Elephant Day: ಇಂದು ನನ್ನದೇ ದಿನ: ವಿಶ್ವ ಆನೆ ದಿನದಂದು ಕಬಿನಿ ಹಿನ್ನೀರಿನಲ್ಲಿ ಕಾಡಾನೆ ಗಳ ಕುಟುಂಬ ಜೀವನ, ನಿತ್ಯದ ಸುಂದರ ಬದುಕು ಹೀಗಿದೆ.
- World Elephant Day ಆಗಸ್ಟ್ 12 ಆನೆ ದಿನ. ಸೂಕ್ಷ್ಮ ಹಾಗೂ ಬುದ್ದಿವಂತ ಪ್ರಾಣಿಗಳಾದ ಆನೆಗಳ ಜೀವನವೇ ಆಸಕ್ತಿದಾಯಕ. ಸಂಘಜೀವಿಗಳಾದ ಆನೆಗಳ ಕುಟುಂಬ ರೀತಿಯಲ್ಲೇ ಇರುತ್ತವೆ. ಮೈಸೂರು ಜಿಲ್ಲೆ ಕಬಿನಿ ಹಿನ್ನೀರಿನಲ್ಲಿ( Kabini Back Waters) ಗುಂಪು ಆನೆ ಕಾಣಬಹುದು. ವಿಶ್ವ ಆನೆ ದಿನದ ಹಿನ್ನೆಲೆಯಲ್ಲಿ ಕಂಡ ಆನೆಗಳ ಬದುಕಿನ ಚಿತ್ರ ನೋಟ ಇಲ್ಲಿದೆ. ಚಿತ್ರ: ಉಮೇಶಭಟ್ಟ

(1 / 7)
ನಾನು ಮತ್ತು ನನ್ನ ಕುಟುಂಬ.. ಪುಟ್ಟ ಮರಿಯೊಂದು ಅಮ್ಮನ ಜತೆಯಲ್ಲಿ ಹೆಜ್ಜೆ ಹಾಕಿದರೆ ಇದಕ್ಕೆ ಗುಂಪು ರಕ್ಷಣೆ ಸದಾ ಸಿಗುತ್ತದೆ
(2 / 7)
ನಾನೂ ನೀನು ಜೋಡಿ… ಅರಣ್ಯದಲ್ಲಿ ಮೇಯುತ್ತಾ ಕಾಲ ಕಳೆಯು ಆನೆಗಳ ಸಾಂಗತ್ಯವನ್ನೂ ಬಯಸುತ್ತವೆ. ಆನೆಗಳ ಸರಸ ಸಲ್ಲಾಪದ ಕ್ಷಣ ಹೀಗಿದೆ.
(3 / 7)
ಯಾರಾದರೂ ಬಂದೀರಿ ಹುಷಾರ್… ಗುಂಪುಗಳಾಗಿ ಇರುವ ಕರಿಪಡೆ ಮರಿಗಳಿಗೆ ತೊಂದರೆಕೊಡಬಹುದು ಎಂದು ಕೂಡಲೇ ಒಟ್ಟುಗೂಡುತ್ತವೆ. ಮುನ್ನೆಚ್ಚರಿಕೆ ವಹಿಸುವ ಆನೆಗಳ ನೋಟವೇ ಚೆಂದ
(4 / 7)
ನಮ್ಮ ಕುಟುಂಬದವರೆಂದರೆ ಹೀಗೆ.. ತಮ್ಮ ಪಾಡಿಗೆ ಕಾಡಿಯೊಳಕ್ಕೆ ಗುಂಪಾಗಿಯೇ ಮೇಯುತ್ತಾ ಕಾಲ ಕಳೆಯುವ ಗಜಪಡೆಗೆ ಯಾರಾದರೂ ಬಂದರೂ ಆತಂಕ. ಆಗ ಹೀಗೆ ಮರಿ ಮಕ್ಕಳು ಹಿರಿಯರು ಎಲ್ಲರೂ ಒಂದಾಗಿ ಬಿಡುತ್ತಾರೆ.
(5 / 7)
ನೀರೆಂದರೆ ನನಗೆ ಇನ್ನಿಲ್ಲದ ಖುಷಿ. ನೀರು ಸಿಕ್ಕರೆ ನನಗೆ ಅದೇ ಸ್ವರ್ಗ. ಒಂಟಿಯಾನೆಯೊಂದು ನೀರನರಸಿ ಬಂದು ಜಳಕದಲ್ಲಿ ಪುಳಕಗೊಳ್ಳುತ್ತಿದೆ.
(6 / 7)
ನಾನು ಮತ್ತು ನನ್ನ ದಂತ. ಕಬಿನಿ ಹಿನ್ನೀರಿನಲ್ಲಿ ಸಿಗುವ ಈ ಆನೆ ಅತಿ ಉದ್ದನೆಯ ದಂತದಿಂದಲೇ ಖ್ಯಾತಿ. ಸದಾ ಸೊಂಡಿಲಿನಿಂದ ದಂತಗಳನ್ನು ನೇವರಿಸಿಕೊಳ್ಳುತ್ತಾ ಹೆಜ್ಜೆ ಹಾಕಿ ಗಮನ ಸೆಳೆಯುತ್ತದೆ.
ಇತರ ಗ್ಯಾಲರಿಗಳು