ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysore News: ಅಭಿನಯ ಹೃದಯ ತಟ್ಟಿತು, ಜತೆಗಿರುವನು ಚಂದಿರ ನಾಟಕಕ್ಕೆ ಮೈಸೂರಲ್ಲಿ ಮೆಚ್ಚುಗೆ ಮಹಾಪೂರ

Mysore News: ಅಭಿನಯ ಹೃದಯ ತಟ್ಟಿತು, ಜತೆಗಿರುವನು ಚಂದಿರ ನಾಟಕಕ್ಕೆ ಮೈಸೂರಲ್ಲಿ ಮೆಚ್ಚುಗೆ ಮಹಾಪೂರ

Drama Time ಮೈಸೂರಿನ ಸಂಕಲ್ಪ ತಂಡವು ಖ್ಯಾತ ಕಲಾವಿದ ಹುಲುಗಪ್ಪ ಕಟ್ಟಿಮನಿ ಅವರ ನಿರ್ದೇಶನದಲ್ಲಿ ಜಯಂತ್‌ ಕಾಯ್ಕಿಣಿ ಅವರ ಜತೆಗಿರುವನು ಚಂದಿರ ಕೃತಿ ಆಧರಿಸಿ ರೂಪಿಸಿದ ನಾಟಕ ಮಂಡ್ಯ ರಮೇಶ್‌ ಅವರ ನಟನ ರಂಗಮಂದಿರದಲ್ಲಿ ಪ್ರದರ್ಶನಗೊಂಡು ಭಾರೀ ಮೆಚ್ಚುಗೆ ಪಡೆಯಿತು. ಈ ಕುರಿತು ಹಲವರು ಅಭಿಪ್ರಾಯ ಕೂಡ ಹಂಚಿಕೊಂಡಿದ್ದಾರೆ. ನಾಟಕದ ನೋಟ ಹೀಗಿತ್ತು.

ಮೈಸೂರಿನ ಸಂಕಲ್ಪ ತಂಡದ ಜತೆಗಿರುವನು ಚಂದಿರ ನಾಟಕದ ಎರಡನೇ ಪ್ರದರ್ಶನ ಮೈಸೂರಿನಲ್ಲಿ ಭರ್ಜರಿಯಾಗಿಯೇ ಪ್ರದರ್ಶನಗೊಂಡಿತು.
icon

(1 / 9)

ಬೇಕರಿ ಕೆಲಸ ಮಾಡುತ್ತಾ ಪತ್ನಿ ಹಾಗೂ ಮೂವರು ಪುತ್ರಿಯರನ್ನು ಸಲಹುತ್ತಿರುವ ಬಡೆಮಿಯಾ ಎಂಬ ವ್ಯಕ್ತಿಯ ಕೌಟುಂಬಿಕ ಚಿತ್ರಣದ ಸುತ್ತ ಹೆಣೆದ ಕಥೆ ಇದು. ಮೂವರು ಪುತ್ರಿ ಯರ ವಿವಾಹ ಕುರಿತಂತೆ ಸಂಭವಿಸುವ ಘಟನೆಗಳ ಜೊತೆಗೆ ಘಟಿಸುವ ಸಾಮಾಜಿಕ ತಲ್ಲಣಗಳನ್ನು ಪರಿಣಾಮಕಾರಿಯಾದ ಸಂಭಾಷಣೆ, ಸನ್ನಿವೇಶಗಳ ಜೋಡಣೆ ,ಹಾಡು ರಂಗಗೀತೆ, ಚಲನಚಿತ್ರ ಗೀತೆಗಳ ತುಣುಕು ಗಳ ಸಮರ್ಪಕ ಬಳಕೆ ಹಾಗೂ ಸಾಹಿತ್ಯಕ ಅಂಶಗಳಿಂದ ನಾಟಕದ ಕಥೆಯು ಸೃಜನಶೀಲ, ಕಲಾತ್ಮಕ ,ಸಂಗೀತಮಯ ಪ್ರದರ್ಶನದ ಹಿನ್ನೆಲೆಯಲ್ಲಿ ಪ್ರೇಕ್ಷಕರ ಗಮನ ಸೆಳೆಯುತ್ತದೆ 
icon

(2 / 9)

