Bahuroopi 2025: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಜನವರಿ 14 ರಿಂದ 19ರ ತನಕ; ನಿತ್ಯವೂ ಸಂಜೆ ರಂಗ ರಸದೌತಣ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bahuroopi 2025: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಜನವರಿ 14 ರಿಂದ 19ರ ತನಕ; ನಿತ್ಯವೂ ಸಂಜೆ ರಂಗ ರಸದೌತಣ

Bahuroopi 2025: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಜನವರಿ 14 ರಿಂದ 19ರ ತನಕ; ನಿತ್ಯವೂ ಸಂಜೆ ರಂಗ ರಸದೌತಣ

Mysuru Bahuroopi 2025: ಮೈಸೂರಿನಲ್ಲಿ ಈ ಬಾರಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಜನವರಿ 14 ರಿಂದ 19ರ ತನಕ ನಡೆಯಲಿದೆ. ಬಿಡುಗಡೆ: ಸಾಮಾಜಿಕ ನ್ಯಾಯ - ಚಳವಳಿಗಳು ಮತ್ತು ರಂಗಭೂಮಿ ಎಂಬ ಆಶಯ ಶೀರ್ಷಿಕೆಯೊಂದಿಗೆ ಬಹುರೂಪಿ ನಾಟಕೋತ್ಸವ ಆಯೋಜನೆಯಾಗುತ್ತಿದೆ. ನಾಟಕೋತ್ಸವದ ವಿವರ ಹೀಗಿದೆ

ಬಹುರೂಪಿ 2025- ರಾಷ್ಟ್ರೀಯ ನಾಟಕೋತ್ಸವವನ್ನು ಚಲನಚಿತ್ರ ನಟ, ರಂಗಕರ್ಮಿ ಅತುಲ್ ಕುಲಕರ್ಣಿ ಜ.14ರಂದು ಸಂಜೆ 5.30ಕ್ಕೆ ವನರಂಗದಲ್ಲಿ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪಾಲ್ಗೊಳ್ಳುವರು' ಎಂದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
icon

(1 / 8)

ಬಹುರೂಪಿ ನಾಟಕೋತ್ಸವದಲ್ಲಿ 6 ರಾಜ್ಯಗಳ 7 ಬಹುಭಾಷೆ ನಾಟಕ, 13 ಕನ್ನಡ, 2 ಇಂಗ್ಲಿಷ್ ಭಾಷೆಯದ್ದು ಸೇರಿದಂತೆ ಒಟ್ಟು 22 ನಾಟಕಗಳು ಭೂಮಿಗೀತ, ವನರಂಗ, ಕಿರುರಂಗಮಂದಿರ ಹಾಗೂ ಕಲಾಮಂದಿರದಲ್ಲಿ ಪ್ರದರ್ಶನಗೊಳ್ಳಲಿವೆ. 
icon

(2 / 8)

ಇದೇ ಮೊದಲ ಬಾರಿ 'ಮಕ್ಕಳ ಬಹುರೂಪಿ' ಆಯೋಜಿಸಲಾಗಿದ್ದು, ಕಲಾಮಂದಿರದಲ್ಲಿ ಜನವರಿ 15ರಂದು ಸಂಜೆ 6 ಗಂಟೆಗೆ ಚಲನಚಿತ್ರ ನಟ ಪ್ರಕಾಶ್ ರಾಜ್ ಉದ್ಘಾಟಿಸಲಿದ್ದಾರೆ ಎಂದು ಸತೀಶ್‌ ತಿಳಿಸಿದ್ದಾರೆ.
icon

(3 / 8)

