ಕನ್ನಡ ಸುದ್ದಿ  /  Photo Gallery  /  Mysore News Maha Mastakabhishekha For Gommatagiri Gomateshwar Held In Mysore District With Religious Activities Kub

Mastakabhishekha: ವಿರಾಟ್‌ ಗೊಮ್ಮಟೇಶ್ವರ ಮೂರ್ತಿಗೆ ಮಹಾಮಜ್ಜನ: ಗೊಮ್ಮಟಗಿರಿಯಲ್ಲಿ ಮಸ್ತಕಾಭಿಷೇಕ ವೈಭವ

  • ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಗೊಮ್ಮಟಗಿರಿಯ(Gommatagiri) ವಿರಾಗಿಗೆ ಮಹಾಮಜ್ಜನ. ಬೆಟ್ಟದೂರು ಗ್ರಾಮದ ವ ಗೊಮ್ಮಟಗಿರಿ ಮೂರ್ತಿಗೆ 74 ನೇ ಮಹಾಮಸ್ತಕಾಭಿಷೇಕ( Mastakabhishekha) ನಡೆಯಿತು. 17 ರೀತಿಯ ಮಂಗಳ ದ್ರವ್ಯಗಳಿಂದ ಗೊಮಟೇಶ್ವರನಿಗೆ ಅಭಿಷೇಕಗಳು ನಡೆದವು. ಆನಂತರ ಪೂಜಾ, ಧಾರ್ಮಿಕ ಚಟುವಟಿಕೆಗಳು ಗಮನ ಸೆಳೆದವು. ಚಿತ್ರಗಳು:ಎಸ್‌ಆರ್‌ ಮಧುಸೂಧನ್‌

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬೆಟ್ಟದೂರು ಬೆಟ್ಟದಲ್ಲಿ ನೆಲೆಗೊಂಡಿರುವ ಗೊಮ್ಮಟಗಿರಿ ಪ್ರತಿ ವರ್ಷ ಮಸ್ತಕಾಭಿಷೇಕ ನಡೆಯುತ್ತದೆ. ಜೈನ ಸಮುದಾಯದವ ಜತೆಗೆ ಇತರರೂ ಭಾಗಿಯಾಗಿ ಭಕ್ತಿಭಾವ ಅರ್ಪಿಸುತ್ತಾರೆ. ಹಾಲಿನಿಂದ ಗೊಮ್ಮಟಮೂರ್ತಿಗೆ ಅಭಿಷೇಕದ ಕ್ಷಣ.
icon

(1 / 10)

ಗೊಮ್ಮಟಗಿರಿಯ ಗೊಮ್ಮಟೇಶ್ವರ ಮೂರ್ತಿಗೆ ನಾನಾ ಅಭಿಷೇಕಗಳಲ್ಲಿ. ಅದರಲ್ಲಿ ಗಂಧದ ಅರ್ಪಣೆಯೂ ಒಂದು 
icon

(2 / 10)

ಗೊಮ್ಮಟಗಿರಿಯ ಗೊಮ್ಮಟೇಶ್ವರ ಮೂರ್ತಿಗೆ ನಾನಾ ಅಭಿಷೇಕಗಳಲ್ಲಿ. ಅದರಲ್ಲಿ ಗಂಧದ ಅರ್ಪಣೆಯೂ ಒಂದು 

ಗೊಮ್ಮಟೇಶ್ವರ ಮೂರ್ತಿಗೆ ಮಂಗಳ ದ್ರವ್ಯಗಳಿಂದ ಸುಮಂಗಲಿಯರು ಪೂಜೆ ಸಲ್ಲಿಸಿದ ಸಂದರ್ಭಕ್ಕೆ ಧರ್ಮಗುರುಗಳು ಸಾಕ್ಷಿಯಾದರು.
icon

(3 / 10)

ಗೊಮ್ಮಟ ಮೂರ್ತಿಗೆ ರಕ್ತಚಂದನದಿಂದ ಅಭಿಷೇಕ ನಡೆಸಿದಾಗ ವಿರಾಟ್‌ ಯೋಗಿ ಬಾಹುಬಲಿ ಮಹಾರಾಜ್‌ಗೆ ಜೈ ಎನ್ನುವ ಜಯಘೋಷಗಳು ಮೊಳಗಿದವು.
icon

(4 / 10)

ಗೊಮ್ಮಟಗಿರಿಯ ವಿರಾಟ್‌ ಮೂರ್ತಿಗೆ ಅರಿಷಿಣದ ಅಭಿಷೇಕ ಸಮಯ. ಶಿವಮೊಗ್ಗ ಜಿಲ್ಲೆ ಹೊಂಬುಜ ಜೈನ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಸಹಿತ ಹಲವರಿಂದ ಪೂಜೆಗಳ ಸಲ್ಲಿಕೆ.
icon

(5 / 10)

ಗೊಮ್ಮಟ ಮೂರ್ತಿಗೆ ಪಂಚಾಮೃತ ಅಭಿಷೇಕದ ಸಮಯ. ಈ ವೇಳೆ ಕಂಬದಹಳ್ಳಿ ಜೈನಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಆರತಿ ಪುರತ ಸಿದ್ದಾಂತ ಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಜತೆಗೂಡಿ ಅಭಿಷೇಕ ಸಲ್ಲಿಸಿದರು.
icon

(6 / 10)

ಹುಣಸೂರು ತಾಲ್ಲೂಕಿನ ಗೊಮ್ಮಟಗಿರಿಯಲ್ಲಿರುವ ಗೊಮ್ಮಟೇಶ್ವರ ಮೂರ್ತಿಗೆ ಸುಮಂಗಲಿಯರು ಹಾಗೂ ಧಾರ್ಮಿಕ ಗುರುಗಳು ಪೂಜೆ ಸಲ್ಲಿಸಿ ಮಸ್ತಕಾಭಿಷೇಕದಲ್ಲಿ ಪಾಲ್ಗೊಂಡರು.
icon

(7 / 10)

ವಿರಾಗ ಮೂರ್ತಿಗೆ ಮೇಲಿನಿಂದ ಅಭಿಷೇಕ ನಡೆಯುತ್ತಿದ್ದರೆ ಕೆಳ ಭಾಗದಲ್ಲಿ ನಿಂತ ಭಕ್ತರಿಗೆ ಅದೇನೋ ಪುಳಕ. ಪಾದ ಮೇಲೆ ಬೀಳುವ ಅಭಿಷೇಕದ ಸನ್ನಿವೇಶವನ್ನು ಸೆರೆ ಹಿಡಿಯುವುದು ಖುಷಿ ಸಂದರ್ಭ.
icon

(8 / 10)

ಗೊಮ್ಮಟಗಿರಿಯಲ್ಲಿ ಪ್ರತಿ ವರ್ಷ ನಡೆಯುವ ಮಸ್ತಕಾಭಿಷೇಕ ವೀಕ್ಷಣೆಗೆ ಮೈಸೂರು ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ. 
icon

(9 / 10)

ಮೈಸೂರಿನಿಂದ ಸುಮಾರು 25 ಕಿ.ಮಿ ದೂರದಲ್ಲಿರುವ ಗೊಮ್ಮಟಗಿರಿಯಲ್ಲಿ ನಡೆದ ಮಸ್ತಕಾಭಿಷೇಕ ಕಣ್ತುಂಬಿಕೊಳ್ಳಲು ಬೆಟ್ಟ ಏರುತ್ತಿರುವ ಭಕ್ತ ಗಣ,. 
icon

(10 / 10)

ಇತರ ಗ್ಯಾಲರಿಗಳು