Mysore Dasara2024: ಈ ಬಾರಿ ಮೈಸೂರು ದಸರಾಕ್ಕೆ ಬರ್ತೀರಾ, ಅಂಬಾವಿಲಾಸದೊಂದಿಗೆ ಈ 8 ಅರಮನೆಗಳನ್ನು ತಪ್ಪದೇ ನೋಡಿ photos-mysore news mysore dasara 2024 dont miss to see 8 different palaces in mysore city including main palace kub ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysore Dasara2024: ಈ ಬಾರಿ ಮೈಸೂರು ದಸರಾಕ್ಕೆ ಬರ್ತೀರಾ, ಅಂಬಾವಿಲಾಸದೊಂದಿಗೆ ಈ 8 ಅರಮನೆಗಳನ್ನು ತಪ್ಪದೇ ನೋಡಿ Photos

Mysore Dasara2024: ಈ ಬಾರಿ ಮೈಸೂರು ದಸರಾಕ್ಕೆ ಬರ್ತೀರಾ, ಅಂಬಾವಿಲಾಸದೊಂದಿಗೆ ಈ 8 ಅರಮನೆಗಳನ್ನು ತಪ್ಪದೇ ನೋಡಿ photos

  • Mysore Palaces to visit ಮೈಸೂರು ಎಂದರೆ ಅರಮನೆಗಳ( Mysore City of Palaces) ನಗರಿ. ಇಲ್ಲಿ ಅಂಬಾವಿಲಾಸ ಅರಮನೆ ಮಾತ್ರವಲ್ಲದೇ ಎಂಟು ಅರಮನೆಗಳಿವೆ. ದಸರಾಗೆ ಬರುವ ಯೋಜನೆ ಇದ್ದರೆ ಈ ಅರಮನೆಗಳ ವೀಕ್ಷಣೆಗೆ ಅವಕಾಶವಿದೆ. ಇಲ್ಲದೇ ಇದ್ದರೆ ಮುಂದೆ ಬಂದಾಗಲೂ ಈ ಅರಮನೆ ಕಣ್ತುಂಬಿಕೊಳ್ಳಬಹುದು.

ಅಂಬಾ ವಿಲಾಸ ಅರಮನೆಮೈಸೂರಿನ ಪ್ರಮುಖ ಆಕರ್ಷಣೆ ಅಂಬಾ ವಿಲಾಸ ಅರಮನೆ. ಹಳೆಯ ಅರಮನೆಗೆ ಬೆಂಕಿ ಬಿದ್ದ ನಂತರ ಹೊಸದಾಗಿ ನಿರ್ಮಿಸಿದ ಅರಮನೆಯಿದು.. ಹಿಂದೂ, ಇಸ್ಲಾಂ, ಗೋಥಿಕ್ ಮತ್ತು ರಜಪೂತ ಶೈಲಿಗಳ ಉತ್ತಮ ಮಿಶ್ರಣವಾಗಿರುವುದರಿಂದ ವಾಸ್ತುಶಿಲ್ಪವು ಆಕರ್ಷಿಸುತ್ತದೆ. ಬೆರಗುಗೊಳಿಸುವ ಒಳಾಂಗಣವು ಸಂಕೀರ್ಣವಾದ ಕರಕುಶಲತೆಯನ್ನು ಪ್ರದರ್ಶಿಸುತ್ತದೆ. ಅರಮನೆ ಒಂದು ಸುತ್ತು ಹಾಕುವ ಅನುಭೂತಿಯೇ ಬೇರೆ.
icon

(1 / 8)

ಲಲಿತಮಹಲ್‌ಮೈಸೂರಿನ(Mysore )ಎರಡನೇ ಅತಿ ದೊಡ್ಡ ಅರಮನೆ ಎಂದು ಕೂಡ ಪ್ರಸಿದ್ಧಿಯನ್ನು ಪಡೆದಿದೆ ಈಗಿನ ಲಲಿತಮಹಲ್‌ ಹೋಟೆಲ್‌. ಮೈಸೂರಿನ ಮಹಾರಾಜರು (Maharajas) ಆಗಿನ ಭಾರತದ ವೈಸ್ ರಾಯ್ ಗಳಿಗಾಗಿ ಮತ್ತು ಅತಿಥಿಗಳಿಗಾಗಿ ಈ ಅರಮನೆಯನ್ನು ನಿರ್ಮಿಸಿದರು.  ಈ ಅರಮನೆಯಲ್ಲಿ ವೈಸ್ ರಾಯ್ ಕೊಠಡಿ, ಔತಣಕೂಟ ಹಾಗೂ ನೃತ್ಯ ಮಂಟಪ ಗಳಿವೆ. ಇಲ್ಲಿನ ಮೆಟ್ಟಿಲು ಇಟಾಲಿಯನ್ ಶೈಲಿಯ ಅಮೃತಶಿಲೆ ಕಟ್ಟಡವಿದು. ಈಗ ಹೊಟೇಲ್‌ ರೂಪ ಪಡೆದಿದೆ. ತಿ.ನರಸೀಪುರ ರಸ್ತೆಯಲ್ಲಿದೆ.
icon

