ಅರ್ಜುನನ ಸ್ಥಾನ ತುಂಬಲಿದ್ದಾನೆ ಧನಂಜಯ, ಈ ಬಾರಿ ಜಂಬೂ ಸವಾರಿಯಲ್ಲಿ ಯಾವ ಆನೆ ಜವಾಬ್ದಾರಿ ಏನೇನು; ಪಟ್ಟಿ ಅಂತಿಮಗೊಳಿಸಿದ ಅರಣ್ಯ ಇಲಾಖೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅರ್ಜುನನ ಸ್ಥಾನ ತುಂಬಲಿದ್ದಾನೆ ಧನಂಜಯ, ಈ ಬಾರಿ ಜಂಬೂ ಸವಾರಿಯಲ್ಲಿ ಯಾವ ಆನೆ ಜವಾಬ್ದಾರಿ ಏನೇನು; ಪಟ್ಟಿ ಅಂತಿಮಗೊಳಿಸಿದ ಅರಣ್ಯ ಇಲಾಖೆ

ಅರ್ಜುನನ ಸ್ಥಾನ ತುಂಬಲಿದ್ದಾನೆ ಧನಂಜಯ, ಈ ಬಾರಿ ಜಂಬೂ ಸವಾರಿಯಲ್ಲಿ ಯಾವ ಆನೆ ಜವಾಬ್ದಾರಿ ಏನೇನು; ಪಟ್ಟಿ ಅಂತಿಮಗೊಳಿಸಿದ ಅರಣ್ಯ ಇಲಾಖೆ

ಜಂಬೂ ಸವಾರಿಯಲ್ಲಿ ಆನೆಗಳೇ ಪ್ರಮುಖ ಆಕರ್ಷಣೆ. ಮೆರವಣಿಗೆಯಲ್ಲಿ ಭಾಗಿಯಾಗುವ ಆನೆಗಳು ಅಂಬಾರಿ ಹೊರುವ, ನಿಶಾನೆ ತೋರುವ ಜವಾಬ್ದಾರಿಯನ್ನು ಹೊರಲಿವೆ. ಈ ಬಾರಿ ಯಾವ ಆನೆಗೆ ಯಾವ ಜವಾಬ್ದಾರಿ ಇಲ್ಲಿದೆ ಚಿತ್ರ ನೋಟ.

ಜಂಬೂಸವಾರಿಯಲ್ಲಿ ಅಭಿಮನ್ಯು ಚಿನ್ನದ ಅಂಬಾರಿ ಹೊರಲಿದ್ದಾನೆ. ಇದು ಐದನೇ ಬಾರಿ ಅಂಬಾರಿ ಹೊರುವ ಅವಕಾಶ.
icon

(1 / 8)

ಆಪರೇಷನ್‌ ಖೆಡ್ಡಾ ಖ್ಯಾತಿಯ ಆನೆ ಅಭಿಮನ್ಯು. ಕರ್ನಾಟಕ ಮಾತ್ರವಲ್ಲದೇ ಹಲವು ಭಾಗಗಳಲ್ಲಿ ಅಭಿಮನ್ಯು ಕಾಡಾನೆ ಸೆರೆಯಲ್ಲಿ ಭಾಗಿಯಾಗಿದ್ದಾನೆ.ಮಾವುತ ವಸಂತನ ವಿಧೇಯ ಆನೆ ಅಭಿಮನ್ಯುಗೆ ಈ ಬಾರಿಯೂ ನಾಯಕತ್ವ ದೊರೆತಿದೆ.
icon

(2 / 8)

ಅಭಿಮನ್ಯುವಿನ ಎಡಬಲದಲ್ಲಿ ಹಿರಣ್ಯ ಕುಮ್ಕಿ ಆನೆಗಳಾಗಿ ಸಾಥ್ ನೀಡಲಿದೆ.  ಹಿರಣ್ಯ ಆನೆ ಶ್ರೀರಂಗಪಟ್ಟಣ ದಸರಾಕ್ಕೂ ಹೋಗಿತ್ತು.
icon

(3 / 8)

ಅಭಿಮನ್ಯುವಿನ ಬಲದಲ್ಲಿ ಲಕ್ಷ್ಮಿ ಕುಮ್ಕಿ ಆನೆಗಳಾಗಿ ಸಾಥ್ ನೀಡಲಿದೆ.  ಶ್ರೀರಂಗಪಟ್ಟಣ ದಸರಕ್ಕೂ ಇದೇ ಆನೆ ಕುಮ್ಕಿಯಾಗಿ ಹೆಜ್ಜೆ ಹಾಕಿತ್ತು.
icon

(4 / 8)

ಕೆಲ ದಿನಗಳ ಹಿಂದೆಯೇ ಮದದ ಕಾರಣದಿಂದ ಕೊಂಚ ಗಲಿಬಿಲಿಗೊಂಡಿದ್ದ ಧನಂಜಯನಿಗೆ ಹೊಸ ಜವಾಬ್ದಾರಿ.,ನಿಶಾನೆ ಆನೆಯಾಗಿ ಮೆರವಣಿಗೆ ಮುನ್ನಡೆಸಿದ್ದ ಅರ್ಜುನ. ಅರ್ಜುನನ ಅಕಾಲಿಕ ಸಾವಿನಿಂದ ನಿಶಾನೆ ಆನೆಗೆ ಪರ್ಯಾಯದ ಯೋಚನೆ ಮಾಡಿದ್ದ ಅರಣ್ಯ ಇಲಾಖೆ ಅಳೆದು ತೂಗಿ ಧನಂಜಯ ನಿಶಾನೆ ಆನೆಯಾಗಿ ಆಯ್ಕೆ ಮಾಡಿದೆ. 
icon

(5 / 8)

ನೌಫತ್ ಆನೆಯಾಗಿ ಗೋಪಿ ಆನೆ ಆಯ್ಕೆ ಮಾಡಲಾಗಿದೆ. ಕಳೆದ ಬಾರಿ  ಧನಂಜಯನಿಗೆ ಈ ಹೊಣೆ ನೀಡಲಾಗಿತ್ತು.
icon

(6 / 8)

ಮಹೇಂದ್ರ ಆನೆಯನ್ನು ಶ್ರೀರಂಗಪಟ್ಟಣ ಅಂಬಾರಿ ಹೊರುವ ಜವಾಬ್ದಾರಿ ನೀಡಲಾಗಿತ್ತು. ಅದನ್ನು ಮಹೇಂದ್ರ ಯಶಸ್ವಿಯಾಗಿ ನಿಭಾಯಿಸಿದ್ದಾನೆ.
icon

(7 / 8)

ಭವಿಷ್ಯದ ಅಂಬಾರಿ ಹೊರುವ ಆನೆ ಎಂದು ಹೆಸರಾಗಿರುವ ಭೀಮನಿಗೆ ಈ ಬಾರಿ ಸಂಗೀತ ಗಾಡಿ ಎಳೆಯುವ ಜವಾಬ್ದಾರಿ ನೀಡಬಹುದು.
icon

(8 / 8)

ಇತರ ಗ್ಯಾಲರಿಗಳು