ಮೈಸೂರಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ತಂದ ಅವಾಂತರ; ಧರೆಗುರುಳಿದ ಮರಗಳು, ಕಾರುಗಳಿಗೆ ಹಾನಿ; ಫೋಟೊಸ್
- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅನಿರೀಕ್ಷಿತವಾಗಿ ಸುರಿದ ಬಿರುಗಾಳಿ ಸಹಿತ ಮಳೆ ಭಾರಿ ಅವಾಂತರವನ್ನೇ ಸೃಷ್ಟಿಸಿದೆ. ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದರೆ, ಇನ್ನೂ ಕೆಲವೆಡೆ ಮರಗಳು ಬಿದ್ದು ವಾಹನಗಳಿಗೆ ಹಾನಿಯಾಗಿದೆ.
- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅನಿರೀಕ್ಷಿತವಾಗಿ ಸುರಿದ ಬಿರುಗಾಳಿ ಸಹಿತ ಮಳೆ ಭಾರಿ ಅವಾಂತರವನ್ನೇ ಸೃಷ್ಟಿಸಿದೆ. ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದರೆ, ಇನ್ನೂ ಕೆಲವೆಡೆ ಮರಗಳು ಬಿದ್ದು ವಾಹನಗಳಿಗೆ ಹಾನಿಯಾಗಿದೆ.
(1 / 6)
ಕಳೆದ ಹಲವು ದಿನಗಳಿಂದ ರಣಬಿಸಿಲಿನಿಂದ ಬಸವಳಿದಿದ್ದ ಮೈಸೂರಿನ ಜನರಿಗೆ ಇವತ್ತು (ಮೇ 3, ಶುಕ್ರವಾರ) ಮಳೆರಾಯ ತಂಪೆರೆದಿದ್ದಾನೆ.
(2 / 6)
ರಭಸದ ಗಾಳಿ ಆಲಿಕಲ್ಲಿನ ಜೊತೆಗೆ ಸುರಿದ ಧಾರಾಕಾರ ಮಳೆ ಜನ ಜೀವನದ ಅಸ್ತವ್ಯಸ್ತಕ್ಕೆ ಕಾರಣವಾಯಿತು. ಏಕಾಏಕಿ ಮಳೆ ಆರಂಭವಾಗಿದ್ದರಿಂದ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು.
(3 / 6)
ಬೀದಿ ಬದಿ ವ್ಯಾಪಾರಿಗಳು, ಕಚೇರಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದವರು ಮಳೆಗೆ ಸಿಲುಕಿ ಪರದಾಡಿದರು. ಕೆಲವರು ಮಳೆಯಲ್ಲೇ ಮನೆಗಳತ್ತ ತೆರಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
(4 / 6)
ಬಿರುಗಾಳಿಯ ರಭಸಕ್ಕೆ ಮರದ ರಂಬೆ ಕೊಂಬೆಗಳು ಧರೆಗುರುಳಿದವು. ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ಕಾರುಗಳ ಮೇಲೆ ಮರದ ರೆಂಬೆಗಳು ಬಿದ್ದವು. ಹಲವು ಕಾರುಗಳಿಗೆ ಹಾನಿಯಾಗಿರುವ ವರದಿಯಾಗಿದೆ.
(5 / 6)
ರಣ ಬಿಸಿಲಿಗೆ ಜನರು ತತ್ತರಿಸಿದ್ದರು. ಆದರೆ ದಿಢೀರ್ ಸುರಿದ ಮಳೆಗೆ ಭೂಮಿ ತಂಪಾಯಿತು. ತಾಪಮಾನವೂ ಕಡಿಮೆಯಾಗಿದೆ. ರಸ್ತೆಗಳಲ್ಲಿ ಹರಿದ ನೀರು ಧಾರಾಕಾರ ಮಳೆಗೆ ಸಾಕ್ಷಿಯಾಯಿತು.
ಇತರ ಗ್ಯಾಲರಿಗಳು