ಮೈಸೂರಿನಲ್ಲಿ ಕಲಾ ಮಾಂತ್ರಿಕ ಇಳಯರಾಜ ತಂಡದ ಮೆಲೋಡಿ ಮೋಡಿ: 50 ವರ್ಷದ ನಂತರ ದಸರಾಗೆ ಬಂದ ಸಂಗೀತ ದಿಗ್ಗಜನ ನೆನಪುಗಳ ಯಾನ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೈಸೂರಿನಲ್ಲಿ ಕಲಾ ಮಾಂತ್ರಿಕ ಇಳಯರಾಜ ತಂಡದ ಮೆಲೋಡಿ ಮೋಡಿ: 50 ವರ್ಷದ ನಂತರ ದಸರಾಗೆ ಬಂದ ಸಂಗೀತ ದಿಗ್ಗಜನ ನೆನಪುಗಳ ಯಾನ

ಮೈಸೂರಿನಲ್ಲಿ ಕಲಾ ಮಾಂತ್ರಿಕ ಇಳಯರಾಜ ತಂಡದ ಮೆಲೋಡಿ ಮೋಡಿ: 50 ವರ್ಷದ ನಂತರ ದಸರಾಗೆ ಬಂದ ಸಂಗೀತ ದಿಗ್ಗಜನ ನೆನಪುಗಳ ಯಾನ

 ಮೈಸೂರು ದಸರಾದಲ್ಲಿ ಸಂಗೀತ ದಿಗ್ಗಜ ಇಳಯರಾಜ ಕನ್ನಡದ ಹಾಡುಗಳಿಗೆ ಜೀವ ತುಂಬಿದರು. ತಮಿಳು, ಹಿಂದಿ ಹಾಡುಗಳ ಮೂಲಕ ಯುವ ದಸರಾಕ್ಕೆ ಬಂದಿದ್ದ ಮನಸುಗಳಿಗೆ ಸಂತಸ ನೀಡಿದರು. ಇದೊಂದು ರೀತಿ ರೆಟ್ರೋ ರಾತ್ರಿಯ ಖುಷಿ ನೀಡಿತು. ಹೀಗಿದ್ದವು ಆ ಕ್ಷಣಗಳು. 

ಭಾರತದ ಸಂಗೀತ ಮಾಂತ್ರಿಕ ಇಳಯರಾಜ 81 ವರ್ಷ ಇಳಿ ವಯಸ್ಸಿಯಲ್ಲೂ ಮೈಸೂರಿನ ಇಳೆಯನ್ನು ಮಾತ್ರವಲ್ಲದೇ ಸಹಸ್ರಾರು ಮನಸುಗಳನ್ನು ಯುವ ದಸರಾ ಕಾರ್ಯಕ್ರಮದ ಮೂಲಕ ತಂಪುಗೊಳಿಸಿದರು.
icon

(1 / 7)

ಹಿರಿಯ ಹಾಗೂ  ಯುವ ತಂಡದೊಂದಿಗೆ ಮುಖ್ಯೋಪಾಧ್ಯಾಯರಂತೆ ಕುಳಿತು ಆರು ದಶಕದ ಹಿಂದಿನಿಂದ ಈವರೆಗೂ ತಾವು ಸಂಯೋಜನೆ ಮಾಡಿದ ಹಲವಾರು ಗೀತೆಗಳನ್ನುಯ ಇಳಯರಾಜ ಪ್ರಸ್ತುತಪಡಿಸಿದರು.
icon

(2 / 7)

ಯುವ ಗಾಯಕರ ತಂಡ ಕನ್ನಡ, ಹಿಂದಿ. ತಮಿಳು ಹಾಡುಗಳನ್ನು ಒಂದೊಂದಾಗಿ ಪ್ರಸ್ತುಪಡಿಸಿದರೆ ಜನರ ಮನಸಿನಲ್ಲಿ ಖುಷಿಯ ಹಾಯಿ ದೋಣಿ ಹರಿಯುತ್ತಲೇ ಇತ್ತು.
icon

(3 / 7)

1974 ರಲ್ಲಿ ನಾನು ಮೈಸೂರಿನಲ್ಲಿ ಕಾರ್ಯಕ್ರಮವನ್ನು ನೀಡಲು ಬಂದಿದ್ದೆ. ಆ ಸಮಯದಿಂದಲೂ ನಾನು ಮೈಸೂರಿನ ಆತ್ಮೀಯತೆ ಇಷ್ಟವಾಯಿತು. ಆ ದಿನ ಜಿ.ಕೆ ವೆಂಕಟೇಶ್, ಪಿ.ಬಿ ಶ್ರೀನಿವಾಸ್, ಎಸ್ ಜಾನಕಿ ಅವರ ಜೊತೆಯಲ್ಲಿ ಕೀ ಬೋರ್ಡ್ ನುಡಿಸಲು ಬಂದವನು ನಾನು ಎಂದು ಹಳೆಯ ದಿನ ನೆನಪಿಸಿಕೊಂಡರು. ನಿರ್ದೇಶಕ ಎಸ್.ನಾರಾಯಣ್‌ ಜತೆಗಿದ್ದರು.
icon

(4 / 7)

ಇಳಯರಾಜ ಅವರ ಅಭಿಮಾನಿಯೊಬ್ಬರು ತಾವೇ ರಚಿಸಿಕೊಡು ತಂದಿದ್ದ ವಿಶೇಷ ಕಲಾಕೃತಿಯೊಂದನ್ನು ಪ್ರದರ್ಶಿಸಿದರು,
icon

(5 / 7)

ಮೈಸೂರು ಯುವ ದಸರಾದಲ್ಲಿ ಕಾರ್ಯಕ್ರಮ ನೀಡಿದ ಸಂಗೀತ ದಿಗ್ಗಜ ಇಳಯರಾಜ ಅವರನ್ನು ಉಸ್ತುವಾರಿ ಸಚಿವ ಡಾ.ಮಹದೇವಪ್ಪ ಹಾಗೂ ಇತರರು ಆತ್ಮೀಯವಾಗಿ ಅಭಿನಂದಿಸಿದರು,
icon

(6 / 7)

ಇಳಯರಾಜ ಅವರ ಸಂಗೀತ ಕಾರ್ಯಕ್ರಮ ಆಲಿಸಲು ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಕೊನೆಯ ದಿನ ಕುಣಿತ ಕಡಿಮೆ ಇದ್ದು, ಕೇಳಿ ಆಸ್ವಾದಿಸುವವರ ಸಂಖ್ಯೆ ಅಧಿಕವಾಗಿತ್ತು.
icon

(7 / 7)

ಇತರ ಗ್ಯಾಲರಿಗಳು