ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  New Year2024: ಮೈಸೂರು ಅರಮನೆ ಅಂಗಳದಲ್ಲಿ ಹಸಿರು ಬಾಣ ಬಿರುಸುಗಳ ಚಿತ್ತಾರದೊಂದಿಗೆ ಹೊಸ ವರ್ಷಕ್ಕೆ ಸ್ವಾಗತ: ಹೀಗಿತ್ತು ಸಡಗರ

New Year2024: ಮೈಸೂರು ಅರಮನೆ ಅಂಗಳದಲ್ಲಿ ಹಸಿರು ಬಾಣ ಬಿರುಸುಗಳ ಚಿತ್ತಾರದೊಂದಿಗೆ ಹೊಸ ವರ್ಷಕ್ಕೆ ಸ್ವಾಗತ: ಹೀಗಿತ್ತು ಸಡಗರ

  • ಹೊಸ ವರ್ಷಕ್ಕೆ ಮೈಸೂರು ಅರಮನೆಯಲ್ಲಿ ವಿಭಿನ್ನ ಲೋಕವೇ ಸೃಷ್ಟಿಗೊಂಡಿತ್ತು. ಮಧ್ಯರಾತ್ರಿ 12 ಆಗುತ್ತಲೇ ಮೈಸೂರು ಮಾತ್ರವಲ್ಲದೇ ಹೊರ ಜಿಲ್ಲೆ, ರಾಜ್ಯಗಳಿಂದಲೂ ಸಹಸ್ರಾರು ಪ್ರವಾಸಿಗರನ್ನು ಆಕರ್ಷಿಸಿದ್ದು ಹೊಸ ವರ್ಷ ಸ್ವಾಗತಿಸುವ ಹಸಿರು ಪಟಾಕಿಗಳ ಸಿಡಿಸುವ ಸಡಗರ. ದೀಪಾಲಂಕಾರದ ಹಿನ್ನೆಲೆಯೊಂದಿಗೆ ಬಾನಂಗಳದಲ್ಲಿ ಪಟಾಕಿಗಳು ಹಾರಿ ಸಂಭ್ರಮ ಹೆಚ್ಚಿಸಿದವು.

ಮೈಸೂರಿಗೆ ಹೊಸ ವರ್ಷಕ್ಕೆಂದು ಆಗಮಿಸುವ ಪ್ರವಾಸಿಗರಿಗೆ ಇದು ವಿಶೇಷ ಆಕರ್ಷಣೆ. ಅರಮನೆ ಎದುರು ಸಿಡಿಸುವ ಹಸಿರು ಪಟಾಕಿಗಳ ಚಿತ್ತಾರ ನೋಡುವುದೇ ಚೆಂದ.
icon

(1 / 8)

ಮೈಸೂರಿಗೆ ಹೊಸ ವರ್ಷಕ್ಕೆಂದು ಆಗಮಿಸುವ ಪ್ರವಾಸಿಗರಿಗೆ ಇದು ವಿಶೇಷ ಆಕರ್ಷಣೆ. ಅರಮನೆ ಎದುರು ಸಿಡಿಸುವ ಹಸಿರು ಪಟಾಕಿಗಳ ಚಿತ್ತಾರ ನೋಡುವುದೇ ಚೆಂದ.

ಮೈಸೂರು ಅರಮನೆ ಮಂಡಳಿಯು ಪ್ರತಿ ವರ್ಷ ಹೊಸ ವರ್ಷವನ್ನು ಫಲ ಪುಷ್ಪ ಪ್ರದರ್ಶನ ಹಾಗೂ ಪಟಾಕಿಗಳ ಸಿಡಿಸುವ ಸಡಗರದಿಂದಲೇ ಬರ ಮಾಡಿಕೊಳ್ಳುತ್ತದೆ.
icon

(2 / 8)

ಮೈಸೂರು ಅರಮನೆ ಮಂಡಳಿಯು ಪ್ರತಿ ವರ್ಷ ಹೊಸ ವರ್ಷವನ್ನು ಫಲ ಪುಷ್ಪ ಪ್ರದರ್ಶನ ಹಾಗೂ ಪಟಾಕಿಗಳ ಸಿಡಿಸುವ ಸಡಗರದಿಂದಲೇ ಬರ ಮಾಡಿಕೊಳ್ಳುತ್ತದೆ.

ಆರೇಳು ವರ್ಷಗಳ ಹಿಂದೆ ಆರಂಭಗೊಂಡಿರುವ ಹೊಸ ವರ್ಷವನ್ನು ಅರಮನೆ ಮುಂಭಾಗದಲ್ಲಿ ಬೆಳಕಿನ ವೈಭವದೊಂದಿಗೆ ಸ್ವಾಗತಿಸುವುದಕ್ಕೆ ಪ್ರತಿ ವರ್ಷ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.
icon

(3 / 8)

ಆರೇಳು ವರ್ಷಗಳ ಹಿಂದೆ ಆರಂಭಗೊಂಡಿರುವ ಹೊಸ ವರ್ಷವನ್ನು ಅರಮನೆ ಮುಂಭಾಗದಲ್ಲಿ ಬೆಳಕಿನ ವೈಭವದೊಂದಿಗೆ ಸ್ವಾಗತಿಸುವುದಕ್ಕೆ ಪ್ರತಿ ವರ್ಷ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.

