Suttur Jatre2024: ಹತ್ತೂರಿಗೂ ಮಾದರಿ ಸುತ್ತೂರು ಜಾತ್ರೆ, ಫೆ 6ರಿಂದ ಉತ್ಸವ ಆರಂಭ, ಈ ಬಾರಿ ಏನೇನಿದೆ ವಿಶೇಷ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Suttur Jatre2024: ಹತ್ತೂರಿಗೂ ಮಾದರಿ ಸುತ್ತೂರು ಜಾತ್ರೆ, ಫೆ 6ರಿಂದ ಉತ್ಸವ ಆರಂಭ, ಈ ಬಾರಿ ಏನೇನಿದೆ ವಿಶೇಷ

Suttur Jatre2024: ಹತ್ತೂರಿಗೂ ಮಾದರಿ ಸುತ್ತೂರು ಜಾತ್ರೆ, ಫೆ 6ರಿಂದ ಉತ್ಸವ ಆರಂಭ, ಈ ಬಾರಿ ಏನೇನಿದೆ ವಿಶೇಷ

  • ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸುತ್ತೂರು ಕ್ಷೇತ್ರ ಧಾರ್ಮಿಕ ಹಾಗೂ ಶೈಕ್ಷಣಿಕ ಚಟುವಟಿಕೆಗೆ ಹೆಸರುವಾಸಿ. ಸುತ್ತೂರಿನ ಈ ಸಾಲಿನ ಜಾತ್ರೆ ಫೆಬ್ರವರಿ 6ರಿಂದ ಆರು ದಿನ ಕಾಲ ನಡೆಯಲಿದೆ. ಇದಕ್ಕಾಗಿ ಸುತ್ತೂರು ಅಣಿಯಾಗಿದೆ. ಜಾತ್ರೆಯಲ್ಲಿ ಕೃಷಿ, ಕ್ರೀಡೆ,ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ನಿತ್ಯ ದಾಸೋಹವೂ ಇಲ್ಲಿನ ವಿಶೇಷ. ಈ ಬಾರಿ ವಿಶೇಷಗಳ ಚಿತ್ರಣ ಇಲ್ಲಿದೆ.

ಇದು ಸುತ್ತೂರು. ಮೈಸೂರು ನಗರದಿಂದ 28 ಕಿ.ಮಿ ದೂರದಲ್ಲಿರುವ ಕಪಿಲಾ ತೀರದ ಈ ಪುಟ್ಟ ಗ್ರಾಮದಲ್ಲಿ ಜಾತ್ರೆ ಮೇಳೈಸಲಿದೆ. ಈ ಬಾರಿಯ ಜಾತ್ರೆಗೆ ಸಿದ್ದತೆ ಜೋರಾಗಿದೆ. 
icon

(1 / 10)

ಸುತ್ತೂರು ಜಾತ್ರೆ ವೈವಿಧ್ಯಗಳ ಸಂಗಮ. ಈ ಬಾರಿ ಜಾತ್ರೆಯಲ್ಲಿ  ಬರಗಾಲದಲ್ಲಿ ಕಡಿಮೆ ನೀರು ಬಳಸಿ ಲಾಭದಾಯಕ ಕೃಷಿ ಮಾಡುವ ಬಗೆ’ ತಿಳಿಸುವ ಪ್ರಾತ್ಯಕ್ಷಿಕೆ ಒಳಗೊಂಡ ಕೃಷಿ ಮೇ, ಕೃಷಿ ಪರಿಕರಗಳ ವಸ್ತುಪ್ರದರ್ಶನ, ಆರೋಗ್ಯ ತಪಾಸಣೆ ಶಿಬಿರ, ಸಾಂಸ್ಕೃತಿಕ ಮೇಳ, ಸಾಮೂಹಿಕ ವಿವಾಹ, ರಾಜ್ಯಮಟ್ಟದ ಭಜನಾ ಮೇಳ, ದೇಸಿ ಆಟಗಳು, ಸೋಬಾನೆ ಪದ, ರಂಗೋಲಿ ಸ್ಪರ್ಧೆ, ಧಾರ್ಮಿಕ ಸಭೆ, ಚಿತ್ರಸಂತೆ, ಚಿತ್ರಕಲೆ ಹಾಗೂ ಗಾಳಿಪಟ ಸ್ಪರ್ಧೆ, ಕುಸ್ತಿ ಪಂದ್ಯಾವಳಿ, ತೆಪ್ಪೋತ್ಸವ, ಕಪಿಲಾರತಿ, ಲಕ್ಷದೀಪೋತ್ಸವ ಚಟುವಟಿಗಳು ಆರು ದಿನ ಆಕರ್ಷಿಸಲಿವೆ. 
icon

(2 / 10)