(2 / 8)

ಜಯಲಕ್ಷ್ಮಿ ವಿಲಾಸಮೈಸೂರಿನ ಮಾನಸಗಂಗೋತ್ರಿ ಆವರಣದಲ್ಲಿರುವ ವಿಶಾಲ ಕಟ್ಟಡವಿದು. 1905 ರಲ್ಲಿ ಕೃಷ್ಣರಾಜ ಒಡೆಯರ್‌ ಅವರ ಅವಧಿಯಲ್ಲಿ ನಿರ್ಮಾಣವಾಗಿದೆ. ಸುಂದರ ಕಟ್ಟಡವನ್ನು ಮೊದಲು ರಾಜಕುಮಾರಿ ಮ್ಯಾನ್ಷನ್(Princess Mansion) ಎಂದು ಸಹ ಕರೆಯಲಾಗುತ್ತಿತ್ತು. ಇಲ್ಲಿ 125 ಕೊಠಡಿಗಳು, 3೦೦ ಕಿಟಕಿಗಳು, 247 ಸೊಗಸಾಗಿ ಕೆತ್ತಿದ ಬಾಗಿಲುಗಳ ವಿಶಾಲ ನೋಟ ನೋಡುವುದೇ ಚೆಂದ. ಈಗ ಮೈಸೂರು ವಿಶ್ವವಿದ್ಯಾನಿಲಯದ ಜನಪದ ಸಂಗ್ರಹಾಲಯವಾಗಿದೆ. ಪ್ರವಾಸಿಗರ ವೀಕ್ಷಣೆಗೆ ಅವಕಾಶವುಂಟು.
icon

(3 / 8)

ಜಗನ್ಮೋಹನ ಅರಮನೆಮೈಸೂರಿನ ಅರಮನೆಗಳಲ್ಲಿ ಜಗನ್ಮೋಹನ್ ಅರಮನೆಯು ಒಂದು. ಇದು ಮಹಾರಾಜರು ಪ್ರದರ್ಶನಗಳಿಗೆ ಹಾಗೂ ಮದುವೆಗಳಿಗೆ ಮೀಸಲಿಟ್ಟಿದ್ದ ಅರಮನೆ. ಈ ಕಟ್ಟಡವನ್ನು ಮೈಸೂರಿನ ಅರಸರು 1861 ರಲ್ಲಿ ನಿರ್ಮಾಣ ಮಾಡಿದರು. ಈಗಲೂ ಇದು ಮಹಾರಾಜರ ಆಸ್ತಿಯೇ. ಇಲ್ಲಿ ವಸ್ತು ಸಂಗ್ರಹಾಲಯವಿದೆ. ಕಾರ್ಯಕ್ರಮಗಳು ಆಗಾಗ ಆಯೋಜನೆಗೊಳ್ಳುತ್ತವೆ.
icon

(4 / 8)

ಚೆಲುವಾಂಬ ವಿಲಾಸ ಅರಮನೆಮೈಸೂರಿನ ಕೆಆರ್‌ಎಸ್‌ ರಸ್ತೆಯಲ್ಲಿರುವ  ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್‌ಟಿಆರ್‌ಐ)ದ ಕಟ್ಟಡವಿದು. ಇದನ್ನು ಮಹಾರಾಣಿಯರ ಕಟ್ಟಡಗಳಾಗಿ ಬಳಕೆ ಮಾಡಲಾಗುತ್ತಿತ್ತು. ಆರೂವರೆ ದಶಕದಿಂದ ಇದು ಆಹಾರ ತಂತ್ರಜ್ಞಾನಗಳ ಪ್ರಯೋಗಾಲಯ ಕಟ್ಟಡವಾಗಿ ರೂಪುಗೊಂಡಿದೆ. ಇಲ್ಲಿನ ಸಂಶೋಧನೆಗಳನ್ನು ವೀಕ್ಷಿಸಲು ಅವಕಾಶವಿದೆ. ಮೊದಲೇ ಅನುಮತಿ ಪಡೆದುಕೊಳ್ಳಬೇಕು.
icon

