Mysuru Dasara 2023: ಮೈಸೂರು ದಸರಾ 2023ರ ಮೊದಲ ದಿನದ ಕಾರ್ಯಕ್ರಮಗಳ ವೇಳಾಪಟ್ಟಿ, ಎಲ್ಲಿ ಎಷ್ಟು ಗಂಟೆಗೆ ಏನು ಕಾರ್ಯಕ್ರಮ ವಿವರ ಹೀಗಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysuru Dasara 2023: ಮೈಸೂರು ದಸರಾ 2023ರ ಮೊದಲ ದಿನದ ಕಾರ್ಯಕ್ರಮಗಳ ವೇಳಾಪಟ್ಟಿ, ಎಲ್ಲಿ ಎಷ್ಟು ಗಂಟೆಗೆ ಏನು ಕಾರ್ಯಕ್ರಮ ವಿವರ ಹೀಗಿದೆ

Mysuru Dasara 2023: ಮೈಸೂರು ದಸರಾ 2023ರ ಮೊದಲ ದಿನದ ಕಾರ್ಯಕ್ರಮಗಳ ವೇಳಾಪಟ್ಟಿ, ಎಲ್ಲಿ ಎಷ್ಟು ಗಂಟೆಗೆ ಏನು ಕಾರ್ಯಕ್ರಮ ವಿವರ ಹೀಗಿದೆ

ಮೈಸೂರು ದಸರಾ 2023: ವಿಶ್ವ ವಿಖ್ಯಾತ ಮೈಸೂರು ದಸರಾ ಹಬ್ಬ ಇಂದು ಶುರುವಾಗುತ್ತಿದೆ. ಮೈಸೂರು ದಸರಾ 2023ರ ಮೊದಲ ದಿನ (ಅ.15)ದ ಕಾರ್ಯಕ್ರಮಗಳ ವೇಳಾಪಟ್ಟಿ, ಎಲ್ಲಿ ಎಷ್ಟು ಗಂಟೆಗೆ ಏನು ಕಾರ್ಯಕ್ರಮ ಎಂಬಿತ್ಯಾದಿ ವಿವರ ಇಲ್ಲಿದೆ. 

ವಿಶ್ವ ಪ್ರಸಿದ್ದ ಮೈಸೂರು ದಸರಾಕ್ಕೆ ಇಂದು (ಅ.15) ಖ್ಯಾತ ಸಿನಿಮಾ ಸಾಹಿತಿ, ಚಲನಚಿತ್ರ ಸಂಗೀತ ನಿರ್ದೇಶಕ ನಾದಬ್ರಹ್ಮ ಡಾ.ಹಂಸಲೇಖ ಅವರು ಬೆಳಗ್ಗೆ 10.15 ರಿಂದ 10.36 ರೊಳಗಿನ ಶುಭ ವೃಶ್ಚಿಕ ಲಗ್ನದಲ್ಲಿ ಚಾಲನೆ ನೀಡಲಿದ್ದಾರೆ. ನಾಡದೇವಿ ಚಾಮುಂಡೇಶ್ವರಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ ನಾಡಹಬ್ಬ ಶುರುವಾಗಲಿದೆ.
icon

(1 / 5)

ಮೈಸೂರು ಅರಮನೆ ವೇದಿಕೆಗಳಲ್ಲಿ ನಡೆಯುವ ವೈಭವಯುತ ಸಾಂಸ್ಕೃತಿಕ ಕಾರ್ಯಕ್ರಮಗಳ ಪೈಕಿ ಮೊದಲ ದಿನ ಮೊದಲ ಕಾರ್ಯಕ್ರಮವಾಗಿ ಚಿತ್ರನಟಿ ಭಾವನ ರಾಮಣ್ಣ ಮತ್ತು ತಂಡದವರಿಂದ ಶ್ರೀ ಚಾಮುಂಡೇಶ್ವರಿ ಮರ್ದಿನಿ ಸಿಂಹ ವಾಹಿನಿ ನೃತ್ಯ ರೂಪಕ ಪ್ರದರ್ಶನವಾಗಲಿದೆ.
icon

(2 / 5)

