Kabini Backwaters: ಕಬಿನಿಯಲ್ಲಿ ಜಲರಾಶಿ, ಜೀವ ಸಂಕುಲವೂ ನಿರಾಳ, ಹಿನ್ನೀರ ಪ್ರವಾಸದ ಖುಷಿ photos
- Monsoon tour ಮೈಸೂರು ಜಿಲ್ಲೆಯ ಕಬಿನಿ ಹಿನ್ನೀರು( Kabini backwaters) ಮಳೆಗಾಲ ಪ್ರವಾಸಕ್ಕೆ( Monsoon trip) ಹೇಳಿ ಮಾಡಿಸಿದ ತಾಣ. ಅರಣ್ಯ ಇಲಾಖೆ ಅನುಮತಿಯೊಂದಿಗೆ ಸಫಾರಿ ಹೋಗಲು ಅವಕಾಶವಿದ್ದು, ಅಲ್ಲಿನ ವಾತಾವರಣ ಮುದ ನೀಡುತ್ತದೆ.
- Monsoon tour ಮೈಸೂರು ಜಿಲ್ಲೆಯ ಕಬಿನಿ ಹಿನ್ನೀರು( Kabini backwaters) ಮಳೆಗಾಲ ಪ್ರವಾಸಕ್ಕೆ( Monsoon trip) ಹೇಳಿ ಮಾಡಿಸಿದ ತಾಣ. ಅರಣ್ಯ ಇಲಾಖೆ ಅನುಮತಿಯೊಂದಿಗೆ ಸಫಾರಿ ಹೋಗಲು ಅವಕಾಶವಿದ್ದು, ಅಲ್ಲಿನ ವಾತಾವರಣ ಮುದ ನೀಡುತ್ತದೆ.
(1 / 8)
ಕೇರಳದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಹರಿಯುವ ಕಪಿಲಾ ನದಿ ಕಬಿನಿ ಜಲಾಶಯದ ಭಾಗವಾಗಿ ರೂಪಿಸಿರುವ ಹಿನ್ನೀರು ಪ್ರವಾಸಿ ತಾಣ. ಅಲ್ಲಿ ಆನೆಗಳು ಸೇರಿ ಬಹುತೇಕ ವನ್ಯಜೀವಿಗಳ ಪ್ರಿಯ ತಾಣವೂ ಹೌದು. ಆನೆಗಳು ವಿಹರಿಸುವ ಸನ್ನಿವೇಶವೂ ಖುಷಿ ನೀಡುತ್ತದೆ.
(3 / 8)
ಕಬಿನಿ ಹಿನ್ನೀರು ಎಚ್‌ಡಿಕೋಟೆ ತಾಲ್ಲೂಕಿನಲ್ಲಿ ಎರಡು ಹುಲಿಧಾಮಗಳನ್ನು ವಿಭಜಿಸುತ್ತದೆ. ಒಂದು ಕಡೆ ನಾಗರಹೊಳೆ, ಮತ್ತೊಂದು ಕಡೆ ಬಂಡೀಪುರ ಹುಲಿಧಾಮಗಳು.
(4 / 8)
ಕಬಿನಿ ಹಿನ್ನೀರಿನಲ್ಲಿ ಹತ್ತರಿಂದ ಹದಿನೈದು ಕಿ.ಮಿ ವರೆಗೂ ದೋಣಿ ವಿಹಾರ ಹೋಗುವುದೇ ಚಂದ. ಸಂಜೆಯ ಸೂರ್ಯಾಸ್ತವೂ ಇಲ್ಲಿನ ವಿಶೇಷ.
(5 / 8)
ಕಬಿನಿ ಹಿನ್ನೀರಿನಲ್ಲಿ ಸಾಕಷ್ಟು ಖಾಸಗಿ ಹೋಂಸ್ಟೇ, ರೆಸಾರ್ಟ್‌ಗಳಿವೆ. ಅಲ್ಲಿ ತಂಗಲು ಅವಕಾಶವಿದೆ. ಅಲ್ಲಿಂದಲೇ ಬೋಟಿಂಗ್‌ಗೆ ಹೋಗಬಹುದು.
(6 / 8)
ಈ ಬಾರಿ ಸಾಕಷ್ಟು ನೀರು ಕಬಿನಿಗೆ ಬಂದಿದೆ. ಹರಿದು ಹೋಗಿದೆ ಕೂಡ. ಆದರೂ ಕೇರಳದಲ್ಲಿನ ಭಾರೀ ಮಳೆಯಿಂದ ಕಬಿನಿ ಹಿನ್ನೀರಿನಲ್ಲಿ ನೀರು ಸಂಗ್ರಹವಾಗಿದೆ.
(7 / 8)
ಕಬಿನಿ ಹಿನ್ನೀರು, ಹುಲಿಗಳ ಜತೆಗೆ ಆನೆಗಳ ಪ್ರಿಯ ತಾಣ. ಇಲ್ಲಿ ಹಿಂಡುಗಟ್ಟಲೇ ಆನೆಗಳು ಒಂದು ಕಡೆ ಸಿಗುತ್ತವೆ. ಈಗಲೂ ನೀರಿನ ಅಂಗಳದಲ್ಲಿ ಕಾಲ ಕಳೆಯುವ ಆನೆಗಳನ್ನು ನೋಡುವುದೇ ಚೆಂದ.
ಇತರ ಗ್ಯಾಲರಿಗಳು