ಭಾರತ ಕುಂಬ್ಳೆ, ಅಶ್ವಿನ್ ಕಂಡಿರಬಹುದು; ಆದರೆ ಬಿಷ್ಣೋಯ್ ವಿಭಿನ್ನ ಸ್ಪಿನ್ನರ್; ಮುರಳೀಧರನ್ ಪ್ರಶಂಸೆ
- ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು ಭಾರತವು 4-1 ಅಂತರದಿಂದ ವಶಪಡಿಸಿಕೊಂಡು. ಸರಣಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದವರು ರವಿ ಬಿಷ್ಣೋಯ್. ಆಡಿದ 5 ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಕಬಳಿಸಿದ ಬಿಷ್ಣೋಯ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದೀಗ ಸ್ಪಿನ್ನರ್ ಕುರಿತು ದಿಗ್ಗಜ ಬೌಲರ್ ಮುತ್ತಯ್ಯ ಮುರಳೀಧರನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

(1 / 5)
ಬೆಂಗಳೂರಿನಲ್ಲಿ ನಡೆದ ಆಸೀಸ್ ವಿರುದ್ಧದ ಸರಣಿಯ ಅಂತಿಮ ಪಂದ್ಯಕ್ಕೂ ಮುನ್ನ ಜಿಯೋ ಸಿನಿಮಾ ಜೊತೆಗೆ ಮಾತನಾಡಿದ ಮುರಳೀಧರನ್, ಭಾರತೀಯ ಸ್ಪಿನ್ನರ್ ಕುರಿತು ಮಾತನಾಡಿದರು.
(2 / 5)
ಭಾರತದ ಕ್ರಿಕೆಟ್ ಇತಿಹಾಸದುದ್ದಕ್ಕೂ ಉತ್ತಮ ಸ್ಪಿನ್ನರ್‌ಗಳಿದ್ದಾರೆ. ಅನಿಲ್ ಕುಂಬ್ಳೆ ಅವರಿಂದ ಹಿಡಿದು ರವಿಚಂದ್ರನ್ ಅಶ್ವಿನ್‌ವರೆಗೆ ಹಲವರನ್ನು ನೀವು ನೋಡಿದ್ದೀರಿ. ಆದರೆ, ಬಿಷ್ಣೋಯ್ ಇತರ ಲೆಗ್ ಸ್ಪಿನ್ನರ್‌ಗಳಿಗಿಂತ ಭಿನ್ನ ಎಂದು ಮುರಳೀಧರನ್ ಹೇಳಿದ್ದಾರೆ.(PTI)
(3 / 5)
ಅವರು ವೇಗವಾಗಿ ಬೌಲ್ ಮಾಡುತ್ತಾರೆ ಮತ್ತು ಅವರು ಚೆಂಡನ್ನು ಸಾಕಷ್ಟು ಸ್ಲೈಡ್ ಮಾಡುತ್ತಾರೆ. ಅತ್ತ ಅಕ್ಸರ್ ಪಟೇಲ್ ಬೌಲಿಂಗ್ ಕೂಡಾ ನಿಖರವಾಗಿದೆ. ವಾಶಿಂಗ್ಟನ್ ಕೂಡಾ ಉತ್ತಮವಾಗಿದ್ದಾರೆ. ಅದರೆ ಅವರು ಹೆಚ್ಚು ಅರ್ನ್ ಮಾಡುವುದಿಲ್ಲ ಎಂದು ಮುರಳೀಧರನ್ ಹೇಳಿದರು.
(4 / 5)
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ರವಿ ಬಿಷ್ಣೋಯ್ ರವಿಚಂದ್ರನ್ ಅಶ್ವಿನ್ ದಾಖಲೆಯನ್ನು ಸರಿಗಟ್ಟಿದ್ದಾರೆ. ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಬಿಷ್ಣೋಯ್ ಹೊಂದಿದ್ದಾರೆ. ಈ ಹಿಂದೆ ಅಶ್ವಿನ್ ಈ ಸಾಧನೆ ಮಾಡಿದ್ದರು.
ಇತರ ಗ್ಯಾಲರಿಗಳು