Infosys Leopard Operation: ಒಂದು ಚಿರತೆ, 200 ಸಿಬ್ಬಂದಿ; ಮೈಸೂರು ಇನ್ಫೋಸಿಸ್‌ನಲ್ಲಿ ವಾರದಿಂದಲೂ ನಡೆದ ನಿರಂತರ ಕಾರ್ಯಾಚರಣೆ ಹೀಗಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Infosys Leopard Operation: ಒಂದು ಚಿರತೆ, 200 ಸಿಬ್ಬಂದಿ; ಮೈಸೂರು ಇನ್ಫೋಸಿಸ್‌ನಲ್ಲಿ ವಾರದಿಂದಲೂ ನಡೆದ ನಿರಂತರ ಕಾರ್ಯಾಚರಣೆ ಹೀಗಿದೆ

Infosys Leopard Operation: ಒಂದು ಚಿರತೆ, 200 ಸಿಬ್ಬಂದಿ; ಮೈಸೂರು ಇನ್ಫೋಸಿಸ್‌ನಲ್ಲಿ ವಾರದಿಂದಲೂ ನಡೆದ ನಿರಂತರ ಕಾರ್ಯಾಚರಣೆ ಹೀಗಿದೆ

  • Infosys Leopard Operation: ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಕಾಣಿಸಿಕೊಳ್ಳುತ್ತಿರುವ ಚಿರತೆ ಸೆರೆಗೆ ಅರಣ್ಯ ಇಲಾಖೆ ಇನ್ನಿಲ್ಲದ ಸಾಹಸ ಮಾಡುತ್ತಿದೆ. ಅರಣ್ಯ ಇಲಾಖೆ, ಚಿರತೆ ಕಾರ್ಯಪಡೆ, ತಾಂತ್ರಿಕ ತಂಡ, ಇನ್ಪೋಸಿಸ್‌ ಸಿಬ್ಬಂದಿ, ಪೊಲೀಸ್‌ ಇಲಾಖೆ ಸೇರಿ 200ರಷ್ಟು ಸಿಬ್ಬಂದಿ ನಿರಂತರ ಚಿರತೆ ಹುಡುಕಾಟ ನಡೆಸಿದ್ದಾರೆ.

360 ಎಕರೆಯಷ್ಟು ವಿಶಾಲವಾಗಿರುವ ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಕಾಣಿಸಿಕೊಂಡು ಒಂದು ವಾರದಿಂದ ಸಿಗದ ಚಿರತೆಯ ಸೆರೆಗೆ ರೂಪಿಸಿರುವ ರೂಟ್‌ ಮ್ಯಾಪ್‌ ಹೀಗಿದೆ.
icon

(1 / 9)

(forest Dept)

ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಸೇರಿಕೊಂಡು ಆತಂಕ ಸೃಷ್ಟಿಸಿರುವ ಚಿರತೆ ಸೆರೆಗೆ ಭಾರೀ ಪ್ರಮಾಣದಲ್ಲಿಯೇ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ.
icon

(2 / 9)

ಅರಣ್ಯ ಇಲಾಖೆಯ ಚಿರತೆ ಹಾಗೂ ಆನೆ ಕಾರ್ಯಪಡೆ ಸಿಬ್ಬಂದಿ, ಇನ್ಫೋಸಿಸ್‌ನ ಭದ್ರತಾ ಸಿಬ್ಬಂದಿಯೂ ಸೇರಿ ಹನ್ನೆರಡು ತಂಡಗಳ ಸದಸ್ಯರು ಗಸ್ತು ತಿರುಗುತ್ತಲೇ ಇದ್ದಾರೆ.
icon

(3 / 9)

ಚಿರತೆ ಹೆಜ್ಜೆ ಗುರುತುಗಳನ್ನು ಆಧರಿಸಿ ಹೆಚ್ಚುವರಿಯಾಗಿ 10 ಕ್ಯಾಮೆರಾ ಟ್ರ್ಯಾಪ್‌ಗಳು, ಒಂದು ಕ್ಯಾಟಲ್‌ ಪೆನ್‌ ಕೇಜ್‌ ಹಾಗೂ ಟ್ರ್ಯಾಪ್ ಕೇಜ್ ಅಳವಡಿಸಲಾಗಿದೆ. ಸಿಬ್ಬಂದಿಯೂ ಎಲ್ಲೆಡೆ ಗಮನ ಹರಿಸುತ್ತಿದ್ದಾರೆ. 
icon

(4 / 9)

ಇನ್ಫೋಸಿಸ್‌ನ ಒಳಾವರಣದ ಕಚೇರಿಗಳಲ್ಲಿ ಚಿರತೆ ಸೇರಿಕೊಂಡಿರುವ ಅನುಮಾನದ ಮೇಲೆ ಎಲ್ಲೆಡೆ ಸಿಬ್ಬಂದಿಯೇ ತೆರಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
icon

(5 / 9)

ಕೆಲವು ಕಡೆಗಳಲ್ಲಿ ಕ್ಯಾಮರಾ ಟ್ರಾಪ್‌ಗಳನ್ನು ಅಳಡಿಸಿ  ಆ ಭಾಗದಲ್ಲಿ ಚಿರತೆ ಸಂಚಾರವಿದೆಯಾ ಎನ್ನುವ ನಿಖರ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದೆ.
icon

(6 / 9)

ಇನ್ಫೋಸಿಸ್‌ ಒಳ ಆವರಣವೂ ಅಲ್ಲದೇ ಹೊರ ಭಾಗದಲ್ಲೂ ಚಿರತೆ ಇರುವಿಕೆ ಪತ್ತೆ ಮಾಡಲು ಅಲ್ಲಲ್ಲಿ ಕ್ಯಾಮರಾ ಟ್ರಾಪ್‌ಗಳನ್ನು ಹಾಕಲಾಗಿದೆ.
icon

(7 / 9)

ಸಿಬ್ಬಂದಿಯಂತೂ ಇನ್ಫೋಸಿಸ್‌ನ ಸುತ್ತಮುತ್ತ ಇರುವ ಹಸಿರು ಪ್ರದೇಶವನ್ನು ಕೊಂಚವೂ ಬಿಡದೇ ಜಾಲಾಡುತ್ತಿದ್ದಾರೆ.
icon

(8 / 9)

ಇನ್ಪೋಸಿಸ್‌ ಪಕ್ಕದಲ್ಲಿರುವ ಕೆರೆ, ಹಸಿರು ಪ್ರದೇಶದಲ್ಲೂ ಚಿರತೆ ಚಲನವಲನ ಇರುವುದರಿಂದ ಆ ಭಾಗದಲ್ಲೂ ಗಸ್ತು ಹೆಚ್ಚಿಸಲಾಗಿದೆ.
icon

(9 / 9)

ಇತರ ಗ್ಯಾಲರಿಗಳು