Rajeev Taranath:ರಾಜೀವ್‌ ತಾರಾನಾಥ್‌ ಅನಾರೋಗ್ಯಕ್ಕೆ ವೆಂಕಟೇಶ ಕುಮಾರ್‌ ಸಂಗೀತ ಚಿಕಿತ್ಸೆ, ಹೀಗಿತ್ತು ಆಸ್ಪತ್ರೆಯೊಳಗಿನ ಜುಗುಲ್‌ ಬಂದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rajeev Taranath:ರಾಜೀವ್‌ ತಾರಾನಾಥ್‌ ಅನಾರೋಗ್ಯಕ್ಕೆ ವೆಂಕಟೇಶ ಕುಮಾರ್‌ ಸಂಗೀತ ಚಿಕಿತ್ಸೆ, ಹೀಗಿತ್ತು ಆಸ್ಪತ್ರೆಯೊಳಗಿನ ಜುಗುಲ್‌ ಬಂದಿ

Rajeev Taranath:ರಾಜೀವ್‌ ತಾರಾನಾಥ್‌ ಅನಾರೋಗ್ಯಕ್ಕೆ ವೆಂಕಟೇಶ ಕುಮಾರ್‌ ಸಂಗೀತ ಚಿಕಿತ್ಸೆ, ಹೀಗಿತ್ತು ಆಸ್ಪತ್ರೆಯೊಳಗಿನ ಜುಗುಲ್‌ ಬಂದಿ

  • Music Therapy ಸಂಗೀತಕ್ಕೆ ರೋಗ ನಿಗ್ರಹಿಸುವ ಶಕ್ತಿಯೂ ಇದೆ. ನಾಡಿನ ಖ್ಯಾತ ಸರೋದ್‌ವಾದಕ ತೊಡೆ ಮೂಳೆ ಮುರಿತದಿಂದ 
  • ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಹಿಂದೂಸ್ತಾನಿ ಗಾಯಕ ವೆಂಕಟೇಶಕುಮಾರ್‌ ಅವರನ್ನು ಬರ ಮಾಡಿಕೊಂಡ ರಾಜೀವ್‌ ತಾರಾನಾಥರು ಅಲ್ಲೇ ಸಂಗೀತ ಕೇಳಿ ಪುಳಕಿತಗೊಂಡರು. ಕರ್ನಾಟಕ ಸರ್ಕಾರವೂ ಅವರ ಆಸ್ಪತ್ರೆ ವೆಚ್ಚ ಭರಿಸುವುದಾಗಿ ಹೇಳಿದೆ.

ಕರ್ನಾಟಕ ನಾಡಿನ ಪ್ರಮುಖ ಸರೋದ್‌ ವಾದಕರು, ವಿದ್ವಾಂಸರಾದ ಪಂಡಿತ್‌ ರಾಜೀವ್‌ ತಾರಾನಾಥರಿಗೆ ಈಗ 92 ವರ್ಷ. ತೊಡೆ ಮೂಳೆ ಮುರಿದಿದ್ದರಿಂದ ಮೈಸೂರಿನ ಆಸ್ಪತ್ರೆಗೆ  ಅವರು ದಾಖಲಾಗಿದ್ದಾರೆ.
icon

(1 / 7)

ಇವರು ಕರ್ನಾಟಕ ಪ್ರಸಿದ್ದ ಹಿಂದೂಸ್ಥಾನಿ ಗಾಯಕ ಪಂಡಿತ್‌ ವೆಂಕಟೇಶಕುಮಾರ್‌. ಪಂಡಿತ್‌ ರಾಜೀವ್‌ ತಾರಾನಾಥರಿಗೆ ಹುಷಾರಿಲ್ಲ ಎಂದು ತಿಳಿದು ಮೈಸೂರಿನ ಆಸ್ಪತ್ರೆಗೆ ಬಂದೇ ಬಿಟ್ಟರು.
icon

(2 / 7)

ಪಂಡಿತ್‌ ರಾಜೀವ್‌ ತಾರಾನಾಥರು ಕರ್ನಾಟಕ, ಭಾರತ ಮಾತ್ರವಲ್ಲ. ವಿಶ್ವದ ಹಲವು ಭಾಗಗಳಲ್ಲಿ ತಮ್ಮ ಸರೋದ್‌ ಕಛೇರಿಗಳ ಮೂಲಕ ಮೋಡಿ ಮಾಡಿದವರು. ಅವರ ಆ ಸಿತಾರ್‌ ಲಾಲಿತ್ಯ ಆಲಿಸುವುದೇ ಆನಂದ.
icon

(3 / 7)

ತೊಡೆ ಮೂಳೆ ಮುರಿತದ ನೋವಿನಿಂದ ಬಳಲುತ್ತಿರುವ ಪಂಡಿತ್‌ ರಾಜೀವ್‌ ತಾರಾನಾಥರಿಗೆ ಮೈಸೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಮುಂದುವರಿದಿದೆ.
icon

