Mysore News: ಮೈಸೂರಲ್ಲಿ ವಾಸು ದೀಕ್ಷಿತ್ ಸಂಗೀತ ಸಂಜೆ, ದಾಸರ ಗೀತೆಗಳಿಗೆ ರಂಗಾಸಕ್ತರು ಫಿದಾ photos
- ಸಂಗೀತ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿಸಿದ ಮೈಸೂರಿನವರೇ ಆದ ವಾಸು ದೀಕ್ಷಿತ್( Vasu Dixit) ಹಿರಿಯ ರಂಗಕರ್ಮಿ ಮೈಮ್ ರಮೇಶ್ ಅವರ ಜಿಪಿಐಇಆರ್( GPIER) ತಂಡದ 30 ವರ್ಷಗಳ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ರಂಗೋತ್ಸವದಲ್ಲಿ ಸಂಗೀತ ಸಂಜೆ ನಡೆಸಿಕೊಟ್ಟರು.ರಂಗಭೂಮಿ ಆಸಕ್ತರಿಗೆ ದಾಸರ ಪದಗಳನ್ನು ತಮ್ಮದೇ ಶೈಲಿಯಲ್ಲಿ ವಾಸು ಉಣ ಬಡಿಸಿದ್ದು ಹೀಗೆ.

(1 / 6)
ಮೈಸೂರಿನ ರಂಗಾಯಣ ಕಲಾವಿದರಾಗಿ ನಿವೃತ್ತರಾಗಿರುವ ಮೈಮ್ ರಮೇಶ್ ಅವರದ್ದು ರಂಗಭೂಮಿಯಲ್ಲಿ ದೊಡ್ಡ ಹೆಸರು. ಅವರು ಹುಟ್ಟು ಹಾಕಿದ ಜಿಪಿಐಇಆರ್ ತಂಡದ ವಾರ್ಷಿಕೋತ್ಸದಲ್ಲಿ ವಾಸು ದೀಕ್ಷಿತ್ ಎರಡು ಗಂಟೆಗೂ ಹೆಚ್ಚು ಕಾರ್ಯಕ್ರಮ ನಡೆಸಿಕೊಟ್ಟರು
(2 / 6)
ವಾಸು ದೀಕ್ಷಿತ್ ತಮ್ಮದೇ ಬ್ಯಾಂಡ್ ತಂಡದೊಂದಿಗೆ ಕರ್ನಾಟಕದ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲು ಗಮನ ಸೆಳೆದಿದ್ದಾರೆ. ದಾಸರ ಪದಗಳು, ಶಿಶುನಾಳ ಷರೀಫರ ಗೀತೆಗಳನ್ನು ಹಾಡಿದರು.
(3 / 6)
ಗಿಟಾರ್ ಹಿಡಿದುಕೊಂಡು ಯಾರಿಗೂ ಹೇಳೋದು ಬ್ಯಾಡ, ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ಎನ್ನುವ ಗೀತೆಗಳನ್ನು ವಾಸು ಹಾಡಿ ಮುದ ನೀಡಿದರು.
(4 / 6)
ರಾಗಿಯ ತಂದೀರಾ ಭಿಕ್ಷಕೆ ರಾಗಿಯ ತಂದೀರಾ. ಭೋಗ್ಯ ರಾಗಿ ಯೋಗ್ಯ ರಾಗಿ ಎನ್ನುವ ದಾಸರ ಪದವನ್ನು ವಾಸು ಧ್ವನಿಯಿಂದ ಕೇಳಿ ಫಿದಾ ಆದವರೇ ಇರಲಿಲ್ಲ.
(5 / 6)
ಅದರಲ್ಲೂ ಜಿಪಿಐಇಆರ್ ತಂಡದೊಂದಿಗೆ ಆಗ ಸಂಗೀತಯಾನವನ್ನು ಆರಂಭಿಸಿದ ವಾಸು ದೀಕ್ಷಿತ್ ಇದೇ ಕಾರ್ಯಕ್ರಮಕ್ಕಾಗಿ ಗುರು ಕೂಡಿ ಕಂಡೆವೋ ನಾವಿಂದು ಎನ್ನುವ ಗೀತೆ ಹಾಡಿ ಅಲ್ಲಿ ಸೇರಿದ್ದವರಲ್ಲಿ ನೆನಪುಗಳ ಯಾನ ಮಾಡಿಸಿದರು.
ಇತರ ಗ್ಯಾಲರಿಗಳು