ತಿ ನರಸೀಪುರದಲ್ಲಿ ಆರು ವರ್ಷದ ಬಳಿಕ ನಡೆಯುತ್ತಿರುವ ಕುಂಭಮೇಳಕ್ಕೆ ತಯಾರಿ ಹೇಗಿದೆ; ತ್ರಿವೇಣಿ ಸಂಗಮದಲ್ಲಿ ಸ್ನಾನ, ದೇವಸ್ಥಾನಕ್ಕೆ ಅಲಂಕಾರ
- ಕಾವೇರಿ, ಕಪಿಲಾ ಹಾಗೂ ಗುಪ್ತಗಾಮಿನಿಯಾಗಿರುವ ಸ್ಪಟಿಕ ಸರೋವರ ನದಿಗಳ ಸಂಗಮ ಕ್ಷೇತ್ರ ತಿ.ನರಸೀಪುರದಲ್ಲಿ ಆರು ವರ್ಷದ ನಂತರ ಕುಂಭಮೇಳ ನಡೆಯುತ್ತಿದೆ. ಇದರ ಸಿದ್ದತೆ ಹೀಗಿದೆ.
- ಕಾವೇರಿ, ಕಪಿಲಾ ಹಾಗೂ ಗುಪ್ತಗಾಮಿನಿಯಾಗಿರುವ ಸ್ಪಟಿಕ ಸರೋವರ ನದಿಗಳ ಸಂಗಮ ಕ್ಷೇತ್ರ ತಿ.ನರಸೀಪುರದಲ್ಲಿ ಆರು ವರ್ಷದ ನಂತರ ಕುಂಭಮೇಳ ನಡೆಯುತ್ತಿದೆ. ಇದರ ಸಿದ್ದತೆ ಹೀಗಿದೆ.
(2 / 10)
ಮೂರು ದಿನಗಳ ಕಾಲ ನಡೆಯುವ ಕುಂಭಮೇಳಕ್ಕೆ ಸಹಸ್ರಾರು ಭಕ್ತರು ಬರುವುದರಿಂದ ಮೂಲಸೌಕರ್ಯವನ್ನು ಒದಗಿಸಲಾಗುತ್ತಿದೆ.
(3 / 10)
ದೇವಸ್ಥಾನದ ಸಮೀಪದಲ್ಲಿಯೇ ಕುಂಭ ಮೇಳದ ಮುಖ್ಯ ಕಾರ್ಯಕ್ರಮ ನಡೆಯುವುದರಿಂದ ವಿಶಾಲ ವೇದಿಕೆಯೂ ಸಿದ್ದವಾಗುತ್ತಿದೆ.
(4 / 10)
ಕಳೆದ ಒಂದು ವಾರದಿಂದ ವೇದಿಕೆ ಹಾಗೂ ಇತರೆ ಚಟುವಟಿಕೆಗಳಿಗಾಗಿ ಶಾಮೀಯಾನಗಳನ್ನು ಹಾಕುವ ಚಟುವಟಿಕೆ ಬಿರುಸಿನಿಂದ ಸಾಗಿದೆ.
(5 / 10)
ಕಾವೇರಿ, ಕಪಿಲಾ ನದಿ ಸಂಗಮ ಪ್ರದೇಶದಲ್ಲಿ ಅಲ್ಲಲ್ಲಿ ತಡೆಯನ್ನು ಹಾಕಿ ಸ್ನಾನ ಮಾಡಲು ಬೇಕಾದ ವಾತಾವರಣವನ್ನು ನಿರ್ಮಿಸಲಾಗಿದೆ.
(6 / 10)
ತಿ,ನರಸೀಪುರದಲ್ಲಿ ಕುಂಭ ಮೇಳ ನಡೆಯುವ ವಿಶಾಲ ನದಿ ತೀರದಲ್ಲಿ ಮೂರು ದಿನ ಕಾಲವೂ ಸುಸೂತ್ರವಾಗಿ ಭಕ್ತರು ಸ್ನಾನ ಮಾಡಲು ಅನುವಾಗುವಂತೆ ಸಿದ್ದತೆ ಮಾಡಲಾಗುತ್ತಿದೆ.
(7 / 10)
ಭಕ್ತರು ಸ್ನಾನ ಮಾಡುವ ಪ್ರದೇಶದಲ್ಲಿ ದೋಣಿಗಳನ್ನೂ ನಿಲ್ಲಿಸಿ ಸುರಕ್ಷತೆಗೂ ಇನ್ನಿಲ್ಲದ ಒತ್ತು ನೀಡಲಾಗುತ್ತಿದೆ.
(8 / 10)
ನದಿ ಸ್ನಾನಘಟ್ಟದಲ್ಲಿ ಪುಣ್ಯ ಸ್ನಾನ ಮಾಡಿದ ಬಳಿಕೆ ಮಹಿಳೆಯರು ತಮ್ಮ ಬಟ್ಟೆ ಬದಲಿಸಲು ಬೇಕಾದ ಜಾಗಗಳನ್ನು ಸಿದ್ದಪಡಿಸಲಾಗುತ್ತಿದೆ.
(9 / 10)
ಕಾವೇರಿ ನದಿ ತೀರದಲ್ಲಿ ಬೆಳೆದಿರುವ ಕಳೆಯನ್ನು ತೆಗೆದು ಭಕ್ತರು ಸ್ನಾನ ಮಾಡಲು ಸೂಕ್ತ ವಾತಾವರಣವನ್ನು ನಿರ್ಮಿಸಲಾಗುತ್ತಿದೆ.
ಇತರ ಗ್ಯಾಲರಿಗಳು