Siddaramaiah Game:ದೆಹಲಿಯಿಂದ ಬಂದವರೇ ದೇಸಿ ಆಟ ಆಡಿದರು ಸಿದ್ದರಾಮಯ್ಯ; ಹೀಗಿತ್ತು ಆಟದ ನೋಟ Photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Siddaramaiah Game:ದೆಹಲಿಯಿಂದ ಬಂದವರೇ ದೇಸಿ ಆಟ ಆಡಿದರು ಸಿದ್ದರಾಮಯ್ಯ; ಹೀಗಿತ್ತು ಆಟದ ನೋಟ Photos

Siddaramaiah Game:ದೆಹಲಿಯಿಂದ ಬಂದವರೇ ದೇಸಿ ಆಟ ಆಡಿದರು ಸಿದ್ದರಾಮಯ್ಯ; ಹೀಗಿತ್ತು ಆಟದ ನೋಟ Photos

  • ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ದೆಹಲಿಯಲ್ಲಿ ಕೇಂದ್ರದ ನೀತಿ ವಿರುದ್ದ ಭಾರೀ ಪ್ರತಿಭಟನೆಯನ್ನೇ ನಡೆಸಿದ್ದರು. ಅಲ್ಲಿಂದ ನೇರವಾಗಿ ಬಂದಿದ್ದು ಮೈಸೂರು ಜಿಲ್ಲೆಯ ಸುತ್ತೂರು ಜಾತ್ರೆಗೆ. ಜಾತ್ರೆಯಲ್ಲಿ ಆಯೋಜಿಸಲಾಗಿದ್ದ ದೇಸಿ ಆಟಗಳಿಗೆ ಚಾಲನೆ ನೀಡಿದ ಅವರು ಅವರು ವೇದಿಕೆಯಲ್ಲಿಯೇ ಆಟಗಳನ್ನು ಆಡಿದರು. ಅವರಿಗೆ ಹಲವು ಸಚಿವರೂ ಸಾಥ್‌ ನೀಡಿದರು. ಹೀಗಿತ್ತು ಆ ಕ್ಷಣ.

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸುತ್ತೂರು ಜಾತ್ರೆಯಲ್ಲಿ ದೇಸಿ ಆಟಗಳ ಕಲರವ. ಅದರಲ್ಲೂ ಅಳಗುಳಿಮನೆ, ಚೌಕಾಬಾರ, ನವಕಂಕರಿ, ಹಾವು ಏಣಿಯಾಟದಂತಹ ಹಲವು ದೇಸಿ ಆಟಗಳಿದ್ದವು. ಅದನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.
icon

(1 / 6)

ಜಾತ್ರೆಯಲ್ಲಿ ನವಕಂಕರಿ ಆಟವನ್ನು ಆಡುವ ಮೂಲಕ ಗಮನ ಸೆಳೆದರು, ಅವರು ಒಂದು ಪಾನ್‌ ಮುನ್ನಡೆಸಿದಾಗ ಎದುರಾಳಿಯೂ ಅದನ್ನು ಗಮನಿಸಿದರು. 
icon

(2 / 6)

ಮತ್ತೊಂದು ಪಾನ್‌ ಅನ್ನು ಎದುರಾಳಿ ಇಡುತ್ತಿದ್ದಂತೆ ಅದಕ್ಕೆ ಸೂಕ್ತವಾಗಿಯೇ ಸಿದ್ದರಾಮಯ್ಯ ಉತ್ತರದ ರೀತಿಯಲ್ಲಿ ಪಾನ್‌ ಇಟ್ಟರು. 
icon

(3 / 6)

ಕೆಲ ಹೊತ್ತು ದೇಸಿ ಆಟಗಳನ್ನು ಆಟವಾಡಿ ರಾಜಕೀಯ ಆಟಕ್ಕಿಂತ ಇದು ಕಷ್ಟವಲ್ಲ ಬಿಡಿ ಎನ್ನುವಂತೆಯೇ ಸಿದ್ದರಾಮಯ್ಯ ಅವರು ನಗೆಯುಕ್ಕಿಸಿದರು.
icon

(4 / 6)

ಸಿಎಂ ಅವರೊಂದಿಗೆ ಸುತ್ತೂರು ಜಾತ್ರೆಗೆ ಬಂದ ಸಚಿವರಾದ ಡಾ.ಜಿ.ಪರಮೇಶ್ವರ್‌, ಕೆ.ಜೆ.ಜಾರ್ಜ್‌, ಡಾ.ಮಹದೇವಪ್ಪ ಮತ್ತಿತರರು ಚೌಕಾಬಾರ ಸಹಿತ ಹಲವು ಆಟಗಳನ್ನು ಆಡಿ ಖುಷಿಪಟ್ಟರು.
icon

(5 / 6)

ಸುತ್ತೂರು ಜಾತ್ರೆಯಲ್ಲಿ ದೇಸಿ ಆಟಗಳನ್ನು ನಿರತ ಸಿದ್ದರಾಮಯ್ಯ ಅವರು ಉತ್ತಮವಾಗಿಯೇ ಆಡಿದಾಗ ಪಕ್ಕದಲ್ಲಿಯೇ ಕುಳಿತಿದ್ದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಏನನ್ನೋ ಹೇಳಿ ನಗೆಯುಕ್ಕಿಸಿದರು.
icon

(6 / 6)

ಇತರ ಗ್ಯಾಲರಿಗಳು