Dasara Elephants; ಮೈಸೂರು ದಸರಾಕ್ಕೆ ಅಭಿಮನ್ಯ ನೇತೃತ್ವದ ಗಜಪಡೆಯ ತಾಲೀಮು ಶುರು, ಮನಸೆಳೆಯಿತು ಆನೆಗಳ ನಗರ ಪಥಸಂಚಲನ
Mysuru Dasara Elephants; ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಅಭಿಮನ್ಯು ನೇತೃತ್ವದ ಗಜಪಡೆ ಮೈಸೂರಿಗೆ ಬಂದಿದ್ದು, ಇಂದು (ಆಗಸ್ಟ್ 25) ತಾಲೀಮು ಶುರುಮಾಡಿವೆ. ಆನೆಗಳ ಆಕರ್ಷಕ ನಗರ ಪಥಸಂಚಲನ ಗಮನಸೆಳೆದಿದ್ದು, ಇಲ್ಲಿವೆ ಕೆಲವು ಫೋಟೋಸ್.
(1 / 7)
ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಮೈಸೂರು ತಲುಪಿರುವ ಗಜಪಡೆಯ ತೂಕ ನೋಡುವಿಕೆ ಎಲ್ಲ ಪೂರ್ಣಗೊಂಡಿದೆ. ಇಂದು (ಆಗಸ್ಟ್ 25) ಮೈಸೂರಿನ ರಾಜಬೀದಿಗಳಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆಯ ಒಂದು ನೋಟ.
(3 / 7)
ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗೂ ದಸರಾ ಆನೆಗಳಿಗೆ ತಾಲೀಮು ನಡೆಯುತ್ತದೆ. ಹೀಗೆ, ಪ್ರತಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ವೇಳೆ ದಸರಾ ಆನೆಗಳಿಗೆ ತಾಲೀಮು ನಡೆಯಲಿದೆ.
(4 / 7)
ಮೈಸೂರು ದಸರಾ ಮಹೋತ್ಸವಕ್ಕಾಗಿಯೇ ಮೊದಲ ಹಂತದಲ್ಲಿ ಆನೆ ಕ್ಯಾಂಪ್‌ಗಳಿಂದ ಅರಮನೆಗೆ 9 ಆನೆಗಳು ಆಗಮಿಸಿವೆ. ಈ ಬಾರಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ದಸರಾ ಅಂಬಾರಿ ಮೆರವಣಿಗೆ ನಡೆಯಲಿದೆ.
(5 / 7)
ಮೈಸೂರು ಅರಮನೆಯ ಬಲರಾಮದ್ವಾರದ ಮೂಲಕ ಹೊರಬಂದ ಆನೆಗಳು. ಅರಮನೆಯಿಂದ ಬನ್ನಿಮಂಟಪದವರೆಗೆ 5 ಕಿಮೀ ತಾಲೀಮು ನಡೆಸುತ್ತವೆ.
(6 / 7)
ಚಾಮರಾಜೇಂದ್ರ ವೃತ್ತ, ಕೆ ಆರ್ ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಹಳೆ ಆರ್ ಎಂ ಸಿ ವೃತ್ತ, ಹೈವೇ ವೃತ್ತದ ಮಾರ್ಗದಲ್ಲಿ ಸಾಗುವ ಮೂಲಕ ಬನ್ನಿ ಮಂಟಪಕ್ಕೆ ದಸರಾ ಗಜಪಡೆ ತಲುಪಿ, ಅಲ್ಲಿಂದ ವಾಪಸಾಗುತ್ತವೆ.
ಇತರ ಗ್ಯಾಲರಿಗಳು