ನಾಟಕದಲ್ಲಿ ಹುಲುಗಪ್ಪ ಕಟ್ಟೀಮನಿ, ಮಂಗಳಾ ಎನ್ ಹಾಗೂ ಎಲ್ಲಾ ನಟ ,ನಟಿಯರ ಸಂಭಾಷಣೆ, ಹಾಡುಗಾರಿಕೆ, ನೃತ್ಯ, ನಟನೆ ಮತ್ತು ಹಿನ್ನೆಲೆ ಸಂಗೀತ, ಬೆಳಕು,ರಂಗಸಜ್ಜಿಕೆ,ಸಮರ್ಥವಾಗಿ ,ಸಮರ್ಪಕವಾಗಿ ,ಸಹಜವಾಗಿ ಮೂಡಿ ನೆರೆದಿದ್ದ ಎಲ್ಲಾ ಪ್ರೇಕ್ಷಕರ ಮನಸ್ಸು ಗೆದ್ದುದಕ್ಕೆ ಸಾಕ್ಷಿ, ಒಂದೊಂದು ಅಂಕದ ನಂತರ ಪದೇ ಪದೇ ರಂಗಮಂದಿರದಲ್ಲಿ ಧ್ವನಿಸುತ್ತಿದ್ದ ಚಪ್ಪಾಳೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
icon

(3 / 9)

ಖ್ಯಾತ ಕಲಾವಿದ ಹುಲುಗಪ್ಪ ಕಟ್ಟಿಮನಿ ಅವರು ನಟಿಸಿ,ವಿನ್ಯಾಸ ದ ಜೊತೆಗೆ ನಿರ್ದೇಶಿಸಿದ ಜತೆಗಿರುವನು ಚಂದಿರ ನಾಟಕ ವನ್ನು ಸಕುಟುಂಬ ಸಮೇತವಾಗಿ ನೋಡಿದೆವು. ತುಂಬಾ ಇಷ್ಟವಾಯಿತು ಎಂದು ಪ್ರೇಕ್ಷಕರ ಕೃಷ್ಣಮೂರ್ತಿ ಪ್ರತಿಕ್ರಿಯಿಸಿದ್ದಾರೆ.
icon

(4 / 9)

.ನಾಟಕದ ಉದ್ದಕ್ಕೂ ಬಡೇ ಮಿಯಾ ಆಗಿ ನಟಿಸಿರುವ ಹಾಗೂ ನಾಟಕದ ನಿರ್ದೇಶನ,ವಿನ್ಯಾಸ ಸಹ ಮಾಡಿರುವ ಹುಲಿಗಪ್ಪ ಕಟ್ಟಿಮನಿಯವರು ಹಾಗೂ ತಾಯಿಯ ಪಾತ್ರದಲ್ಲಿ ಎನ್. ಮಂಗಳರವರು ಅಮೋಘವಾದ ಅಭಿನಯದಿಂದ ನೆರೆದಿದ್ದ ಪ್ರೇಕ್ಷಕರ ಗಮನ ಸೆಳೆಯುತ್ತದೆ
icon

(5 / 9)

ಅಮೇರಿಕಾದಲ್ಲಿ ನಾಟಕವಾಗಿ ಮತ್ತು ಚಲನಚಿತ್ರವಾಗಿ ಪ್ರಸಿದ್ಧವಾದ `ಫಿಡ್ಲರ್ ಆನ್ ದ ರೂಫ್' ಅನ್ನು ಆಧರಿಸಿ ರಚಿತವಾದ ಕನ್ನಡ ನಾಟಕ ಇದು. ಮೂಲಕೃತಿಯಲ್ಲಿ ಇದು ಜಾರ್ ದೊರೆಗಳ ಕಾಲದ ರಷ್ಯಾದಲ್ಲಿ, ಉಚ್ಚಾಟಿಸಲ್ಪಟ್ಟು,ಮನೆ, ಮಠ, ಬೇರು ಬಿಳಲು ಎಲ್ಲವನ್ನೂ ಕಿತ್ತುಕೊಂಡು ಗುಳೆ ಹೊರಡಬೇಕಾಗಿ ಬಂದ ಅಲ್ಪಸಂಖ್ಯಾತ ಯಹೂದಿ ಕುಟುಂಬವೊಂದರ ಕಥಾನಕ. ಪ್ರಸ್ತುತ ರೂಪಾಂತರದಲ್ಲಿ ಈ ಕಥಾನಕವು ಭಾರತದ ದೇಶ ವಿಭಜನೆಯ ಸಂದರ್ಭದಲ್ಲಿ ಹಿನ್ನೆಲೆಯಲ್ಲಿ ರಚಿಸ್ಪಟ್ಟಿದೆ. ಕನ್ನಡದ್ದೇ ನಾಟಕವೇನೋ ಎನ್ನುವಂತೆ ಕಾಯ್ಕಿಣಿಯವರು ಈ ನಾಟಕವನ್ನು ಸೊಗಸಾಗಿ ಕನ್ನಡಕ್ಕೆ ರೂಪಾಂತರಿಸಿದ್ದಾರೆ.
icon