ಜನವರಿ 13ರಿಂದ ಕಿಂದರಿಜೋಗಿ ಅವರಣದಲ್ಲಿ ಜಾನಪದೋತ್ಸವ, 14ರಿಂದ ಶ್ರೀರಂಗದಲ್ಲಿ ಚಲನಚಿತ್ರೋತ್ಸವ, 18ರಿಂದ ರಾಷ್ಟ್ರೀಯ ವಿಚಾರ ಸಂಕಿರಣ ಆರಂಭವಾಗಲಿದೆ. ನಾಟಕದ ಟಿಕೆಟ್ ಬೆಲೆ 100 ರೂಪಾಯಿ ಆಗಿದ್ದು, 'ಮಕ್ಕಳ ಬಹುರೂಪಿ'ಯಲ್ಲಿ ಮಕ್ಕಳಿಗೆ ಟಿಕೆಟ್ ‍50 ರೂಪಾಯಿ ಇರಲಿದೆ ಎಂದು  ಸತೀಶ್ ಹೇಳಿದರು
icon

(4 / 8)

ಈ ಬಾರಿಯ ಬಹುರೂಪಿ ನಾಟಕೋತ್ಸವದಲ್ಲಿ ತೆಲಂಗಾಣ, ಮುಂಬೈ, ಪಾಂಡಿಚೆರಿ, ಮಧ್ಯಪ್ರದೇಶ, ಕೇರಳ, ಅಸ್ಸಾಂ ರಾಜ್ಯಗಳ 7 ನಾಟಕಗಳು ಹಾಗೂ ಕನ್ನಡ ಭಾಷೆಯ 13 ನಾಟಕಗಳು ಮತ್ತು ಇಂಗ್ಲೀಷ್ ಭಾಷೆಯ 2 ನಾಟಕಗಳು ಸೇರಿದಂತೆ ಒಟ್ಟು 22 ನಾಟಕಗಳು, ಒಂದು ಯಕ್ಷಗಾನ ಪ್ರಸಂಗವು ಭೂಮಿಗೀತ, ವನರಂಗ, ಕಲಾಮಂದಿರ ಮತ್ತು ಕಿರುರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿವೆ.
icon

(5 / 8)

ವಿವಿಧ ಜಿಲ್ಲೆಗಳ ಜಾನಪದ ಕಲಾತಂಡಗಳು ಕಿಂದರಜೋಗಿ ವೇದಿಕೆಯಲ್ಲಿ ಪ್ರದರ್ಶನ ಕಾಣಲಿವೆ. ಪ್ರತಿವರ್ಷದಂತೆ ಈ ಬಾರಿಯೂ ಜನವರಿ 18 ಹಾಗು 19ರಂದು ಎರಡು ದಿನಗಳ ಕಾಲ ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ನಾಡಿನ ಹೆಸರಾಂತ ವಿದ್ವಾಂಸರು ವಿಚಾರ ಸಂಕಿರಣದಲ್ಲಿ ವಿಚಾರ ಮಂಡನೆ ಮಾಡಲಿದ್ದಾರೆ. 
icon

(6 / 8)

ಶ್ರೀರಂಗ ರಂಗಮಂದಿರದಲ್ಲಿ ರಾಷ್ಟ್ರೀಯ ಚಲನಚಿತ್ರೋತ್ಸವ, ರಂಗಾಯಣದ ಆವರಣದಲ್ಲಿ ಪುಸ್ತಕ ಮೇಳ, ಕರಕುಶಲ ಮೇಳ, ಚಿತ್ರ ಕಲಾ ಪ್ರದರ್ಶನ ಹಾಗು ಲಂಕೇಶ್ ಕಲಾ ಗ್ಯಾಲರಿಯಲ್ಲಿ ಮೈಸೂರು ಶೈಲಿಯ ಪೈಂಟಿಗ್ಸ್, ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ವಾಸ್ತವಿಕ ಚಿತ್ರಕಲಾ ಕೃತಿಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಮೈಸೂರು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಮಾಹಿತಿ ನೀಡಿದರು
icon

(7 / 8)

ಮೈಸೂರು ರಂಗಾಯಣದ ಆವರಣ ಬಹುರೂಪಿ ನಾಟಕೋತ್ಸವಕ್ಕೆ ಸಜ್ಜಾಗುತ್ತಿದೆ.
icon

(8 / 8)

ಇತರ ಗ್ಯಾಲರಿಗಳು