ಹೊಸ ವರ್ಷಕ್ಕೆ ಭಕ್ತರಿಗೆ ಹಂಚಲು ಮೈಸೂರು ಯೋಗಾನರಸಿಂಹ ದೇವಸ್ಥಾನದಲ್ಲಿ ತಿರುಪತಿ ಮಾದರಿ ಲಾಡು ಪ್ರಸಾದ ತಯಾರಿ
ಹೊಸ ವರ್ಷವನ್ನು ಸ್ವಾಗತಿಸಲು ಎಲ್ಲೆಡೆ ಸಿದ್ದತೆ ನಡೆಯುತ್ತಿದೆ. ದೇವಸ್ಥಾನಗಳಲ್ಲಿ ಕೂಡಾ ವಿಶೇಷ ಪೂಜೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಭಕ್ತರಿಗೆ ಸಿಹಿ ಹಂಚಲು ಎಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ.
(1 / 11)
ಮೈಸೂರಿನ ವಿಜಯನಗರದಲ್ಲಿರುವ ಯೋಗಾ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಕೂಡಾ ಲಾಡು ತಯಾರಿಸಲಾಗುತ್ತಿದೆ.
(2 / 11)
ಮೈಸೂರಿನ ವಿಜಯನಗರದಲ್ಲಿರುವ ಯೋಗಾನರಸಿಂಹಸ್ವಾಮಿ ದೇವಸ್ಥಾನ. ಮೈಸೂರು-ಹುಣಸೂರು ರಸ್ತೆಯ ಐಶ್ವರ್ಯ ಪೆಟ್ರೋಲ್ ಬಂಕ್ ಬಳಿ ಈ ದೇವಸ್ಥಾನವಿದೆ.
(3 / 11)
ಜನವರಿ 1 ರಂದು ಬೆಳಗ್ಗೆ 4 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಲಾಡು ಹಂಚಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿ ಮಾಹಿತಿ ನೀಡಿದೆ.
(4 / 11)
ದೇವಸ್ಥಾನದ ಆವರಣದಲ್ಲೇ ಲಾಡುಗಳ ತಯಾರಿ ಕಾರ್ಯ ಆರಂಭವಾಗಿದೆ. 100 ನುರಿತ ಬಾಣಸಿಗರು ಲಾಡು ತಯಾರಿಕೆಯಲ್ಲಿ ಪಾಲ್ಗೊಂಡಿದ್ದಾರೆ.
(5 / 11)
ಲಾಡುಗಳನ್ನು ತಯಾರಿಸಲು 200 ಕ್ವಿಂಟಾಲ್ ಸಕ್ಕರೆ, 100 ಕ್ವಿಂಟಾಲ್ ಕಡ್ಲೆ ಹಿಟ್ಟು, 10 ಸಾವಿರ ಲೀಟರ್ ಖಾದ್ಯ ತೈಲ, 250 ಕೆ ಜಿ ಬಾದಾಮಿ, 50 ಕೆಜಿ ಪಿಸ್ತಾ, 50 ಕೆಜಿ ಏಲಕ್ಕಿ, 500 ಕೆಜಿ ಒಣದ್ರಾಕ್ಷಿ, 500 ಕೆಜಿ ಗೋಡಂಬಿ, 50 ಕೆಜಿ ಪಚ್ಚ ಕರ್ಪೂರ, 200 ಕೆಜಿ ಲವಂಗ, 50 ಕೆಜಿ ಜಾಕಾಯಿ ಮತ್ತು ಜಾಪತ್ರೆ, 1 ಸಾವಿರ ಕೆಜಿ ಡೈಮಂಡ್ ಸಕ್ಕರೆ, 2 ಸಾವಿರ ಕೆಜಿ ಬೂರಾ ಸಕ್ಕರೆ ಸೇರಿದಂತೆ ಮೊದಲಾದ ಪದಾರ್ಥಗಳನ್ನು ಬಳಸಲಾಗಿದೆ.
(7 / 11)
ದಿವಂಗತ ಡಾ ರಾಜಕುಮಾರ್ ಅವರ ಪ್ರೇರಣೆಯಿಂದ 1994ರಲ್ಲಿ ಒಂದು ಸಾವಿರ ಲಾಡುಗಳ ವಿತರಣೆಯೊಂದಿಗೆ ಈ ಸೇವೆ ಆರಂಭವಾಗಿತ್ತು. ಅಂದಿನಿಂದ ಪ್ರತಿ ವರ್ಷವೂ ಲಾಡುಗಳ ವಿತರಣೆ ಸಂಖ್ಯೆ ಹೆಚ್ಚುತ್ತಿದೆ.
(8 / 11)
ಈ ಬಾರಿ 2 ಲಕ್ಷ ಲಾಡುಗಳನ್ನು ಭಕ್ತರಿಗೆ ಹಂಚಲಾಗುವುದು ಎಂದು ಲಾಡುಗಳನ್ನು ವಿತರಿಸಲಾಗುವುದು ಎಂದು ದೇಗುಲದ ಆಡಳಿತಾಧಿಕಾರಿ ಎನ್ ಶ್ರೀನಿವಾಸನ್ ಮಾಹಿತಿ ನೀಡಿದ್ದಾರೆ.
(9 / 11)
ವರ್ಷ ವರ್ಷವೂ ಈ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಲಾಡು ಪ್ರಸಾದ ಪಡೆಯಲು ಭಕ್ತರು ಈ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸುವ ನಿರೀಕ್ಷೆ ಇದೆ.
ಇತರ ಗ್ಯಾಲರಿಗಳು