ಮೈಸೂರಿನ ಅಜ್ಜನ ಮನೆಯಲ್ಲಿ ಶ್ರೀ ಶಂಕರ ಜಯಂತಿ ವೈಭವ; ಶತಾವಧಾನಿ ಗಣೇಶ್‌ ವಿಚಾರ ಮಂಥನ, ಯುವ ಕಲಾವಿದರ ಹಾಡು ನೃತ್ಯ ಸಂಗಮ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೈಸೂರಿನ ಅಜ್ಜನ ಮನೆಯಲ್ಲಿ ಶ್ರೀ ಶಂಕರ ಜಯಂತಿ ವೈಭವ; ಶತಾವಧಾನಿ ಗಣೇಶ್‌ ವಿಚಾರ ಮಂಥನ, ಯುವ ಕಲಾವಿದರ ಹಾಡು ನೃತ್ಯ ಸಂಗಮ

ಮೈಸೂರಿನ ಅಜ್ಜನ ಮನೆಯಲ್ಲಿ ಶ್ರೀ ಶಂಕರ ಜಯಂತಿ ವೈಭವ; ಶತಾವಧಾನಿ ಗಣೇಶ್‌ ವಿಚಾರ ಮಂಥನ, ಯುವ ಕಲಾವಿದರ ಹಾಡು ನೃತ್ಯ ಸಂಗಮ

ಮೈಸೂರಿನಲ್ಲಿ ಎಂಟು ವರ್ಷದಿಂದ ಸಮಾಜ ಸೇವೆ ಮಾಡುತ್ತಲೇ ವಿಭಿನ್ನ ಚಟುವಟಿಕೆಗಳ ಮೂಲಕ ಗಮನ ಸೆಳೆದಿರುವ ಅಜ್ಜನ ಮನೆ ಸಂಘಟನೆ ಈ ಬಾರಿ ಶಂಕರ ಜಯಂತಿಯನ್ನು ವಿಭಿನ್ನವಾಗಿಯೇ ಆಚರಿಸಿತು. ಅದರ ಚಿತ್ರನೋಟ ಇಲ್ಲಿದೆ.

ಮೈಸೂರಿನ ಕುವೆಂಪುನಗರದ ಗಾನಭಾರತಿಯ ರಮಾಗೋವಿಂದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಜ್ಜನ ಮನೆ ಸಂಸ್ಥೆಯ ಶಂಕರ ನಮನ ಕಾರ್ಯಕ್ರಮದಲ್ಲಿ ವಿದುಷಿ ಕೃಪಾ ಫಡ್ಕೆ ಶಿಷ್ಯರು ನೃತ್ಯ ಪ್ರದರ್ಶನ ನಡೆಸಿಕೊಟ್ಟರು.
icon

(1 / 6)

ಅಜ್ಜನ ಮನೆಯ ಶಂಕರ ನಮನ ಕಾರ್ಯಕ್ರಮದಲ್ಲಿ ಗಮನ ಸೆಳೆದ ವಿದುಷಿ ಆರ್‌.ಎನ್‌.ಶ್ರೀಲತಾ ಅವರ ಶಿಷ್ಯ ವೃಂದದ ಶಂಕರ ಗೀತೆಗಳ ಪ್ರಸ್ತುತಿ.,
icon

(2 / 6)

ಕರ್ನಾಟಕದ ಖ್ಯಾತ ವಿದ್ವಾಂಸ ಡಾ.ಶತಾವಧಾನಿ ಗಣೇಶ್‌ ಅವರು ಶಂಕರರ ಕುರಿತು ಉಪನ್ಯಾಸ ನೀಡಿ ನಂತರ ಸಂವಾದ ನಡೆಸಿದರು.
icon

(3 / 6)

ಶಂಕರ ನಮನ ಕಾರ್ಯಕ್ರಮದಲ್ಲಿ ವಿದುಷಿ ರಕ್ಷಿತಾ ರಮೇಶ್(‌ ವೀಣೆ). ಶೃತಿ( ಪಿಟೀಲು), ವಿದ್ವಾನ್‌ ಕೇಶವಚಂದ್ರ( ಕೊಳಲು), ವಿದ್ವಾನ್‌ ಶರತ್‌ ಕೌಶಿಕ್‌ ( ಘಟ), ವಿದ್ವಾನ್‌ ರಾಧೇಶ್‌( ಮೃದಂಗ)ದೊಂದಿಗೆ ವಾದ್ಯ ನಮನ ನಡೆಸಿಕೊಟ್ಟರು.
icon

(4 / 6)

ವಿಭಿನ್ನ ಸಾಂಸ್ಕೃತಿಕ ಚಟುವಟಿಕೆಗಳ ಜತೆಗೆ ವಾರದಲ್ಲಿ ಒಂದು ದಿನ ಆಹಾರ ವಿತರಿಸುವ ಮೂಲಕ ಗಮನ ಸೆಳೆದಿರುವ ಮೈಸೂರಿನ ಅಜ್ಜನ ಮನೆ ಸಂಸ್ಥೆಯ ಶಂಕರ ನಮನ ಕಾರ್ಯಕ್ರಮಕ್ಕೆ ಶಿಕ್ಷಣ ತಜ್ಞ ದ್ವಾರಕಾನಾಥ್‌ ಚಾಲನೆ ಕೊಟ್ಟರು. ಸಂಸ್ಥೆಯ ಸಂಸ್ಥಾಪಕ ಕೃಷ್ಣ, ನಿರ್ದೇಶಕ ಎಚ್‌.ಕೆ.ನಾಗೇಶ್ ಜತೆಗಿದ್ದರು.
icon

(5 / 6)

ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಅಜ್ಜನ ಮನೆ ಸಂಸ್ಥೆಯ ಶಂಕರ ನಮನ ಕಾರ್ಯಕ್ರಮದಲ್ಲಿ ಭಾಗಿಯಾದ ಸಂಗೀತಾಭಿಮಾನಿಗಳು.
icon

(6 / 6)

ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಅಜ್ಜನ ಮನೆ ಸಂಸ್ಥೆಯ ಶಂಕರ ನಮನ ಕಾರ್ಯಕ್ರಮದಲ್ಲಿ ಭಾಗಿಯಾದ ಸಂಗೀತಾಭಿಮಾನಿಗಳು.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು