ಮೈಸೂರು ಅರಮನೆ ಅಂಗಳದಲ್ಲಿ ಬಹುಪರಾಕ್ ರಿಂಗಣ; ರಾಜವಂಶಸ್ಥ ಯದುವೀರ್ ಒಡೆಯರ್ ಖಾಸಗಿ ದರ್ಬಾರ್ ಹೀಗಿತ್ತು
ಮೈಸೂರು ದಸರಾ ಹಿನ್ನೆಲೆಯಲ್ಲಿ ಅರಮನೆಯ ಆವರಣದಲ್ಲಿ ಯದುವೀರ್ ಒಡೆಯರ್ ಅವರು ನವರಾತ್ರಿ ಖಾಸಗಿ ದರ್ಬಾರ್ ಅನ್ನು ಆರಂಭಿಸಿದರು.ಮೊದಲ ದಿನವೇ ನಾನಾ ಧಾರ್ಮಿಕ ಚಟುವಟಿಕೆಗಳು ಜರುಗಿದವುಚಿತ್ರಗಳು: ಎಸ್‌ಆರ್ ಮಧುಸೂಧನ್ ಮೈಸೂರು
(1 / 6)
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಖಾಸಗಿ ದರ್ಬಾರ್ ಅನ್ನು ಮೈಸೂರು ಅರಮನೆ ಆವರಣದಲ್ಲಿ ಗುರುವಾರ ಆರಂಭಿಸಿದರು.
(2 / 6)
ಬೆಳಿಗ್ಗೆಯೇ ಎಣ್ಣೆಯ ಸ್ನಾನದ ನಂತರ ವಿವಿಧ ಪೂಜಾ ವಿಧಾನಗಳನ್ನು ಪೂರೈಸಿ ಕಂಕಣಧಾರಣೆ ಮಾಡಿಕೊಂಡು ಯದುವೀರ್ ಒಡೆಯರ್ ಅವರು ರತ್ನಖಚಿತ ಸಿಂಹಾಸನರೋಹಣ ಮಾಡಿದರು.
(3 / 6)
ವಂದಿ ಮಾಗದರು ಬಹುಪರಾಕ್ ಕೂಗುತ್ತಿರುವ ನಡುವೆಯೇ ಹಳೆಯ ರಾಜವೈಭವ ನೆನಪಿಸುವಂತೆ ಖಾಸಗಿ ದರ್ಬಾರ್ ಸಭಾಂಗಣದಲ್ಲಿ ನಡೆದ ಚಟುವಟಿಕೆಯಲ್ಲಿ ಯದುವೀರ್ ಉತ್ಸಾಹದಿಂದಲೇ ಭಾಗಿಯಾದರು.
(4 / 6)
ಯದುವೀರ್ ಅವರ ದರ್ಬಾರ್ ವೇಳೆ ಜಯಚಾಮರಾಜ ಒಡೆಯರ್ ಅವರ ಕಾಯೌ ಶ್ರೀ ಗೌರಿ ಸೇರಿ ಹಲವು ಗೀತೆಗಳನ್ನು ನುಡಿಸಲಾಯಿತು. ಈ ವೇಳೆ ಒಡೆಯರ್ ಗೌರವ ವಂದನೆ ಸಲ್ಲಿಸಿದರು.
(5 / 6)
ರತ್ನ ಖಚಿತ ಸಿಂಹಾಸನ ಏರಿದ ಯದುವೀರ್ ಅವರು ಕೆಲ ಹೊತ್ತು ಖಾಸಗಿ ದರ್ಬಾರ್ ಅನ್ನು ನಡೆಸಿ ಎಲ್ಲಾ ವಿಧಿ ವಿಧಾನಗಳನ್ನು ಮೊದಲ ದಿನ ಪೂರೈಸಿದರು.
ಇತರ ಗ್ಯಾಲರಿಗಳು