leopard in Infosys: ಹೈಟೆಕ್ ತಂತ್ರಜ್ಞಾನ ವಿಚಕ್ಷಣೆಗೂ ಜಗ್ಗದ ಚಿರತೆ; ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ರಾತ್ರಿ ವೇಳೆ ಸಂಚಾರ
- leopard in Infosys: ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಚಿರತೆ ಮತ್ತೆ ಕಾಣಿಸಿಕೊಂಡಿದೆ. ನಾಲ್ಕು ದಿನದಿಂದ ಹೈಟೆಕ್ ಥರ್ಮಲ್ ಡೋಣ್ ತಂತ್ರಜ್ಞಾನ ಬಳಸಿ ಕಾರ್ಯಾಚರಣೆ ನಡೆದಿರುವ ನಡುವೆಯೇ ಚಿರತೆ ಅಲ್ಲಿಯೇ ಸುತ್ತುತ್ತಿದೆ.
- leopard in Infosys: ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಚಿರತೆ ಮತ್ತೆ ಕಾಣಿಸಿಕೊಂಡಿದೆ. ನಾಲ್ಕು ದಿನದಿಂದ ಹೈಟೆಕ್ ಥರ್ಮಲ್ ಡೋಣ್ ತಂತ್ರಜ್ಞಾನ ಬಳಸಿ ಕಾರ್ಯಾಚರಣೆ ನಡೆದಿರುವ ನಡುವೆಯೇ ಚಿರತೆ ಅಲ್ಲಿಯೇ ಸುತ್ತುತ್ತಿದೆ.
(1 / 7)
ಮೈಸೂರು ಇನ್ಫೋಸಿಸ್‌ನ ಹಸಿರು ಕ್ಯಾಂಪಸ್ ನಲ್ಲಿ ಚಿರತೆ ಪ್ರವೇಶಿಸಿದ್ದು, ನಾಲ್ಕು ದಿನದ ನಂತರ ರಾತ್ರಿ ಸಿಬ್ಬಂದಿಯೊಬ್ಬರಿಗೆ ಕಾಣಿಸಿಕೊಂಡಿದೆ. ಇದರಿಂದ ಅರಣ್ಯ ಇಲಾಖೆ ಮತ್ತಷ್ಟು ಅಲರ್ಟ್ ಆಗಿದೆ.
(2 / 7)
ನಾಲ್ಕು ದಿನದ ಹಿಂದೆ ಚಿರತೆ ಕ್ಯಾಂಪಸ್‌ನಲ್ಲಿ ಇದ್ದುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆನಂತರ ಅರಣ್ಯ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿದೆ.
(3 / 7)
ಶನಿವಾರ ಮಧ್ಯರಾತ್ರಿ ಇನ್ಪೋಸಿಸ್ ನ ಆವರಣದಲ್ಲಿ ಕಾರಿನಲ್ಲಿ ಹೋಗುವ ಚಿರತ ಕಂಡ ವಿಡಿಯೋ ದಾಖಲಿಸಿದ್ದು, ಈ ಕಾರಣದಿಂದ ಸಿಬ್ಬಂದಿ ಕ್ಯಾಂಪಸ್ ಸುತ್ತಮುತ್ತಲೂ ಹುಡುಕಾಟ ನಡೆಸಿದ್ದಾರೆ.
(4 / 7)
ಥರ್ಮಲ್ ಡ್ರೋಣ್ ಅನ್ನು ಬಳಸಿ ಇಡೀ ಪ್ರದೇಶದಲ್ಲಿ ಚಿರತೆ ಎಲ್ಲಿದೆ ಎನ್ನುವುದನ್ನು ಪತ್ತೆ ಮಾಡುವ ಕಾರ್ಯದಲ್ಲಿ ಸಿಬ್ಬಂದಿ ನಿರತರಾಗಿದ್ದಾರೆ. ಆದರೆ ತಂತ್ರಜ್ಞಾನದ ವಿಚಕ್ಷಣೆ ಮೀರಿ ಚಿರತೆ ತಪ್ಪಿಸಿಕೊಂಡು ಅಲ್ಲಿಯೇ ಅಡಗಿರುವುದು ಕಂಡು ಬಂದಿದೆ.
(5 / 7)
ಮೈಸೂರಿನಲ್ಲಿ ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಚಿರತೆ ಕಾರ್ಯ ಪಡೆ, ಆನೆ ಕಾರ್ಯ ಪಡೆ ಸಿಬ್ಬಂದಿ ಹಾಗೂ ಮೈಸೂರು ಪ್ರಾದೇಶಿಕ ವಲಯದ ಒಟ್ಟು 80 ಸಿಬ್ಬಂದಿಗಳು ಸಂಪೂರ್ಣವಾಗಿ ಸ್ವೀಪ್ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.
(6 / 7)
ಒಂದು ಚಿರತೆ ಕಾರ್ಯಪಡೆ ತಂಡವನ್ನು ಕ್ಯಾಂಪಸ್ ನಲ್ಲಿಯೇ ನಿಯೋಜಿಸಲಾಗಿದ್ದು, ಕ್ಯಾಮೆರಾ ಟ್ರ್ಯಾಪ್ ಹಾಗೂ ಸಿಸಿಟಿವಿ ಕ್ಯಾಮೆರಾ ಮಾನಿಟರಿಂಗ್ ಮುಂದುವರಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಮೈಸೂರು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಇತರ ಗ್ಯಾಲರಿಗಳು