ಮೈಸೂರು ಮಾತ್ರವಲ್ಲದೇ ಹೊರ ಜಿಲ್ಲೆ, ರಾಜ್ಯಗಳಿಂದ ಆಗಮಿಸುವ ಪ್ರವಾಸಿಗರು ರಾತ್ರಿ ಅರಮನೆ ಎದುರು ಜಮಾವಣೆಗೊಂಡು ಬೆಳಕಿನ ಖುಷಿಯಲ್ಲಿ ಮಿಂದೆಳೇತ್ತಾರೆ.
icon

(4 / 8)

ಮೈಸೂರು ಮಾತ್ರವಲ್ಲದೇ ಹೊರ ಜಿಲ್ಲೆ, ರಾಜ್ಯಗಳಿಂದ ಆಗಮಿಸುವ ಪ್ರವಾಸಿಗರು ರಾತ್ರಿ ಅರಮನೆ ಎದುರು ಜಮಾವಣೆಗೊಂಡು ಬೆಳಕಿನ ಖುಷಿಯಲ್ಲಿ ಮಿಂದೆಳೇತ್ತಾರೆ.

ಮೂರ್ನಾಲ್ಕು ವರ್ಷ ಕೋವಿಡ್‌ ಕಾಟದ ನಂತರ ಈಗ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದ್ದು ಮೈಸೂರು ಅರಮನೆಯ ಹೊಸ ವರ್ಷದ ಸ್ವಾಗತ ಸಂಗೀತ ಹಾಗೂ ಬೆಳಕಿನ ಚಿತ್ತಾರ ಮೆರಗು ನೀಡಿತು,
icon

(5 / 8)

ಮೂರ್ನಾಲ್ಕು ವರ್ಷ ಕೋವಿಡ್‌ ಕಾಟದ ನಂತರ ಈಗ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದ್ದು ಮೈಸೂರು ಅರಮನೆಯ ಹೊಸ ವರ್ಷದ ಸ್ವಾಗತ ಸಂಗೀತ ಹಾಗೂ ಬೆಳಕಿನ ಚಿತ್ತಾರ ಮೆರಗು ನೀಡಿತು,

ಈ ಬಾರಿ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡೇ ಮೈಸೂರು ಅರಮನೆ ಎದುರು ಹೊಸ ವರ್ಷ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೆಲವರು ಮಾಸ್ಕ್‌ ಧರಿಸಿಯೇ ಕಾರ್ಯಕ್ರಮಕ್ಕೆ ಬಂದಿದ್ದರು.
icon

(6 / 8)

ಈ ಬಾರಿ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡೇ ಮೈಸೂರು ಅರಮನೆ ಎದುರು ಹೊಸ ವರ್ಷ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೆಲವರು ಮಾಸ್ಕ್‌ ಧರಿಸಿಯೇ ಕಾರ್ಯಕ್ರಮಕ್ಕೆ ಬಂದಿದ್ದರು.

ಮೈಸೂರು ಅರಮನೆಯ ಬೆಳಕಿನ ವೈಭವದ ಹಿನ್ನೆಲೆಯಲ್ಲಿ ಹಸಿರು ಪಟಾಕಿಗಳು ಅರ್ಧಗಂಟೆಗೂ ಹೆಚ್ಚು ಕಾಲ ಕಿವಿಗಡಚಿಕ್ಕುವ ರೀತಿಯಲ್ಲಿ ಶಬ್ದ ಮಾಡುತ್ತಾ ಹೊಸ ವರ್ಷ ಬರ ಮಾಡಿಕೊಂಡ ಸಂಭ್ರಮ ಹೀಗಿತ್ತು.
icon

(7 / 8)

ಮೈಸೂರು ಅರಮನೆಯ ಬೆಳಕಿನ ವೈಭವದ ಹಿನ್ನೆಲೆಯಲ್ಲಿ ಹಸಿರು ಪಟಾಕಿಗಳು ಅರ್ಧಗಂಟೆಗೂ ಹೆಚ್ಚು ಕಾಲ ಕಿವಿಗಡಚಿಕ್ಕುವ ರೀತಿಯಲ್ಲಿ ಶಬ್ದ ಮಾಡುತ್ತಾ ಹೊಸ ವರ್ಷ ಬರ ಮಾಡಿಕೊಂಡ ಸಂಭ್ರಮ ಹೀಗಿತ್ತು.(GS RaviShankar Mysuru)

ಮೈಸೂರು ಅರಮನೆ ಆವರಣ ಹೊಸ ವರ್ಷ ಸ್ವಾಗತಕ್ಕೆ ಬೆಳಕಿನಿಂದ ಅಣಿಗೊಂಡಿತ್ತು. ಇದರೊಟ್ಟಿಗೆ ಪೊಲೀಸ್‌ ಬ್ಯಾಂಡ್‌ನ ಸಂಗೀತ ಕಾರ್ಯಕ್ರಮದ ಜತೆಗೆ ಬೆಳಕಿನ ವೈಭವ ಸಂಭ್ರಮಕ್ಕೆ ಮೆರಗು ತಂದಿತು.
icon

(8 / 8)

ಮೈಸೂರು ಅರಮನೆ ಆವರಣ ಹೊಸ ವರ್ಷ ಸ್ವಾಗತಕ್ಕೆ ಬೆಳಕಿನಿಂದ ಅಣಿಗೊಂಡಿತ್ತು. ಇದರೊಟ್ಟಿಗೆ ಪೊಲೀಸ್‌ ಬ್ಯಾಂಡ್‌ನ ಸಂಗೀತ ಕಾರ್ಯಕ್ರಮದ ಜತೆಗೆ ಬೆಳಕಿನ ವೈಭವ ಸಂಭ್ರಮಕ್ಕೆ ಮೆರಗು ತಂದಿತು.(Anurag Basavaraj Mysuru)

ಇತರ ಗ್ಯಾಲರಿಗಳು