Mysore Dasara: ದಸರಾ ಗಜಪಡೆ ಕ್ಯಾಪ್ಟನ್‌ ಅಭಿಮನ್ಯು ಮಾವುತಗೆ ಸಿಎಂ ಪದಕ: ಎಕೆ 47 ಆನೆ ನಿಯಂತ್ರಿಸುವುದು ಅಷ್ಟು ಸುಲಭನಾ photos-mysore news mysore dasara ambari captain abhimanyu mahout vasant gets cm medal for meritorious service kub ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysore Dasara: ದಸರಾ ಗಜಪಡೆ ಕ್ಯಾಪ್ಟನ್‌ ಅಭಿಮನ್ಯು ಮಾವುತಗೆ ಸಿಎಂ ಪದಕ: ಎಕೆ 47 ಆನೆ ನಿಯಂತ್ರಿಸುವುದು ಅಷ್ಟು ಸುಲಭನಾ Photos

Mysore Dasara: ದಸರಾ ಗಜಪಡೆ ಕ್ಯಾಪ್ಟನ್‌ ಅಭಿಮನ್ಯು ಮಾವುತಗೆ ಸಿಎಂ ಪದಕ: ಎಕೆ 47 ಆನೆ ನಿಯಂತ್ರಿಸುವುದು ಅಷ್ಟು ಸುಲಭನಾ photos

  • ಆನೆಯನ್ನು ನಿಯಂತ್ರಿಸುವುದು ಸುಲಭವಲ್ಲ. ಅದೂ ಒಂದು ಕಲೆಯೇ. ದಸರಾ ಅಂಬಾರಿ( Dasara Elephants) ಆನೆ ಅಭಿಮನ್ಯು( Ambari Abhimanyu) ಮಾವುತ ವಸಂತಗೆ ಆ ಕಲೆ ಒಲಿದಿದೆ. ಈ ಕಾರಣದಿಂದಲೇ ಮಾವುತಗೆ ಈ ಬಾರಿ ಸಿಎಂ ಪದಕ ದೊರೆತಿದೆ.

ಜೆ.ಎಸ್​ ವಸಂತ ಕರ್ನಾಟಕ ಹಾಗೂ ಹೊರ ರಾಜ್ಯಗಳ 100ಕ್ಕೂ ಹೆಚ್ಚು ಕಾಡಾನೆ ಹಾಗೂ ಹುಲಿ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. 2017ರಲ್ಲಿ ಇಂಡೋನೇಷ್ಯಾ ದೇಶಕ್ಕೆ ಹೋಗಿ ಅಲ್ಲಿಯ ಆನೆಗಳಿಗೆ ಕೂಡ ತರಬೇತಿಯನ್ನು ಪಡೆಯಲು ಹಾಗೂ ರಾಜ್ಯದಲ್ಲಿ ಹಾಗೂ ಶಿಬಿರಗಳಲ್ಲಿ ನೀಡುವ ತರಬೇತಿಯನ್ನು ನೀಡಿರುವುದು ವಿಶೇಷ.
icon

(1 / 6)

ಜೆ.ಎಸ್‌.ವಸಂತ ಎರಡು ದಶಕದಿಂದಲೂ ಅಭಿಮನ್ಯು ಆನೆ ಮಾವುತ.  ಆನೆಯೊಂದಿಗೆ ಒಡನಾಟ. ಈ ಕಾರಣದಿಂದಲೇ ವಸಂತ ಇದ್ದರೆ ಅಭಿಮನ್ಯು ಸುರಕ್ಷಿತ ಎನ್ನುವಷ್ಟರ ಮಟ್ಟಿಗೆ ವಿಶ್ವಾಸ ಬೆಳೆದಿದೆ. ವಸಂತ ಸೇವೆ ಗುರುತಿಸಿ ಕರ್ನಾಟಕ ಅರಣ್ಯ ಇಲಾಖೆ ಪದಕ ನೀಡಿದೆ,
icon

(2 / 6)

ಅಭಿಮನ್ಯು ಆನೆ ಅಂಬಾರಿ ಹೊರುವ ಜತೆಗೆ ಆನೆಗಳ ಆಪರೇಷನ್‌ನಲ್ಲಿ ಹೆಸರುವಾಸಿ. ಕರ್ನಾಟಕ ಅಲ್ಲದೇ ಹೊರ ರಾಜ್ಯಗಳಿಗೂ ಅಭಿಮನ್ಯು ಹತ್ತಾರು ಕಡೆ ಆನೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ. ಇದಕ್ಕೆಲ್ಲಾ ಮಾರ್ಗದರ್ಶಕ ಮಾವುತ ವಸಂತ. ಅಭಿಮನ್ಯು ಆನೆಯನ್ನು ಎಕೆ 47 ಎಂತಲೂ ಕರೆಯಲಾಗುತ್ತದೆ.
icon

(3 / 6)

ನಾಲ್ಕು ಬಾರಿ ಅಭಿಮನ್ಯು ಸುಸೂತ್ರವಾಗಿ ಅಂಬಾರಿ ಹೊತ್ತ ಹಿಂದೆ ವಸಂತ ರೂಡಿಸಿಕೊಂಡು ಬಂದಿರುವ ಒಡನಾಟವೂ ಕಾರಣ. ಮಗನಂತೆಯೇ ಅದನ್ನು ನೋಡಿಕೊಳ್ಳುವುದರಿಂದ ಎಲ್ಲಾ ಆದೇಶಗಳನ್ನು ಅಭಿಮನ್ಯು ಪಾಲಿಸುತ್ತದೆ.
icon

(4 / 6)

ಒಂದು ಆನೆ ರೂಪುಗೊಳ್ಳುವ ಹಿಂದೆ ಹಾಗೂ ಅವರ ನಡವಳಿಕೆಯಲ್ಲಿ ಬದಲಾವಣೆ ಕಾಣದೇ ಇರುವುದರ ಹಿಂದೆ ಇರುವುದು ಮಾವುತರ ಪಾತ್ರವೇ. ಅಪ್ಪನಿಂದಲೇ ಬಳುವಳಿಯಾಗಿ ಬಂದಿರುವ ಮಾವುತ ಕೆಲಸವನ್ನು ನಿಷ್ಠೆಯಿಂದ ವಸಂತ ಮಾಡುವುದರಿಂದಲೇ ಈ ಗೌರವ ಬಂದಿದೆ.
icon

(5 / 6)

ಕಾಡಿನಲ್ಲಿದ್ದಾಗಲೂ ಅಭಿಮನ್ಯು ಆನೆಯನ್ನು ಕಕ್ಕುಲಾತಿಯಿಂದಲೇ ನೋಡಿಕೊಳ್ಳುವ ವಸಂತ ಕಾರ್ಯಾಚರಣೆಗಳಿಗೆ ಹೋದಾಗ ಭಾರೀ ಮುನ್ನೆಚ್ಚರಿಕೆ ವಹಿಸುತ್ತಾರೆ. ದಸರಾಗೆ ಬಂದಾಗಲೂ ಜನರ ಒಡನಾಟ ಬರುವ ಕಾರಣಕ್ಕೆ ಅದಕ್ಕೆ ಸೂಕ್ತ ನಿರ್ದೇಶನ ನೀಡುತ್ತಾರೆ. ಮಾವುತ ವಸಂತ ಅಭಿಮನ್ಯು ಆನೆಯಷ್ಟೇ ಈಗ ಜನಪ್ರಿಯ.
icon

(6 / 6)

ಇತರ ಗ್ಯಾಲರಿಗಳು