CM at Chamundi Temple: ಚಾಮುಂಡಿಬೆಟ್ಟದಲ್ಲಿ ಸಿಎಂ ಸಿದ್ದರಾಮಯ್ಯ ಭಕ್ತಿ ಭಾವ, ತಿಲಕವಿಟ್ಟು ಪೂಜೆ ಸಲ್ಲಿಸಿದ ಸಮಾಜವಾದಿ ನಾಯಕ !
- ಸಮಾಜ ಸಿದ್ದರಾಮಯ್ಯ ಟಂಪಲ್ ರನ್ ಜೋರಾಗಿದೆ. ಮೂರು ದಿನದ ಹಿಂದೆ ಹಾವೇರಿ ಜಿಲ್ಲೆ ದೇವರಗುಡ್ಡಕ್ಕೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ತಿಂಗಳಲ್ಲೇ ಎರಡನೇ ಬಾರಿ ಮೈಸೂರು ಚಾಮುಂಡಿಬೆಟ್ಟದಲ್ಲಿ ಪೂಜೆ ಸಲ್ಲಿಸಿದರು.
- ಸಮಾಜ ಸಿದ್ದರಾಮಯ್ಯ ಟಂಪಲ್ ರನ್ ಜೋರಾಗಿದೆ. ಮೂರು ದಿನದ ಹಿಂದೆ ಹಾವೇರಿ ಜಿಲ್ಲೆ ದೇವರಗುಡ್ಡಕ್ಕೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ತಿಂಗಳಲ್ಲೇ ಎರಡನೇ ಬಾರಿ ಮೈಸೂರು ಚಾಮುಂಡಿಬೆಟ್ಟದಲ್ಲಿ ಪೂಜೆ ಸಲ್ಲಿಸಿದರು.
(1 / 9)
ಮೈಸೂರಿನ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಚಾಮುಂಡಿಬೆಟ್ಟ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಜೆ.ರೂಪಾ, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಎಂ.ಕೆ.ಸವಿತಾ ಸ್ವಾಗತಿಸಿದರು.
(2 / 9)
ಮೈಸೂರಿನ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಸಚಿವ ಡಾ.ಮಹದೇವಪ್ಪ ಅವರು ಮೊದಲು ಗಣೇಶನಿಗೆ ಪೂಜೆ ಸಲ್ಲಿಸಿದರು.
(3 / 9)
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಚರ್ಚಿಸಿದರು.
(4 / 9)
ಮೈಸೂರಿನ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ಪೂಜೆ ಸಲ್ಲಿಸುವ ಮುನ್ನ ವಿಧಿ ವಿಧಾನ ಪೂರೈಸಿದರು.
(5 / 9)
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಪೂಜೆ ಸಲ್ಲಿಸಿದ ನಂತರ ಸಚಿವ ಕೆ.ವೆಂಕಟೇಶ್ ಅವರೊಂದಿಗೆ ಆರತಿಯನ್ನು ಸಿದ್ದರಾಮಯ್ಯ ಸ್ವೀಕರಿಸಿದರು.
(6 / 9)
ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ ಅವರಿಗೆ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಪ್ರಸಾದ ನೀಡಿದರು.
(8 / 9)
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಅವರು ಚಾಮುಂಡಿಬೆಟ್ಟ ಪ್ರಾಧಿಕಾರದ ಮೊದಲ ಸಭೆಗೆ ಆಗಮಿಸಿದರು.
ಇತರ ಗ್ಯಾಲರಿಗಳು