Dasara Tableaus: ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಸ್ತಬ್ಧಚಿತ್ರಗಳು, ಸಂದೇಶದ ಫೋಟೊಸ್
- ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿಯ ಜಂಬೂಸವಾರಿ ಮೆರವಣಿಗೆಯಲ್ಲಿ ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗುವ ಸ್ತಬ್ಧಚಿತ್ರಗಳು ಸಂದೇಶದ ವಿವರಗಳನ್ನು ಫೋಟೊ ಸಹಿತ ಇಲ್ಲಿ ನೀಡಲಾಗಿದೆ. ಒಟ್ಟು 51 ಸ್ತಬ್ಧಚಿತ್ರಗಳು ಜಂಜೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುತ್ತಿವೆ.
- ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿಯ ಜಂಬೂಸವಾರಿ ಮೆರವಣಿಗೆಯಲ್ಲಿ ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗುವ ಸ್ತಬ್ಧಚಿತ್ರಗಳು ಸಂದೇಶದ ವಿವರಗಳನ್ನು ಫೋಟೊ ಸಹಿತ ಇಲ್ಲಿ ನೀಡಲಾಗಿದೆ. ಒಟ್ಟು 51 ಸ್ತಬ್ಧಚಿತ್ರಗಳು ಜಂಜೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುತ್ತಿವೆ.
(1 / 9)
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿನ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಯ ಮೆರವಣಿಗೆಯಲ್ಲಿ ರಾಜ್ಯದ ಕಲೆ, ಸಾಹಿತ್ಯ, ಧಾರ್ಮಿಕ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಬೆಂಬಿಸುವಂತಹ ಸ್ತಬ್ಧಚಿತ್ರಗಳಲ್ಲಿ ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಲಿವೆ. ಈ ಪೈಕಿ ಕೆಲವೊಂದು ಸ್ತಬ್ಧಚಿತ್ರಗಳ ವಿವರ ಇಲ್ಲಿದೆ.
(2 / 9)
ಮೈಸೂರಿನ ದಸರಾ ಜಂಬೂಸವಾರಿಯಲ್ಲಿ ಭಾಗಿಯಾಗುತ್ತಿರುವ ಬೀದರ್ ಜಿಲ್ಲೆಯ ಸ್ತಬ್ಧಚಿತ್ರ ಇದು. ಕನ್ನಡ ಪಟ್ಟದೇವರು ಪೂಜ್ಯಶ್ರೀ ಮದ್ ಘನಲಿಂಗ ಚಕ್ರವರ್ತಿ ಚೆನ್ನಬಸವ ಪಟ್ಟದೇವರ ಕುರಿತ ಸ್ತಬ್ಧಚಿತ್ರ ಇದಾಗಿದೆ.
(3 / 9)
ಬೆಂಗಳೂರು ನಗರ ಜಿಲ್ಲೆಯಿಂದ ರಾಷ್ಟಪಿತ ಮಹಾತ್ಮ ಗಾಂಧೀಜಿ ಮತ್ತು ವಿಧಾನಸೌಧದ ಸ್ತಬ್ಧಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ.
(4 / 9)
ವಿಜಯನಗರ ಸಾಮ್ರಾಜ್ಯದ ವೈಭವವನ್ನು ಬಿಂಬಿಸುವಂತಹ ಸ್ತಬ್ಧಚಿತ್ರವನ್ನು ವಿಜಯನಗರ ಜಿಲ್ಲೆಯಿಂದ ಪ್ರದರ್ಶಿಸಲಾಗುತ್ತಿದೆ.
(5 / 9)
ಕರ್ನಾಟಕ ಪೊಲೀಸ್ ಇಲಾಖೆಯ ಕಿರು ಪರಿಚಯವನ್ನು ನೀಡುವ ಸ್ತಬ್ಧಚಿತ್ರವನ್ನು ರಾಜ್ಯ ಪೋಲಿಸ್ ಇಲಾಖೆ ಸಿದ್ಧಪಡಿಸಿದೆ.
(7 / 9)
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ, ಕೆಎಂಎಫ್‌ನಿಂದ ಕ್ಷೀರ ಭಾಗ್ಯ ಮತ್ತು ಕ್ಷೀರ ಸಂಜೀವಿನಿ ಯೋಜನೆಗಳ ಯಶಸ್ವಿ ಪಥದ ಬಗ್ಗೆ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.
(8 / 9)
ಪ್ರವಾಸೋದ್ಯಮ ಇಲಾಖೆ ವತಿಯಿಂದ ಒಂದು ರಾಜ್ಯ ಹಲವು ಜಗತ್ತುಗಳು ಎಂಬ ಸ್ತಬ್ಧಚಿತ್ರ ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಲಿದೆ.
ಇತರ ಗ್ಯಾಲರಿಗಳು