ಸುತ್ತೂರು ಜಾತ್ರೆ ಅಂಗವಾಗಿ  ಫೆ.9ರಂದು ಕುಸ್ತಿ ಪಂದ್ಯಾವಳಿ ನಡೆಯಲಿದ್ದು, ವಿಜೇತರಿಗೆ ‘ಸುತ್ತೂರು ಕುಮಾರ’ ಹಾಗೂ ‘ಸುತ್ತೂರು ಕೇಸರಿ’ ಪ್ರಶಸ್ತಿ ನೀಡಲಾಗುವುದು. ಕುಸ್ತಿ ಪೋಸ್ಟರ್‌ ಅನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಎಸ್ಪಿ ಸೀಮಾ ಲಾಟ್ಕರ್‌ ಬಿಡುಗಡೆಗೊಳಿಸಿದರು.
icon

(3 / 10)

ಸುತ್ತೂರು ಜಾತ್ರೆಗೆ ಬರುವ ಪ್ರತಿಯೊಬ್ಬರಿಗೂ ದಾಸೋಹ ಇದ್ದೇ ಇರುತ್ತದೆ. ಈ ಬಾರಿಯೂ ಅಂದಾಜು 25 ಲಕ್ಷ ಮಂದಿಗೆ ದಾಸೋಹಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 
icon

(4 / 10)

ಮೈಸೂರ ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಫೆ.6ರಿಂದ 11ರವರೆಗೆ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಆಯೋಜಿಸಲಾಗಿದ್ದು, ಕಪಿಲಾ ನದಿ ತೀರದ ಕ್ಷೇತ್ರದಲ್ಲಿ ಸಡಗರ ಮೇಳೈಸಲಿದೆ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ವೈವಿಧ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ತಯಾರಿ ಭರದಿಂದ ಸಾಗಿದ್ದು, ವಸ್ತುಪ್ರದರ್ಶನಕ್ಕೂ ವೇದಿಕೆ ಸಿದ್ದವಾಗುತ್ತಿದೆ. 
icon

(5 / 10)

ಸುತ್ತೂರಿನ ಕೃಷಿ ಬ್ರಹ್ಮಾಂಡ ಹಾಗೂ ವಸ್ತು ಪ್ರದರ್ಶನದಲ್ಲಿ ಬಗೆಬಗೆಯ ಅಲಂಕಾರದ  ಕಲಾಕೃತಿಗಳೂ ಗಮನ ಸೆಳೆಯುತ್ತವೆ. ಇದರಲ್ಲಿ ಬಸವಣ್ಣನ ಮೂರ್ತಿಯೂ ಒಂದು.
icon

(6 / 10)

ಸುತ್ತೂರು ಜಾತ್ರೆಯ ಕೃಷಿ ವಸ್ತು ಪ್ರದರ್ಶನಕ್ಕೆ ಬರುವವರನ್ನು ಸ್ವಾಗತಿಸಲು ಅಣಿಯಾಗಿವೆ ಜೋಡೆತ್ತುಗಳ ಕಲಾಕೃತಿ.
icon

(7 / 10)

ಕೃಷಿ ವಿಚಾರದಲ್ಲಿ ಹೊಸ ಪ್ರಯೋಗಗಳು ಏನೇ ಆಗಿದ್ದರೂ ಅದನ್ನು ಸುತ್ತೂರು ಜಾತ್ರೆಯ ವಸ್ತು ಪ್ರದರ್ಶನದಲ್ಲಿ ಕಾಣಬಹುದು. ಈ ಬಾರಿಯೂ ಇಂತಹ ಹಲವು ವೈಶಿಷ್ಟ್ಯಗಳ ಸಂಗಮ ಈ ಬಾರಿ ಕೃಷಿ ವಸ್ತು ಪ್ರದರ್ಶನ.
icon

(8 / 10)

ಸುತ್ತೂರು ಜಾತ್ರೆಗೆ ಬರುವವರಿಗೆ ಬಗೆಬಗೆಯ ಹೂವುಗಳು ಸ್ವಾಗತಿಸುತ್ತವೆ. ಇದಕ್ಕಾಗಿ ತಿಂಗಳಿನಿಂದ ಇಲ್ಲಿನ ಸಿಬ್ಬಂದಿ ಬಣ್ಣಬಣ್ಣದ ಹೂವುಗಳ ವಸ್ತುಪ್ರದರ್ಶನಕ್ಕೆ ಸಿದ್ದತೆ ನಡೆಸುತ್ತಾರೆ.
icon

(9 / 10)

ಸುತ್ತೂರು ಜಾತ್ರೆಯಲ್ಲಿ ಕೃಷ್ಣ ಬ್ರಹ್ಮಾಂಡ ಪ್ರಮುಖ ಆಕರ್ಷಣೆ. ಇಲ್ಲಿ ಕಡಿಮೆ ಪ್ರದೇಶದಲ್ಲಿ ಬಗೆಬಗೆಯ ಹಣ್ಣು, ತರಕಾರಿ. ಬೆಳೆ ಬೆಳಯುವ ಪ್ರಾತ್ಯಕ್ಷಿತೆಗಳನ್ನು ತೋರಿಸಿಕೊಡಲಾಗುತ್ತದೆ.
icon

(10 / 10)

ಇತರ ಗ್ಯಾಲರಿಗಳು