Tiger Near Mysore: ಸಿಎಂ ಸಿದ್ದರಾಮಯ್ಯರ ಸ್ವಗ್ರಾಮದ ಸಮೀಪಕ್ಕೆ ಬಂದ ಹುಲಿರಾಯ, ಅರಣ್ಯ ಇಲಾಖೆ ಅಲರ್ಟ್
- ಮೈಸೂರು ಸುತ್ತಮುತ್ತಲಿನಲ್ಲಿಯೇ ಹುಲಿ ಚಲನವಲನ ಕಂಡು ಬಂದಿದೆ. ಈ ಬಾರಿ ಹುಲಿ ಸಿಎಂ ಸಿದ್ದರಾಮಯ್ಯ ಅವರ ಸ್ವಗ್ರಾಮ ಸಿದ್ದರಾಮನಹುಂಡಿ ಸಮೀಪದ ವರಕೋಡು ಗ್ರಾಮದಲ್ಲಿ ಕಾಣಿಸಿಕೊಂಡಿದ್ದು ಕರ್ನಾಟಕ ಅರಣ್ಯ ಇಲಾಖೆ ಕಾರ್ಯೋನ್ಮುಖವಾಗಿದೆ.
- ಮೈಸೂರು ಸುತ್ತಮುತ್ತಲಿನಲ್ಲಿಯೇ ಹುಲಿ ಚಲನವಲನ ಕಂಡು ಬಂದಿದೆ. ಈ ಬಾರಿ ಹುಲಿ ಸಿಎಂ ಸಿದ್ದರಾಮಯ್ಯ ಅವರ ಸ್ವಗ್ರಾಮ ಸಿದ್ದರಾಮನಹುಂಡಿ ಸಮೀಪದ ವರಕೋಡು ಗ್ರಾಮದಲ್ಲಿ ಕಾಣಿಸಿಕೊಂಡಿದ್ದು ಕರ್ನಾಟಕ ಅರಣ್ಯ ಇಲಾಖೆ ಕಾರ್ಯೋನ್ಮುಖವಾಗಿದೆ.
(1 / 8)
ಮೈಸೂರು ತಾಲ್ಲೂಕಿನ ವರಕೋಡು ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆ ಸಮೀಪದಲ್ಲಿಯೇ ಹುಲಿಯೊಂದು ಸಂಚರಿಸುತ್ತಿರುವುದು ಕಂಡು ಬಂದಿದೆ. ಸಿದ್ದೇಶ್ ಎಂಬುವವರು ವಿಡಿಯೋ ಮಾಡಿ ಅರಣ್ಯ ಇಲಾಖೆಗೆ ನೀಡಿದ್ದಾರೆ.
(2 / 8)
ಸಿಬ್ಬಂದಿಗಳು ವರಕೋಡು ಸುತ್ತಮುತ್ತ ಬೀಡು ಬಿಟ್ಟಿದ್ದು ಹುಲಿಯ ಚಲನವಲನವನ್ನು ಭಾನುವಾರವೂ ವೀಕ್ಷಿಸುತ್ತಿದೆ. ಥರ್ಮಲ್ ದ್ರೋಣ್ ಕೂಡ ಬಳಸುತ್ತಿದೆ.
(3 / 8)
ಹುಲಿ ಕಂಡು ಬಂದಿರುವುದು ಸಿಎಂ ಸಿದ್ದರಾಮಯ್ಯ ಅವರ ಸ್ವಗ್ರಾಮ ಸಿದ್ದರಾಮನಹುಂಡಿ ಸಮೀಪದಲ್ಲಿಯೇ. ಇಲ್ಲಿಂದ ಕೆಲವೇ ಕಿ.ಮಿ. ದೂರದಲ್ಲಿ ಹುಲಿ ಕಂಡಿದ್ದು ಅರಣ್ಯ ಇಲಾಖೆ ತಂಡ ಕಾರ್ಯೋನ್ಮುಖವಾಗಿದೆ.
(4 / 8)
ಮೈಸೂರು ಸುತ್ತಮುತ್ತ ಹುಲಿ ಸಂಚಾರ ಕೆಲವು ದಿನಗಳಿಂದ ಇದೆ. ಜಯಪುರ ಸಮೀಪದ ಚಿಕ್ಕನಹಳ್ಳಿ ಮೀಸಲು ಅರಣ್ಯದಿಂದ ಹುಲಿ ಮೈಸೂರು-ಶ್ರೀರಂಗಪಟ್ಟಣ-ಬನ್ನೂರು ಭಾಗದಲ್ಲಿ ಸಂಚರಿಸುತ್ತಿದೆ.
(5 / 8)
ಹುಲಿ ಕಂಡಿರುವ ವರಕೋಡು ಗ್ರಾಮದಿಂದ ಐದಾರು ಕಿ.ಮಿ ದೂರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸ್ವಗ್ರಾಮಸಿದ್ದರಾಮನಹುಂಡಿ ಇದೆ. ಈ ಭಾಗದಲ್ಲಿ ಕುರುಚಲು ಅರಣ್ಯ ಇರುವುದರಿಂದ ಚಿರತೆಗಳಿದ್ದು, ಮೊದಲ ಬಾರಿಗೆ ಹುಲಿ ಕಂಡು ಬಂದಿದೆ.
(7 / 8)
ಕಳೆದ ವರ್ಷ ನಂಜನಗೂಡು ಭಾಗದಲ್ಲಿ ಇದೇ ರೀತಿ ಹುಲಿ ಕಾಣಿಸಿಕೊಂಡಾಗ ಹಿರಿಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.
ಇತರ ಗ್ಯಾಲರಿಗಳು