ಮೈಸೂರು ದಸರಾ ಆನೆಗಳು: ಅರ್ಜುನ ಇದ್ದ ಬಳ್ಳೆ ಶಿಬಿರಕ್ಕೆ ಮಹೇಂದ್ರ ಎಂಟ್ರಿ; ಲಕ್ಷ್ಮಿಯೊಂದಿಗೆ ನಾಗರಹೊಳೆ ನಿವಾಸಿ, ಹೀಗಿದ್ದವು ಜೋಡಿ ಕ್ಷಣಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೈಸೂರು ದಸರಾ ಆನೆಗಳು: ಅರ್ಜುನ ಇದ್ದ ಬಳ್ಳೆ ಶಿಬಿರಕ್ಕೆ ಮಹೇಂದ್ರ ಎಂಟ್ರಿ; ಲಕ್ಷ್ಮಿಯೊಂದಿಗೆ ನಾಗರಹೊಳೆ ನಿವಾಸಿ, ಹೀಗಿದ್ದವು ಜೋಡಿ ಕ್ಷಣಗಳು

ಮೈಸೂರು ದಸರಾ ಆನೆಗಳು: ಅರ್ಜುನ ಇದ್ದ ಬಳ್ಳೆ ಶಿಬಿರಕ್ಕೆ ಮಹೇಂದ್ರ ಎಂಟ್ರಿ; ಲಕ್ಷ್ಮಿಯೊಂದಿಗೆ ನಾಗರಹೊಳೆ ನಿವಾಸಿ, ಹೀಗಿದ್ದವು ಜೋಡಿ ಕ್ಷಣಗಳು

  • ಮೈಸೂರು ಜಿಲ್ಲೆಯ ಕಾಕನಕೋಟೆ ಅರಣ್ಯ ಎಂದೇ ಕರೆಯುವ ಡಿಬಿಕುಪ್ಪೆ ಒಂದು ಕಾಲಕ್ಕೆ ಪ್ರಮುಖ ಆನೆಗಳ ಶಿಬಿರ. ಆನಂತರ ಆನೆಗಳು ಇಲ್ಲದೇ ಖಾಲಿಯಾಗಿತ್ತು. ಈಗ ಮತ್ತೆ ಮಹೇಂದ್ರ ಹಾಗೂ ಲಕ್ಷ್ಮಿ ಆನೆಯನ್ನು ಇಲ್ಲಿಗೆ ತರಲಾಗಿದ್ದು, ಶಿಬಿರಕ್ಕೆ ಕಳೆ ಬಂದಿದೆ.
  • ಚಿತ್ರಗಳು: ಅನಿಲ್‌ ಅಂತರಸಂತೆ.

ಶ್ರೀರಂಗಪಟ್ಟಣದಲ್ಲಿ ಅಂಬಾರಿ ಹೊತ್ತು, ಭವಿಷ್ಯದ ಅಂಬಾರಿ ಎಂದೇ ಗುರುತಿಸಿಕೊಂಡಿರುವ ಮಹೇಂದ್ರ ಹಾಗೂ ಕುಮ್ಕಿ ಆನೆ ಲಕ್ಷ್ಮಿಗೆ ಈಗ ಹೊಸ ತಾಣ. ಎರಡೂ ಆನೆಗಳು ಡಿಬಿಕುಪ್ಪೆ ವನ್ಯಜೀವಿ ವಲಯದ ಬಳ್ಳೆ ಆನೆ ಶಿಬಿರದ ನಿವಾಸಿಗಳು.
icon

(1 / 6)

ಎರಡು ಆನೆಗಳೂ ಈ ಬಾರಿ ದಸರಾ ಚಟುವಟಿಕೆಯನ್ನು ಮುಗಿಸಿ ಹೊರಟಿದ್ದು ಕಬಿನಿ ಹಿನ್ನೀರಿಗೆ ಹೊಂದಿಕೊಂಡಂತೆ ಇರುವ ಬಳ್ಳೆ ಆನೆ ಶಿಬಿರಕ್ಕೆ. 
icon

(2 / 6)