(4 / 7)

ರಾಜೀವ್ ತಾರಾನಾಥ್ ಸಾರ್ ಶಸ್ತ್ರ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಕೆಲದಿನಗಳ ಹಿಂದೆ ತೊಡೆಯ ಮೂಳೆ ಮುರಿದು ಶಸ್ತ್ರ ಕ್ರಿಯೆ ಅನಿವಾರ್ಯವಾಗಿತ್ತು. ವಯಸ್ಸಿನಿಂದಾಗಿ ಚೇತರಿಕೆಯ ಪ್ರಕ್ರಿಯೆ ನಿಧಾನವಾಗುತ್ತಿದೆ. ಸುಮಾರು ೨೦ ದಿನ ಆಸ್ಪತ್ರೆಯಲ್ಲಿ ಮಲಗುವುದು ಯಾರಿಗೆ ಆದರೂ ಕಷ್ಟವೆ. ಅಲ್ಲೇ ಹಾಡಿಕೊಳ್ಳುತ್ತಾರೆ, ಪಾಠವನ್ನು ಮಾಡಿದ್ದಾರೆ. ಪಂಡಿತ್ ವೆಂಕಟೇಶ ಕುಮಾರ್ ಅಂತಹ ಕಲಾವಿದರು ಜೊತೆಗೆ ಕೂತು ಹಾಡಿ ಹಗುರಗೊಳಿಸಿದ್ದಾರೆ ಎಂದು ಮೈಸೂರಿನ ಟಿ.ಎಸ್.ವೇಣುಗೋಪಾಲ್‌ ಆ ಕ್ಷಣವನ್ನು ವಿವರಿಸಿದ್ದಾರೆ.
icon

(5 / 7)

ಒಂದು ಸಂತಸದ ವಿಷಯ ಅಂದರೆ ರಾಜೀವ್ ತಾರಾನಾಥರ ಆಸ್ಪತ್ರೆಯ ವೆಚ್ಚವನ್ನು ಸರ್ಕಾರ ಭರಿಸಲು ಒಪ್ಪಿಕೊಂಡಿದೆ. ಇದು ಕೆಲವು ದಿವಸಗಳಿಂದ ಆತಂಕದ ವಿಷಯವಾಗಿತ್ತು.  ಮೈಸೂರಿನ ಉಸ್ತುವಾರಿ ಸಚಿವರು ಎಚ್ ಸಿ ಮಹದೇವಪ್ಪನವರು ಮೊನ್ನೆ ಆಸ್ಪತ್ರೆಗೆ ಬೇಟಿ ನೀಡಿ ಇಪ್ಪತ್ತು ನಿಮಿಷಕ್ಕೂ ಹೆಚ್ಚು ಹೊತ್ತು ರಾಜೀವ ತಾರನಾಥರೊಂದಿಗೆ ಮಾತನಾಡಿದರು.
icon

(6 / 7)

ಇದಕ್ಕೆ ಹಲವರು ಶ್ರಮ ಪಟ್ಟಿದ್ದಾರೆ. ಯುವ ನಾಯಕಿ, ಕಲಾವಿದೆ ಶ್ವೇತಾ ಮಡಪ್ಪಾಡಿಯವರು ತುಂಬಾ ಆಸಕ್ತಿ ವಹಿಸಿದರು.ಕೊನೆಗೆ ನಿನ್ನೆ ಸರ್ಕಾರ ಆಸ್ಪತ್ರೆ ವೆಚ್ಚವನ್ನು ಭರಿಸುವುದಾಗಿ ನಿರ್ಧಾರವನ್ನು ಪ್ರಕಟಿಸಿದೆ. ಆದರೆ ಆಸ್ಪತ್ರೆ ವೆಚ್ಚ ಅಷ್ಟೊಂದು ದುಬಾರಿಯಾಗುತ್ತಿರುವುದು ನಿಜಕ್ಕೂ ಹೆದರಿಕೆಯ ವಿಷಯ. ಶಿಕ್ಷಣ ಹಾಗೂ ಆರೋಗ್ಯ ಖಾಸಗಿ ವಲಯಕ್ಕೆ ಹೋದಷ್ಟು ಜನ ಅದರಿಂದ ವಂಚಿತರಾಗುತ್ತಾ ಹೋಗುತ್ತಾರೆ. ಮೂಲಭೂತ ಸೌಕರ್ಯವೂ ಜನರಿಗೆ ಸಿಗದಂತಾಗುತ್ತದೆ. ಸರ್ಕಾರ ಈ ಕ್ಷೇತ್ರಗಳಲ್ಲಿ ಗುಣಮಟ್ಟ ಸುಧಾರಿಸುವುದಕ್ಕೆ ಗಮನಕೊಡಬೇಕು ಎನ್ನುವುದು ಸಂಗೀತ ಪ್ರಿಯರ ಆಗ್ರಹ.
icon

(7 / 7)

ಇತರ ಗ್ಯಾಲರಿಗಳು