

ಇದೇ ವರ್ಷ ಸೌತ್​ ಆಫ್ರಿಕಾದಲ್ಲಿ ನಡೆದ ಅಂಡರ್-19 ವಿಶ್ವಕಪ್​​​​ನಲ್ಲಿ​​ ಕ್ವಿನಾ ಮಫಾಕಾ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು. 6 ಪಂದ್ಯಗಳಲ್ಲಿ 21 ವಿಕೆಟ್ ಉರುಳಿಸಿದ್ದರು. ಅಂಡರ್ 19 ವಿಶ್ವಕಪ್ ಆವೃತ್ತಿಯಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.(ICC)

ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ವಿಶೇಷವಾಗಿ ಡೆತ್ ಓವರ್​​ಗಳಲ್ಲಿ ಕ್ವಿನ್ನಾ ಮಫಾಕಾ ಅವರ ಬೌಲಿಂಗ್ ಹೆಚ್ಚು ಗಮನ ಸೆಳೆಯಿತು. ಯಾರ್ಕರ್​​​ಗಳೊಂದಿಗೆ ಎದುರಾಳಿ ಆಟಗಾರರಿಗೆ ನಡುಕ ಹುಟ್ಟಿಸಿದ್ದರು. ದಕ್ಷಿಣ ಆಫ್ರಿಕಾದ ಅನ್​ಕ್ಯಾಪ್ಡ್​ ವೇಗದ ಬೌಲರ್ ಅನ್ನು ಮುಂಬೈ ಫ್ರಾಂಚೈಸಿ 50 ಲಕ್ಷ ರೂ.ಗಳ ಮೂಲ ಬೆಲೆಗೆ ಖರೀದಿಸಿದೆ. 
icon

(4 / 5)

ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ವಿಶೇಷವಾಗಿ ಡೆತ್ ಓವರ್​​ಗಳಲ್ಲಿ ಕ್ವಿನ್ನಾ ಮಫಾಕಾ ಅವರ ಬೌಲಿಂಗ್ ಹೆಚ್ಚು ಗಮನ ಸೆಳೆಯಿತು. ಯಾರ್ಕರ್​​​ಗಳೊಂದಿಗೆ ಎದುರಾಳಿ ಆಟಗಾರರಿಗೆ ನಡುಕ ಹುಟ್ಟಿಸಿದ್ದರು. ದಕ್ಷಿಣ ಆಫ್ರಿಕಾದ ಅನ್​ಕ್ಯಾಪ್ಡ್​ ವೇಗದ ಬೌಲರ್ ಅನ್ನು ಮುಂಬೈ ಫ್ರಾಂಚೈಸಿ 50 ಲಕ್ಷ ರೂ.ಗಳ ಮೂಲ ಬೆಲೆಗೆ ಖರೀದಿಸಿದೆ. 

2024ರ ಐಪಿಎಲ್ ಟೂರ್ನಿ ಮಾರ್ಚ್ 22ರಿಂದ ಆರಂಭವಾಗಲಿದೆ. ಮುಂಬೈ ತಂಡ ಮಾರ್ಚ್ 23ರಂದು ಗುಜರಾತ್ ಟೈಟಾನ್ಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದೆ. ಈ ಋತುವಿನಲ್ಲಿ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೈಬಿಡಲಾಗಿದ್ದು, ಹಾರ್ದಿಕ್ ಪಾಂಡ್ಯ ಅವರಿಗೆ ಜವಾಬ್ದಾರಿ ನೀಡಲಾಗಿದೆ. 
icon

(5 / 5)

2024ರ ಐಪಿಎಲ್ ಟೂರ್ನಿ ಮಾರ್ಚ್ 22ರಿಂದ ಆರಂಭವಾಗಲಿದೆ. ಮುಂಬೈ ತಂಡ ಮಾರ್ಚ್ 23ರಂದು ಗುಜರಾತ್ ಟೈಟಾನ್ಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದೆ. ಈ ಋತುವಿನಲ್ಲಿ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೈಬಿಡಲಾಗಿದ್ದು, ಹಾರ್ದಿಕ್ ಪಾಂಡ್ಯ ಅವರಿಗೆ ಜವಾಬ್ದಾರಿ ನೀಡಲಾಗಿದೆ. (PTI)


IPL_Entry_Point

ಇತರ ಗ್ಯಾಲರಿಗಳು