Mysore Dasara: ಮೈಸೂರು ದಸರಾದಲ್ಲಿ ಯುವ ಹವಾ, ಯುವ ಸಂಭ್ರಮಕ್ಕೆ ಜೋಶ್ ನೀಡಿದ ಶ್ರೀ ಮುರಳಿ, ರುಕ್ಮಿಣಿ; ಹೀಗಿತ್ತು ಮೊದಲ ದಿನದ ಸಡಗರ photo
- Mysore Dasara Yuva Sambhrama ಮೈಸೂರು ದಸರಾದ ಸಡಗರ ಜೋರಾಗಿದೆ. ಈ ಬಾರಿ ಯುವ ಸಂಭ್ರಮದ ಚಟುವಟಿಕೆಗಳು ಶುರುವಾಗಿದ್ದು. ಮೊದಲ ದಿನ ಶ್ರೀಮುರಳಿ ಜೋಶ್ ತುಂಬಿದ್ದಾರೆ. ಹೀಗಿತ್ತು ಯುವ ಸಂಭ್ರಮದ ಖುಷಿಯ ಕ್ಷಣಗಳು.
- Mysore Dasara Yuva Sambhrama ಮೈಸೂರು ದಸರಾದ ಸಡಗರ ಜೋರಾಗಿದೆ. ಈ ಬಾರಿ ಯುವ ಸಂಭ್ರಮದ ಚಟುವಟಿಕೆಗಳು ಶುರುವಾಗಿದ್ದು. ಮೊದಲ ದಿನ ಶ್ರೀಮುರಳಿ ಜೋಶ್ ತುಂಬಿದ್ದಾರೆ. ಹೀಗಿತ್ತು ಯುವ ಸಂಭ್ರಮದ ಖುಷಿಯ ಕ್ಷಣಗಳು.
(1 / 9)
ಮೈಸೂರಿನ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿರುವ, ಯುವ ಸಂಭ್ರಮ ಕಾರ್ಯಕ್ರಮಕ್ಕೆ ಡೊಳ್ಳು ಬಾರಿಸುವ ಮೂಲಕ ನಟ ಶ್ರೀಮುರಳಿ ಚಾಲನೆ ನೀಡಿದರು.
(2 / 9)
ಮೈಸೂರು ದಸರಾ ಯುವ ಸಂಭ್ರಮದ ಮೊದಲ ದಿನ ಗಮನ ಸೆಳೆದ ನಟ ಅಪ್ಪು ಚಿತ್ರ ಹಾಗೂ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಹಾಡು.
(4 / 9)
ದಸರಾ ಎಂದರೆ ಎಲ್ಲರಿಗೂ ಬಹಳ ಅಚ್ಚುಮೆಚ್ಚು. ದಸರಾ ಬಂತೆಂದರೆ ಇಲ್ಲಿನ ಜನರು ಹಾಗೂ ಮೈಸೂರಿನ ಆಡಂಬರವನ್ನು ನೋಡಲು ಎರಡು ಕಣ್ಣು ಸಾಲದು. ಇಂತಹ ಅದ್ಬುತ ದೃಶ್ಯಗಳು ಪ್ರಪಂಚದಲ್ಲಿ ಎಲ್ಲೋಯೂ ನೋಡಲು ಸಿಗುವುದಿಲ್ಲ ಎಂದು ಶ್ರೀಮುರಳಿ ಖುಷಿಯಾಗಿಯೇ ಹೇಳಿದರು.
(6 / 9)
ವಿಶ್ವ ವಿಖ್ಯಾತ ನಾಡಹಬ್ಬದಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಮೈಸೂರು ಜನತೆ ಯಾವಾಗಲು ನಮ್ಮ ಮೇಲೆ ಚಿತ್ರ ರಂಗದ ಮೇಲೆ ಇಟ್ಟಿರುವ ಪ್ರೀತಿಗೆ ಎಂದಿಗೂ ಚಿರಋಣಿ ಎಂದು ಹೇಳುವುದನ್ನು ಕನ್ನಡ ಚಲನಚಿತ್ರ ನಟಿ ರುಕ್ಮಿಣಿ ವಸಂತ್ ಮರೆಯಲಿಲ್ಲ.
(7 / 9)
ಯುವ ಸಂಭ್ರಮದಲ್ಲಿ ಹಲವು ವಿಶೇಷಗಳಿದ್ದವು. ಯುವಸಂಭ್ರಮಕ್ಕೆ ಬಂದಿದ್ದ ಶ್ರೀ ಮುರಳಿ ಅವರಿಗೆ ಅವರದ್ದೇ ಚಿತ್ರ ಇರುವ ಭಾವಚಿತ್ರದ ನೆನಪಿನ ಕಾಣಿಕೆ ನೀಡಲಾಯಿತು.
(8 / 9)
ಅಭಿಮಾನಿಗಳು ಅಪ್ಪು ಅವರೊಂದಿಗೆ ಶ್ರೀ ಮುರಳಿ ಇರುವ ವಿಶೇಷ ಚಿತ್ರವನ್ನು ರೂಪಿಸಿದ್ದು ಯುವ ಸಂಭ್ರಮದಲ್ಲಿ ಇದನ್ನು ಪ್ರೀತಿಯಿಂದಲೇ ಮುರಳಿ ಸ್ವೀಕರಿಸಿದರು.
ಇತರ ಗ್ಯಾಲರಿಗಳು