(5 / 8)

ಚಿತ್ತರಂಜನ್ ಅರಮನೆಮೈಸೂರು ಕೊಡಗು ರಸ್ತೆಯಲ್ಲಿರುವ ಚಿತ್ತರಂಜನ್ ಅರಮನೆಯನ್ನು ಮೈಸೂರು ಮಹಾರಾಜರು 1916 ರಲ್ಲಿ ತಮ್ಮ ಸಹೋದರಿಗಾಗಿ ನಿರ್ಮಿಸಿದರು. ಇದು ಈಗ ಗ್ರೀನ್‌ ಹೊಟೇಲ್‌ ಆಗಿ ರೂಪುಗೊಂಡು ವಿದೇಶಿ ಹಾಗೂ ದೇಶಿಯ ಅತಿಥಿಗಳಿಗೆ ಆತಿಥ್ಯ ನೀಡುತ್ತದೆ.  31 ಕೊಠಡಿಗಳನ್ನು ಹೊಂದಿರುವ ಸಣ್ಣ ಹೋಟೆಲ್ ಮತ್ತು ಪರಿಸರ ಸ್ನೇಹಿಯಾಗಿದೆ. ಹೋಟೆಲ್‌ನಿಂದ ಬರುವ ಲಾಭವನ್ನು ಚಾರಿಟಿಗೆ ನೀಡಲಾಗುತ್ತದೆ. ಇಲ್ಲಿಗೂ ಭೇಟಿ ನೀಡಬಹುದು.
icon

(6 / 8)

ರಾಜೇಂದ್ರ ವಿಲಾಸ ಅರಮನೆಮೈಸೂರಿಗೆ ಆಗಮಿಸುತ್ತಿದ್ದ ಅತಿಥಿಗಳು ಚಾಮುಂಡಿಬೆಟ್ಟಕ್ಕೆ ತೆರಳಲು ಇಚ್ಛಿಸಿದರೆ ಅಲ್ಲಿ ಉಳಿಯಲು, ಅಲ್ಲಿಯೇ ಊಟೋಪಾಚಾರಕ್ಕೆ ಬಳಕೆಯಾಗುತ್ತಿದ್ದ ಅರಮನೆಯೇ ರಾಜೇಂದ್ರ ವಿಲಾಸ. ಇದಕ್ಕೆ ಬೇಸಿಗೆ ಅರಮನೆ ಎಂದೂ ಹೆಸರು ಉಂಟು. ಇದು ಚಾಮುಂಡಿ ಬೆಟ್ಟದ ಮೇಲೆ ಇದೆ. ಕೆಲ ದಿನ ಹೊಟೇಲ್‌ ಆಗಿತ್ತು. ಚಾಮುಂಡಿಬೆಟ್ಟಕ್ಕೆ ಭೇಟಿ ಕೊಟ್ಟಾಗ  ಅರಮನೆಯನ್ನು ನೋಡಿ ಬರಬಹುದು.
icon

(7 / 8)

ವಸಂತ ಮಹಲ್‌ ಅರಮನೆ ಮೈಸೂರಿನ ನಜರ್‌ಬಾದ್‌ನಲ್ಲಿರುವ ವಸಂತ ಮಹಲ್‌ ಅರಮನೆಯು ಮಹಾರಾಜರ ಚಟುವಟಿಕೆಗಳಿಗೆ ಬಳಕೆಯಾಗುತ್ತಿತ್ತು. 1842ರಲ್ಲಿ ಮೈಸೂರು ಅರಸರಿಂದ ನಿರ್ಮಿಸಲ್ಪಟ್ಟಿರುವ 'ವಸಂತ ಮಹಲ್‌'  ಈಗ ಶಿಕ್ಷಣ ಇಲಾಖೆಯ ಕಚೇರಿಯಾಗಿದೆ. ಡಯಟ್‌ ಸಂಸ್ಥೆ ಇಲ್ಲಿದೆ. ಇಲ್ಲಿಗೂ ಕೂಡ ಭೇಟಿ ನೀಡುವ ಅವಕಾಶವಿದೆ.
icon

(8 / 8)

ಇತರ ಗ್ಯಾಲರಿಗಳು