ಮೈಸೂರು ದಸರಾ ಆನೆ ರೋಹಿತ್‌ಗೂ ರಾಜವಂಶಕ್ಕೂ ಇದೆ ಒಂದು ನಂಟು, ರಾಜವಂಶಸ್ಥೆ ಶೃತಿಕೀರ್ತಿದೇವಿ ಅವರನ್ನು ಕಂಡರೆ ಆನೆಗೂ ಅಕ್ಕರೆ- ಚಿತ್ರನೋಟ
Mysuru Dasara Elephants; ಮೈಸೂರು ರಾಜವಂಶಸ್ಥೆ ಶೃತಿಕೀರ್ತಿ ದೇವಿ ಅವರು ಇಂದು (ಆಗಸ್ಟ್ 28) ಕೂಡ ಅರಮನೆಯ ಗಜಶಾಲೆಗೆ ಆಗಮಿಸಿ, ರೋಹಿತ್ ಆನೆ ಬಳಿ ಹೋದರು. ಹಣ್ಣು ತಿನ್ನಿಸಿ ಕುಶಲೋಪರಿ ವಿಚಾರಿಸಿದರು. ರೋಹಿತ್ ಬಂದಾಗಿನಿಂದ ಇದು ಅವರ ನಿತ್ಯದ ಕೆಲಸ. ಏನಿದು ಬಾಂಧವ್ಯ - ಇಲ್ಲಿದೆ ಚಿತ್ರನೋಟ
(1 / 7)
ಮೈಸೂರು ರಾಜವಂಶಸ್ಥೆ ಶೃತಿಕೀರ್ತಿ ದೇವಿ ಅವರು ಬುಧವಾರ (ಆಗಸ್ಟ್ 28) ದಸರಾ ಗಜಪಡೆಯ ಲಾಲನೆಪಾಲನೆ ನಡೆಸಿದರು. ವಿಶೇಷವಾಗಿ ರೋಹಿತ್ ಆನೆ ಬಳಿ ಹೋಗಿ ಅದರ ಕುಶಲೋಪರಿ ವಿಚಾರಿಸಿದರು. ಆನೆ ಬಂದಾಗಿನಿಂದ ಇದು ಅವರ ನಿತ್ಯದ ಕೆಲಸವೆಂಬಂತಾಗಿದೆ. ಏನಿದು ಬಾಂಧವ್ಯ ಎಂಬ ಕುತೂಹಲ ಸಹಜ. ಅದಕ್ಕೂ ಮೊದಲು ಶೃತಿಕೀರ್ತಿ ದೇವಿ ಯಾರು ಎಂಬುದನ್ನು ತಿಳಿಯೋಣ.
(2 / 7)
ರಾಜವಂಶಸ್ಥ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ದಿವಂಗತ ವಿಶಾಲಾಕ್ಷಿ ದೇವಿಯವರ ಪುತ್ರಿಯೇ ಶೃತಿಕೀರ್ತಿ ದೇವಿ. ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ದಸರಾ ಗಜಪಡೆ ಬಳಿಗೆ ಆಗಾಗ್ಗೆ ಭೇಟಿ ನೀಡುವ ಶೃತಿಕೀರ್ತಿದೇವಿ, ದಸರಾ ಆನೆಗಳಿಗೆ ವಿವಿಧ ಬಗೆಯ ಹಣ್ಣುಗಳನ್ನು ನೀಡಿ ಸಂತೈಸುತ್ತಿರುತ್ತಾರೆ. ವಿಶೇಷವಾಗಿ ರೋಹಿತ್ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾರೆ. ಯಾಕೆ ಎಂಬ ಪ್ರಶ್ನೆಗೆ ಉತ್ತರ ಹೀಗಿದೆ ನೋಡಿ.
(3 / 7)
ದಸರಾ ಗಜಪಡೆಯಲ್ಲಿರುವ ರೋಹಿತ್ ಆನೆಯನ್ನು ಶೃತಿಕೀರ್ತಿದೇವಿ ಬಾಲ್ಯದಿಂದಲೇ ಬಲ್ಲರು. ರೋಹಿತ್ ಆರು ತಿಂಗಳ ಮರಿಯಾಗಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿಗೆ ಸಿಕ್ಕಿತ್ತು. ಆಗ ಅದನ್ನು ದತ್ತು ಪಡೆದು 10 ವರ್ಷ ಕಾಲ ಸಾಕಿದ್ದು ಶೃತಿಕೀರ್ತಿದೇವಿ ಅವರ ತಾಯಿ ವಿಶಾಲಾಕ್ಷಿದೇವಿ. ಆ ಆನೆಗೆ ರೋಹಿತ್ ಎಂಬ ನಾಮಕರಣ ಮಾಡಿದ್ದೂ ಅವರೇ.
(4 / 7)
ಅಂದಿನಿಂದಲೂ ರೋಹಿತ್ ಆನೆಯೊಂದಿಗೆ ಶೃತಿಕೀರ್ತಿದೇವಿ ಹೆಚ್ಚಿನ ಒಡನಾಟ ಹೊಂದಿದ್ದರು. ಕಾಲಾನುಕ್ರಮದಲ್ಲಿ ರೋಹಿತ್ ಆನೆಯನ್ನು ಮತ್ತೆ ಅರಣ್ಯ ಇಲಾಖೆಯ ಸುಪರ್ದಿಗೆ ಒಪ್ಪಿಸಲಾಯಿತು.
(5 / 7)
ಆದರೂ ಆಗಾಗ್ಗೆ ರೋಹಿತ್‌ನನ್ನು ನೋಡಲು ಆನೆ ಶಿಬಿರಕ್ಕೆ ವಿಶಲಾಕ್ಷಿದೇವಿ ಹಾಗು ಶೃತಿಕೀರ್ತಿದೇವಿ ಹೋಗಿ ಬರುತ್ತಿದ್ದರು. ತಾಯಿ ವಿಶಾಲಾಕ್ಷಿದೇವಿ ಅವರ ನಿಧನರಾದ ಬಳಿಕವೂ ರೋಹಿತ್ ಆನೆಯ ಬಗ್ಗೆ ವಿಶೇಷ ಅಕ್ಕರೆ ಹೊಂದಿರುವ ಶೃತಿಕೀರ್ತಿದೇವಿ ಒಡನಾಟ ಮುಂದುವರಿಸಿದ್ದಾರೆ.
(6 / 7)
ಇದೀಗ 21 ವರ್ಷದ ರೋಹಿತ್ ಆನೆಗೂ ಶೃತಿಕೀರ್ತಿದೇವಿ ಮೇಲೆ ಇನ್ನಿಲ್ಲದ ಪ್ರೀತಿ. ಆ ಪ್ರೀತಿಯೇ ಅವರನ್ನು ನಿತ್ಯವೂ ಗಜಶಾಲೆ ಕಡೆಗೆ ಸೆಳೆಯುತ್ತಿರುವುದು.
ಇತರ ಗ್ಯಾಲರಿಗಳು