ವಿದ್ವಾನ್ ಟಿ.ವಿ.ಗೋಪಾಲಕೃಷ್ಣನ್ ಅವರ ಶಿಷ್ಯ ಅಜಯ್ ವಾರಿಯರ್ ಅವರು ಸಂಗೀತಯಾನ ನಡೆಸಿಕೊಡಲಿದ್ದಾರೆ. ಸಾವಿರಾರು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ಇವರು ಬೆಂಗಳೂರು ಗಣೇಶೋತ್ಸವದಲ್ಲೂ ಗಮನ ಸೆಳೆದಿದ್ದಾರೆ.
icon

(3 / 5)

ಜೋಗಿ ಖ್ಯಾತಿಯ ಸುನೀತಾ ಮುರಳಿ ಮತ್ತು ತಂಡ ಅಜಯ್ ವಾರಿಯರ್ ಅವರ ಜತೆಗೆ ಸಂಗೀತ ಯಾನದಲ್ಲಿ ಜೊತೆಯಾಗಲಿದೆ. 
icon

(4 / 5)

ಜೋಗಿ ಖ್ಯಾತಿಯ ಸುನೀತಾ ಮುರಳಿ ಮತ್ತು ತಂಡ ಅಜಯ್ ವಾರಿಯರ್ ಅವರ ಜತೆಗೆ ಸಂಗೀತ ಯಾನದಲ್ಲಿ ಜೊತೆಯಾಗಲಿದೆ. (Bengaluru Ganesha Utsav)

ಮೈಸೂರು ದಸರಾದ ಮೊದಲ ದಿನವಾದ ಇಂದು (ಅ.15) ಎಷ್ಟು ಗಂಟೆಗೆ, ಯಾವ ವೇದಿಕೆಯಲ್ಲಿ ಏನು ಕಾರ್ಯಕ್ರಮ ನಡೆಯಲಿದೆ ಎಂಬುದರ ವಿವರ ಇದು.  ಬೆಳಗ್ಗೆ 11.30ಕ್ಕೆ ಕರ್ನಾಟಕ ಕಲಾಮಂದಿರದಲ್ಲಿ ಚಲನಚಿತ್ರೋತ್ಸವ ಉದ್ಘಾಟನೆ - ಸಮಾಜ ಕಲ್ಯಾಣ ಸಚಿವ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರಿಂದ ಚಾಲನೆ ಮಧ್ಯಾಹ್ನ 12.30ಕ್ಕೆ ಕುಪ್ಪಣ್ಣ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ ಉದ್ಘಾಟನೆ - - ಸಮಾಜ ಕಲ್ಯಾಣ ಸಚಿವ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರಿಂದ ಚಾಲನೆ ಮಧ್ಯಾಹ್ನ 1 ಗಂಟೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಹಾರ ಮೇಳ ಉದ್ಘಾಟನೆ - ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಅವರಿಂದ ಚಾಲನೆಸಂಜೆ 4 ಗಂಟೆಗೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಶ್ರೀ ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿ - ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಸಂಜೆ 4.30ಕ್ಕೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ಸಂಜೆ 5 ಗಂಟೆಗೆ ಮೈಸೂರು ವಿವಿಯ ಸೆನೆಟ್ ಭವನದಲ್ಲಿ ಯೋಗ ದಸರಾಕ್ಕೆ ಚಾಲನೆ ನೀಡಲಿದ್ದಾರೆ ಸಮಾಜ ಕಲ್ಯಾಣ ಸಚಿವ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಸಂಜೆ 5ಕ್ಕೆ ಕರ್ನಾಟಕ ಕಲಾಮಂದಿರದಲ್ಲಿ ಅಖಿಲ ಭಾರತ ಹಾಗೂ ರಾಜ್ಯ ಮಟ್ಟದ ಚಿತ್ರ ಶಿಲ್ಪ ಕಲಾ ಪ್ರದರ್ಶನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಚಾಲನೆ ಸಂಜೆ 5.30ಕ್ಕೆ ಕರ್ನಾಟಕ ಕಲಾಮಂದಿರ ರಂಗಾಯಣದಲ್ಲಿ ನವರಾತ್ರಿ ರಂಗೋತ್ಸವ (ಅಕ್ಟೋಬರ್ 23ರ ತನಕ) ಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರಿಂದ ಚಾಲನೆ ಸಂಜೆ 6.30ಕ್ಕೆ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಂದ ಚಾಲನೆ. 
icon

(5 / 5)

ಇತರ ಗ್ಯಾಲರಿಗಳು