ಮರದ ಅಂಬಾರಿ ಹೊತ್ತು ಸಾಗಿದ ಕ್ಯಾಪ್ಟನ್‌ ಅಭಿಮನ್ಯು, ಸಾಲಂಕೃತ ಗಜಪಡೆಯ ವೈಭವ; ಮೈಸೂರಲ್ಲಿ ಕಳೆಗಟ್ಟುತಿದೆ ದಸರಾ ತಯಾರಿ-mysore news mysore dasara2024 abhimanyu ambari rehearsal with jumbo team mysore getting ready for navaratri festival kub ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮರದ ಅಂಬಾರಿ ಹೊತ್ತು ಸಾಗಿದ ಕ್ಯಾಪ್ಟನ್‌ ಅಭಿಮನ್ಯು, ಸಾಲಂಕೃತ ಗಜಪಡೆಯ ವೈಭವ; ಮೈಸೂರಲ್ಲಿ ಕಳೆಗಟ್ಟುತಿದೆ ದಸರಾ ತಯಾರಿ

ಮರದ ಅಂಬಾರಿ ಹೊತ್ತು ಸಾಗಿದ ಕ್ಯಾಪ್ಟನ್‌ ಅಭಿಮನ್ಯು, ಸಾಲಂಕೃತ ಗಜಪಡೆಯ ವೈಭವ; ಮೈಸೂರಲ್ಲಿ ಕಳೆಗಟ್ಟುತಿದೆ ದಸರಾ ತಯಾರಿ

ಮೈಸೂರು ದಸರಾದಲ್ಲಿ ಜಂಬೂ ಸವಾರಿ ಪ್ರಮುಖ ಆಕರ್ಷಣೆ. ಚಾಮುಂಡೇಶ್ವರಿ ತಾಯಿ ವಿಗ್ರಹದೊಂದಿಗೆ ಚಿನ್ನದ ಅಂಬಾರಿ ಹೊರುವ ಆನೆಗಳಿಗೆ ತಾಲೀಮು ಜೋರಾಗಿದೆ. ಮೈಸೂರಿನಲ್ಲಿ ದಸರಾ ತಯಾರಿ ಭಾಗವಾಗಿ ಆನೆಗಳಿಗ ಭಾರ ಹಾಗೂ ಅಂಬಾರಿ ಹೊರುವ ತಾಲೀಮು ನಡೆಯಿತು. ಇದರ ನೋಟ ಇಲ್ಲಿದೆಚಿತ್ರಗಳು: ಎಸ್‌.ಆರ್.ಮಧುಸೂದನ

ಮೈಸೂರು ಅರಮನೆ ಆವರಣದಲ್ಲಿ ಅಂಬಾರಿ ತಾಲೀಮಿಗೆ ಅಣಿಯಾದ ಅಭಿಮನ್ಯು ಮತ್ತು ಅದರ ತಂಡ.
icon

(1 / 7)

ಮೈಸೂರು ಅರಮನೆ ಆವರಣದಲ್ಲಿ ಅಂಬಾರಿ ತಾಲೀಮಿಗೆ ಅಣಿಯಾದ ಅಭಿಮನ್ಯು ಮತ್ತು ಅದರ ತಂಡ.

ಅರಮನೆ ಆವರಣದಲ್ಲಿ ಜಂಬೂ ಸವಾರಿಯ ಆನೆಗಳಿಗೆ ಮರಳಿನ ಮೂಟೆ ಹಾಗೂ ಮರದ ಅಂಬಾರಿಯನ್ನು ಕಟ್ಟುವ ಕೆಲಸ ಭರದಿಂದಲೇ ನಡೆಯಿತು
icon

(2 / 7)

ಮರದ ಅಂಬಾರಿಯನ್ನು ಕಟ್ಟಿಕೊಂಡು ಮೈಸೂರಿನ ಸಯ್ಯಾಜಿರಾವ್‌ ರಸ್ತೆ ಕಡೆಗೆ ಅರಮನೆಯಿಂದ ಹೊರಟ ಅಭಿಮನ್ಯು.
icon

(3 / 7)

ಅಂಬಾರಿ ಕಟ್ಟಿಕೊಂಡು ತಾಲೀಮಿಗಾಗಿ ಅರಮನೆಯಿಂದ ಹೊರ ಬಂದು ಚಾಮರಾಜ ವೃತ್ತದ ಬಳಿ ತಲುಪಿದ ಅಭಿಮನ್ಯು ನೇತೃತ್ವದ ತಂಡ.
icon

(4 / 7)

ಮೈಸೂರಿನ ಕೆಆರ್‌ ವೃತ್ತದ ಬಳಿಗೆ ಹೊರಟ ಅಭಿಮನ್ಯು ಮತ್ತವನ ತಂಡ.
icon

(5 / 7)

ಮೈಸೂರಿನ ಕೆಆರ್‌ ವೃತ್ತದ ಬಳಿಗೆ ಹೊರಟ ಅಭಿಮನ್ಯು ಮತ್ತವನ ತಂಡ.

ಇನ್ನೇನು ದಸರಾ ದಿನಗಳು ಸಮೀಪಿಸುತ್ತಿರುವ ನಡುವೆ ಆನೆಗಳಿಗೆ ಅಂಬಾರಿ ತಾಲೀಮು ಮಾಡಿಸಲಾಗುತ್ತದೆ. ಮೊದಲ ದಿನ ಅಭಿಮನ್ಯು ಆನೆಗೆ ತಾಲೀಮು ಯಶಸ್ವಿಯಾಗಿ ಮುಗಿದಿದೆ.
icon

(6 / 7)

ಮುಂದಿನ ದಿನಗಳಲ್ಲಿ ಮೂರ್ನಾಲ್ಕು ಆನೆಗಳಿಗೂ ಮರದ ಅಂಬಾರಿ ಕಟ್ಟುವ ತಾಲೀಮು ನಡೆಯಲಿದೆ. ಇದರಿಂದ ಇತರೆ ಆನೆಗಳು ಮುಂದೆ ಜಂಬೂ ಸವಾರಿಗೆ ಅಣಿಯಾಗಲು ಸಹಕಾರಿಯಾಗಲಿದೆ.
icon

(7 / 7)

ಇತರ ಗ್ಯಾಲರಿಗಳು