ಮಹೇಂದ್ರ ಆನೆ ಈಗ ಅರ್ಜುನ ಸ್ಥಾನ ತುಂಬಿದ್ದಾನೆ. ರಾಮನಗರದಲ್ಲಿ ಸೆರೆ ಸಿಕ್ಕು ಆನಂತರ ಬಳ್ಳೆ ಆನೆ ಶಿಬಿರದಲ್ಲಿಯೇ ಇದ್ದು ಪಳಗಿದ್ದ ಮಹೇಂದ್ರ ಈಗ ಇದೇ ಶಿಬಿರಕ್ಕೆ ಮರಳಿದ್ದಾನೆ. ಹತ್ತು ತಿಂಗಳ ಹಿಂದೆ ಅರ್ಜುನ ಸಾವಿನ ನಂತರ ಬಳ್ಳೆ ಶಿಬಿರಕ್ಕೆ ಮಹೇಂದ್ರ ಬಂದಿರುವುದು ವಿಶೇಷ.
icon

(3 / 6)

ಬಳ್ಳೆ ಆನೆ ಶಿಬಿರದಲ್ಲಿ ಐರಾವತ, ರಾಜೇಂದ್ರ, ದ್ರೋಣ, ಅರ್ಜುನ ಸೇರಿ ಪ್ರಮುಖ ಆನೆಗಳಿದ್ದವು. ನಾನಾ ಕಾರಣದಿಂದ ಅವುಗಳು ಮೃತಪಟ್ಟವು. ಈಗ ಹೊಸ ಆನೆಗಳು ದಸರಾಕ್ಕೆ ಬಂದಿವೆ. ಅದರಲ್ಲಿ ಮಹೇಂದ್ರ ಲಕ್ಷ್ಮಿ ಕೂಡ ಒಂದು. ಈ ಎರಡು ಆನೆಗಳೂ ಬಳ್ಳೆ ಶಿಬಿರಕ್ಕೆ ಬಂದಾಗ ಪೂಜೆ ಮಾಡಿ ಬರಮಾಡಕೊಳ್ಳಲಾಯಿತು.
icon

(4 / 6)

ಲಕ್ಷ್ಮಿ ಆನೆ ಕೂಡ ಎರಡು ವರ್ಷದ ಹಿಂದೆ ದಸರಾಕ್ಕೆ ಬಂದಾಗ ಅರಮನೆ ಆವರಣದಲ್ಲಿಯೇ ಮರಿ ಹಾಕಿತ್ತು. ಈ ವರ್ಷ ದಸರಾಕ್ಕೆ ಬಂದಿತ್ತು. ಈಗ ಅದನ್ನು ರಾಂಪುರ ಶಿಬಿರದಿಂದ ಬಳ್ಳೆಗೆ ಸ್ಥಳಾಂತರಿಸಲಾಗಿದ್ದು. ಹೊಸ ಜೀವನ ಆರಂಭಿಸಿದೆ.
icon

(5 / 6)

ಆನೆಗಳು ಸಂಘ ಜೀವಿಗಳು. ಜತೆಯಾಗಿಯೇ ಇರಲು ಬಯಸುತ್ತವೆ. ದಸರಾದಲ್ಲಿ ಈ ಬಾರಿ ಜತೆಯಾಗಿ ಭಾಗಿಯಾಗಿದ್ದ ಮಹೇಂದ್ರ ಹಾಗೂ ಲಕ್ಷ್ಮಿ ಒಡನಾಡಿಗಳಾಗಿದ್ದವು. ಅವುಗಳನ್ನು ಬಳ್ಳೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಕೇರಳದ ಮಾನಂದವಾಡಿಗೆ ಹೋಗುವ ಮಾರ್ಗದಲ್ಲಿ ಸಿಗುವ ಬಳ್ಳೆ ಶಿಬಿರಕ್ಕೆ ಸಮಯ ಸಿಕ್ಕಾಗ ಹೋಗಿ ಬನ್ನಿ.
icon

(6 / 6)

ಇತರ ಗ್ಯಾಲರಿಗಳು