(6 / 9)

ಸುಮಾರು ಎರಡೂವರೆ ಗಂಟೆಗಳ ಅವಧಿಯ ನಾಟಕ ಅಭಿನಯ,ಹಾಡು, ನೃತ್ಯ ಜೊತೆಗೆ ಚುರುಕಾದ ,ನವಿರಾದ ಹಾಸ್ಯ, ಒಂದಿಷ್ಟು ತಾತ್ವಿಕ, ಸಾಮಾಜಿಕ ಕಳಕಳಿಯ ಹಾಗು ಮನ ಮುಟ್ಟುವಂತ ಸಂಭಾಷಣೆಯಿಂದ ನೆರೆದಿದ್ದ ಪ್ರೇಕ್ಷಕರ,ರಂಗಾಸಕ್ತರ ಮನಸ್ಸನ್ನು ಗೆದ್ದಿತು . ರಂಗಮಂದಿರವೂ ತುಂಬಿ ಹೋಗಿತ್ತು.
icon

(7 / 9)

ಮೈಸೂರಿನ ನಟನದಲ್ಲ ನಡೆದ ಜತೆಗಿರುವನು ಚಂದಿರ ನಾಟಕ ಪ್ರದರ್ಶನ ವೇಳೆ ಹಳೆಯ ಗೆಳೆಯರ ಸಮಾಗಮ. ರಂಗಾಯಣದಲ್ಲಿದ್ದ ಸರೋಜಾ ಹೆಗಡೆ, ಮಂಗಳಾನಾಗರಾಜರಾವ್‌, ಮಂಡ್ಯ ರಮೇಶ್‌, ಹುಲುಗಪ್ಪಕಟ್ಟಿಮನಿ, ಪ್ರಮೀಳಾ ಬೇಂಗ್ರೆ ಅವರ ಸಂತಸದ ಕ್ಷಣ ಹೀಗಿತ್ತು.
icon

(8 / 9)

ನಟನದಲ್ಲಿ ಜಯಂತ ಕಾಯ್ಕಿಣಿಯವರ 'ಜೊತೆಗಿರುವನು ಚಂದಿರ' ನಾಟಕ ಕಿಕ್ಕಿರಿದ ಸಭಾಂಗಣದಲ್ಲಿ ಅಪಾರ ಯಶಸ್ವಿ ಆಯ್ತು. ಮೂಲ ರಂಗಾಯಣದ ನಾನು, ಕಟ್ಟಿಮನಿ, ಮಂಗಳ, ಪ್ರಮೀಳಾ ಬೆಂಗ್ರೆ, ಸರೋಜಾ ನಮ್ಮ ನಮ್ಮ ಮಕ್ಕಳೊಂದಿಗೆ ಒಟ್ಟಿಗೇ ಸೇರಿದ್ದು ನಮಗೆಲ್ಲಾ ಅಪಾರ ಸಂತೋಷ ಕೊಟ್ಟಿತು ಎಂದು ನಟ, ಕಲಾವಿದ ಹಾಗೂ ನಟನ ರಂಗಶಾಲೆ ಸಂಸ್ಥಾಪಕ ಮಂಡ್ಯ ರಮೇಶ್‌ ಪ್ರತಿಕ್ರಿಯಿಸಿದ್ದಾರೆ.
icon

(9 / 9)

ಇತರ ಗ್ಯಾಲರಿಗಳು