ನಾಡಹಬ್ಬಕ್ಕೆ ಏಕಲವ್ಯ ಬಂದ ಸೈಡು ಬಿಡಿ; ಮೈಸೂರು ದಸರಾ ಅಂಬಾರಿ ಹೊರಲು ಅಣಿಯಾಗುವನೇ ಮೂಡಿಗೆರೆ ಮಾಜಿ ಪುಂಡಾನೆ: ಹೀಗಿದೆ ಆನೆ ತಯಾರಿ ಕ್ಷಣಗಳು
- ಒಂದು ಕಾಲಕ್ಕೆ ಪುಂಡಾನೆಗಳಾಗಿ ಮೆರದು ನಂತರ ಸೆರೆ ಸಿಕ್ಕು ದಸರಾದಂತದ ವಿಶ್ವವಿಖ್ಯಾತ ಉತ್ಸವದಲ್ಲಿ ಭಾಗಿಯಾದ ಹಲವು ಆನೆಗಳಿವೆ. ಇದಕ್ಕೆ ಏಕಲವ್ಯ ಆನೆ ಸೇರ್ಪಡೆ. ಮೂಡಿಗೆರೆಯಲ್ಲಿ ಸೆರೆ ಸಿಕ್ಕ ಈ ಆನೆ ಬದಲಾಗಿದ್ದು ಹೇಗೆ, ಇಲ್ಲಿದೆ ಚಿತ್ರ ನೋಟ
- ಚಿತ್ರಗಳು: ಎಸ್‌ಆರ್ ಮಧುಸೂದನ್ ಮೈಸೂರು
- ಒಂದು ಕಾಲಕ್ಕೆ ಪುಂಡಾನೆಗಳಾಗಿ ಮೆರದು ನಂತರ ಸೆರೆ ಸಿಕ್ಕು ದಸರಾದಂತದ ವಿಶ್ವವಿಖ್ಯಾತ ಉತ್ಸವದಲ್ಲಿ ಭಾಗಿಯಾದ ಹಲವು ಆನೆಗಳಿವೆ. ಇದಕ್ಕೆ ಏಕಲವ್ಯ ಆನೆ ಸೇರ್ಪಡೆ. ಮೂಡಿಗೆರೆಯಲ್ಲಿ ಸೆರೆ ಸಿಕ್ಕ ಈ ಆನೆ ಬದಲಾಗಿದ್ದು ಹೇಗೆ, ಇಲ್ಲಿದೆ ಚಿತ್ರ ನೋಟ
- ಚಿತ್ರಗಳು: ಎಸ್‌ಆರ್ ಮಧುಸೂದನ್ ಮೈಸೂರು
(1 / 7)
ಇದರ ಹೆಸರು ಏಕಲವ್ಯ. ಐದು ವರ್ಷದ ಹಿಂದೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಪುಂಡಾನೆಯಾಗಿ ಹೆಸರುವಾಸಿಯಾಗಿದ್ದ. ಈಗ ಮೈಸೂರು ದಸರಾ ಗಜಪಡೆಯ ತಂಡದ ಸದಸ್ಯ.
(2 / 7)
ಮೂಡಿಗೆರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೋಟಗಳಿಗೆ ನುಗ್ಗಿ, ಜಮೀನುಗಳಲ್ಲಿ ಬೆಳೆ ನಾಶ ಮಾಡುತ್ತಲೇ ಹೆಸರುವಾಸಿಯಾಗಿದ್ದ ಆನೆಯನ್ನು ಐದು ವರ್ಷದ ಹಿಂದೆ ಅರಣ್ಯ ಇಲಾಖೆ ಸೆರೆ ಹಿಡಿದಿತ್ತು,
(3 / 7)
ಆನಂತರ ಈ ಆನೆ ಸೇರಿದ್ದು ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರ. ಅಲ್ಲಿ ಸತತ ಎರಡು ವರ್ಷ ಕಠಿಣ ತರಬೇತಿ. ಹೇಳಿದ್ದೆಲ್ಲವನ್ನೂ ಪಾಲಿಸುವ ಆತನಿಗೆ ಏಕಲವ್ಯ ಎನ್ನುವ ಹೆಸರು ನೀಡಲಾಯಿತು.
(4 / 7)
ಈ ವರ್ಷ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಆನೆ ಶಿಬಿರಗಳಿಗೆ ಹೋದಾಗ ಕಣ್ಣಿಗೆ ಬಿದ್ದವನೇ ಏಕಲವ್ಯ. ದಸರಾ ಹಿರಿಯ ಆನೆಗಳು ಒಂದೊಂದಾಗಿ ಮೃತಪಡುತ್ತಿರುವ ನಡುವೆ ಹೊಸ ಆನೆ ಹುಡುಕಾಟ ನಡೆದಿತ್ತು. ಅರ್ಜುನನಂತೆ ಇರುವ ಏಕಲವ್ಯ ಕೂಡ ದಸರಾ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡೇ ಬಿಟ್ಟ.
(5 / 7)
ಒಂದು ತಿಂಗಳಿನಿಂದ ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಏಕಲವ್ಯ ಮಾವುತ ಸೃಜನ್ ಹಾಗು ಕಾವಾಡಿ ಹಿದಾಯತ್ ಎಲ್ಲಾ ಸೂಚನೆಗಳನ್ನು ಪಾಲಿಸುತ್ತಾನೆ. ಇದರಿಂದ ಆತನಿಗೂ ಬಾರಿ ಭಾರ ಹೊರುವ ತಾಲೀಮುಗಳೂ ನಡೆದಿವೆ.
(6 / 7)
ಎಂತಹ ಸನ್ನಿವೇಶದಲ್ಲೂ ಕೂಲ್ ಆಗಿಯೇ ಇರುವ ಏಕಲವ್ಯ ಮಾವುತ ಹಾಗೂ ಕವಾಡಿಯ ಸುಪರ್ದಿಯಲ್ಲಿ ಬದಲಾಗಿದ್ದಾನೆ, ಮಾಗುತ್ತಿದ್ದಾನೆ, ಮೊದಲ ದಸರಾದಲ್ಲೇ ಗಮನ ಸೆಳೆದಿದ್ದಾನೆ.
ಇತರ ಗ್ಯಾಲರಿಗಳು