Mysore News: ರಂಗಾಯಣ ಬಹುರೂಪಿಯಲ್ಲಿ ಕಂಡ ಬಸವಣ್ಣನ ಅಭಿವ್ಯಕ್ತಿ, ಹೀಗಿತ್ತು ರಾಷ್ಟ್ರೀಯ ಉತ್ಸವ Photos
- Bahurupi 2024 ಮೈಸೂರಿನ ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಒಂದು ವಿಷಯದ ಮೇಲೆ ನಡೆಯುತ್ತದೆ. ಈ ಬಾರಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದರಿಂದ ಇವ ನಮ್ಮವ ಎನ್ನುವ ಪರಿಕಲ್ಪನೆಯಡಿ ಉತ್ಸವ ನಡೆಯಿತು.
- Bahurupi 2024 ಮೈಸೂರಿನ ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಒಂದು ವಿಷಯದ ಮೇಲೆ ನಡೆಯುತ್ತದೆ. ಈ ಬಾರಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದರಿಂದ ಇವ ನಮ್ಮವ ಎನ್ನುವ ಪರಿಕಲ್ಪನೆಯಡಿ ಉತ್ಸವ ನಡೆಯಿತು.
(1 / 6)
ಮೈಸೂರಿನ ಪ್ರತಿಷ್ಠಿತ ರೆಪರ್ಟರಿ ರಂಗಾಯಣದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಬಹುರೂಪಿ ಉತ್ಸವ ನಡೆಯಿತು. ಈ ಬಾರಿ ಬಸವಣ್ಣನವರ ಕುರಿತಾಗಿಯೇ ಉತ್ಸವ ಇತ್ತು, ಉದ್ಘಾಟನೆ ವೇಳೆ ಹಿರಿಯ ಗಾಯಕ ಪುಟ್ಟಣ್ಣಯ್ಯ ಮತ್ತಿತರರು ನಡೆಸಿಕೊಟ್ಟ ರಂಗಗೀತೆಗಳ ಪುಸ್ತುತಿ ಗಮನ ಸೆಳೆಯಿತು.
(2 / 6)
ರಂಗಾಯಣದ ಬಹುರೂಪಿ ಅಂಗಳದಲ್ಲಿ ನಾದಸ್ವರದ ಖುಷಿ. ಮಹಿಳೆಯರೂ ಕೂಡ ಈ ಬಾರಿ ರಂಗಾಯಣದಲ್ಲಿ ನಾದಸ್ವರ ಹೊಮ್ಮಿಸಿದರು.
(3 / 6)
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ನಾಟಕ, ಗಾಯನ, ಜನಪದ ನೃತ್ಯ, ಪುಸ್ತಕ ಪ್ರದರ್ಶನ, ಆಹಾರ ಮಳಿಗೆ, ನಾಟಕ ಹೀಗೆ ಬಗೆಬಗೆಯ ಕಾರ್ಯಕ್ರಮಗಳಿಗೆ ಹೆಚ್ಚಿನ ರಂಗಾಸಕ್ತರನ್ನು ಸೆಳೆಯಿತು.
(4 / 6)
ರಂಗಾಯಣದ ಬಹುರೂಪಿ ಉತ್ಸವದಲ್ಲಿ ಕರಕುಶಲ ಮೇಳವೂ ಇತ್ತು. ಈ ಬಾರಿ ಲಂಬಾಣಿ ಕಲಾವಿದರು ಹಾಕುವ ಕಸೂತಿ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟವೂ ಇತ್ತು.
(5 / 6)
ರಂಗಾಯಣದ ಬಹುರೂಪಿಯಲ್ಲಿ ಜನಪದೋತ್ಸವಕ್ಕೂ ಬೇಡಿಕೆ. ಕರ್ನಾಟಕ ಮಾತ್ರವಲ್ಲದೇ ನಾಡಿನ ನಾನಾ ಭಾಗಗಳಿಂದ ಆಗಮಿಸಿದ ಜನಪದ ಕಲಾವಿದರು ನೃತ್ಯ ಪ್ರದರ್ಶನ ನೀಡಿದರು. ಇದರಲ್ಲಿ ದೊಳ್ಳು ಕುಣಿತವೂ ಒಂದು.
ಇತರ ಗ್ಯಾಲರಿಗಳು