Mysuru Dasara 2022: ನಾಡಹಬ್ಬದ ಪೂರ್ವಭಾವಿ ಸಿದ್ದತೆ ಹೇಗಿದೆ? ಇಲ್ಲಿವೆ ಕೆಲವು ಫೋಟೋಸ್
- Mysuru Dasara 2022: ನಾಡಹಬ್ಬ ಸೆ.26ರಿಂದ ಶುರುವಾಗಲಿದ್ದು, ಪೂರ್ವಭಾವಿ ಕಾರ್ಯಗಳು ಭರದಿಂದ ಸಾಗಿದೆ. ಈವರೆಗೆ ಏನೇನಾಯಿತು? ಇಲ್ಲಿದೆ ಸಚಿತ್ರ ವರದಿ.
- Mysuru Dasara 2022: ನಾಡಹಬ್ಬ ಸೆ.26ರಿಂದ ಶುರುವಾಗಲಿದ್ದು, ಪೂರ್ವಭಾವಿ ಕಾರ್ಯಗಳು ಭರದಿಂದ ಸಾಗಿದೆ. ಈವರೆಗೆ ಏನೇನಾಯಿತು? ಇಲ್ಲಿದೆ ಸಚಿತ್ರ ವರದಿ.
(1 / 6)
ಮೈಸೂರು ದಸರಾ ಎಂದ ಕೂಡಲೇ ಅಲ್ಲಿ ಕುಸ್ತಿ ಪಂದ್ಯ ಇರಬೇಕು. ಇದಕ್ಕೆ ಪೂರ್ವಭಾವಿಯಾಗಿ ಕುಸ್ತಿ ಜೋಡಿ ಕಟ್ಟುವ ಕಾರ್ಯಕ್ರಮ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಮತ್ತು ಇತರರು ಉಪಸ್ಥಿತರಿದ್ದರು.
(2 / 6)
ಅರಮನೆ ಆವರಣದಲ್ಲಿ ತೆರೆಯಲಾಗಿರುವ ತಾತ್ಕಾಲಿಕ ಆರೋಗ್ಯ ತಪಾಸಣೆ ಕೇಂದ್ರ ವೀಕ್ಷಿಸಿದ ಸಚಿವರು ಬಿಪಿ ತಪಾಸಣೆ ಮಾಡಿಸಿಕೊಂಡರು.
(3 / 6)
ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸಿರುವ ಗಜಪಡೆಯ ನಿರ್ವಹಣೆಯ ಜವಬ್ದಾರಿಯನ್ನು ನಿರ್ವಹಿಸುತ್ತಿರುವ ಮಾವುತ ಮತ್ತು ಕಾವಾಡಿಗರು ಹಾಗೂ ಅವರ ಕುಟುಂಬದವರ ಯೋಗಕ್ಷೇಮ ವಿಚಾರಿಸಿದರು.
(4 / 6)
ದಸರಾ ಸಂದರ್ಭದಲ್ಲಿ ಮಾವುತರು, ಕಾವಾಡಿಗರ ಪಾತ್ರ ಮಹತ್ತರವಾದದ್ದು. ಇಲ್ಲೇ ಲಕ್ಷ್ಮಿ ಎಂಬ ಆನೆ ಗಂಡು ಆನೆಗೆ ಜನ್ಮ, ನೀಡಿದೆ. ಇದರ ಪ್ರಯುಕ್ತ ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದು, ಸಚಿವ ಸೋಮಶೇಖರ್ ಅವರೇ ಎಲ್ಲರಿಗೂ ಊಟ ಬಡಿಸಿದರು.
ಇತರ ಗ್ಯಾಲರಿಗಳು