Mysuru Jackfruit mela: ಮೈಸೂರಲ್ಲಿ ಹಲಸಿನ ಹಬ್ಬ, ಕೆಂಪು, ಹಳದಿ, ಕೇಸರಿ ಹಣ್ಣಿನ ಘಮಘಮ, ಇಂದು ಮೇಳ ಕೊನೆ
- Jackfruit time ಮೈಸೂರಿನಲ್ಲಿ ಸಹಜ ಸಮೃದ್ದಿ ಬಳಗದವರು ನಂಜರಾಜ ಬಹದ್ದೂರು ಛತ್ರದಲ್ಲಿ ಆಯೋಜಿಸಿರುವ ಹಲಸಿನ ಹಬ್ಬ ಗಮನ ಸೆಳೆಯುತ್ತಿದೆ. ಇಲ್ಲಿದೆ ಮೇಳದ ಚಿತ್ರನೋಟ.
- Jackfruit time ಮೈಸೂರಿನಲ್ಲಿ ಸಹಜ ಸಮೃದ್ದಿ ಬಳಗದವರು ನಂಜರಾಜ ಬಹದ್ದೂರು ಛತ್ರದಲ್ಲಿ ಆಯೋಜಿಸಿರುವ ಹಲಸಿನ ಹಬ್ಬ ಗಮನ ಸೆಳೆಯುತ್ತಿದೆ. ಇಲ್ಲಿದೆ ಮೇಳದ ಚಿತ್ರನೋಟ.
(1 / 8)
ಮೈಸೂರಿನಲ್ಲಿ ಆಯೋಜನೆಗೊಂಡಿರುವ ಎರಡು ದಿನಗಳ ಹಲಸಿನ ಹಬ್ಬಕ್ಕೆ ಹಲವಾರು ರೈತರು ಬಾವು ಬೆಳೆದ ಹಣ್ಣುಗಳನ್ನು ತಂದಿದ್ದಾರೆ. ಸಹಜಸಮೃದ್ದ ಬಳಗವು ಈ ಮೇಳ ಆಯೋಜಿಸುತ್ತಿದೆ. ಶನಿವಾರ ಆರಂಭಗೊಂಡಿರುವ ಮೇಳ ಭಾನುವಾರ ಕೊನೆ ಗೊಳ್ಳಲಿದೆ.
(2 / 8)
ಮೈಸೂರಿನಲ್ಲಿ ನಡೆದಿರುವ ಹಲಸಿನ ಹಬ್ಬಕ್ಕೆ ಪುಟ್ಟನೆಯ ಹಲಸು ಕೂಡ ಗಮನ ಸೆಳೆಯುತ್ತಿದೆ. ಈ ಬಾರಿ ನಾಗರಹೊಳೆ, ಚಿಕ್ಕನಾಯಕನಹಳ್ಳಿ ಮತ್ತು ಚೇಳೂರಿನ ಹಲಸು ಬೆಳೆಗಾರರು ಸಾಕಷ್ಟು ಪ್ರಮಾಣದಲ್ಲಿ ಕೆಂಪು ಹಲಸು ತಂದಿದ್ದಾರೆ. 10 ಟನ್ ಗೂ ಹೆಚ್ಚು ಗುಣಮಟ್ಟದ ಹಲಸು ಮೇಳಕ್ಕೆ ಬಂದಿದೆ
(3 / 8)
ಕೆಂಪು ಹಲಸು ಮೈಸೂರು ಹಬ್ಬಕ್ಕೆ ಬರುವವರ ಬಾಯಿ ರುಚಿ ತಣಿಸುತ್ತಿದೆ.ಪ್ರತಿ ಬಾರಿಯ ಹಲಸಿನ ಹಬ್ನದಲ್ಲಿ ಕೆಂಪು ಹಲಸು ರುಚಿ ನೋಡಲು ಸಿಗುತ್ತಿಲ್ಲ ಎಂಬ ದೂರಿತ್ತು. ಈ ಬಾರಿ ನಾಗರಹೊಳೆ, ಚಿಕ್ಕನಾಯಕನಹಳ್ಳಿ ಮತ್ತು ಚೇಳೂರಿನ ಹಲಸು ಬೆಳೆಗಾರರು ಸಾಕಷ್ಟು ಪ್ರಮಾಣದಲ್ಲಿ ಕೆಂಪು ಹಲಸು ತಂದಿದ್ದಾರೆ. 10 ಟನ್ ಗೂ ಹೆಚ್ಚು ಗುಣಮಟ್ಟದ ಹಲಸು ಮೇಳಕ್ಕೆ ಬಂದಿದೆ
(4 / 8)
ಮೈಸೂರು ಜಿಲ್ಲೆಯ ಹಲವಾರು ರೈತರು ತಾವು ಬೆಳೆದ ಬಗೆಬಗೆಯ ಹಲಸುಗಳನ್ನು ಹಲಸಿನ ಹಬ್ಬಕ್ಕೆ ತಂದಿದ್ದಾರೆ.ಹಲಸಿನ ಹಣ್ಣನ್ನು ನೇರ ಗ್ರಾಹಕರಿಗೆ ಮಾರಾಟ ಮಾಡಲು ಆಸಕ್ತರಾದ ರೈತರು ಮತ್ತು ಹಲಸಿನ ಮೌಲ್ಯವರ್ಧಿತ ಪದಾರ್ಥಗಳನ್ನು ಮಾರಲು ಇಷ್ಟಪಡುವವರು ಸಂಪರ್ಕಿಸಬಹುದು. ಸಂಪರ್ಕ: 7090009944
(5 / 8)
ಹಲಸಿನ ಹಬ್ಬದಲ್ಲಿ ಬರೀ ಹಣ್ಣುಗಳು ಮಾರಾಟಕ್ಕೆ ಸಿಗುವುದಿಲ್ಲ. ಬದಲಿಗೆ ಬಗೆಬಗೆಯ ಹಲಸಿನ ಸಸಿಗಳೂ ಸಿಗಲಿವೆ. ಕೆಂಪಲಸಿನ ಗಿಡಗಳು ಕೂಡ ಸಿಗಲಿವೆ ಮೇಳದ ಆರಂಭಕ್ಕೇ ಸಿದ್ದು ಹಲಸು ಸಸ್ಯಕ್ಷೇತ್ರದ ಮಳಿಗೆ ಇದೆ ಗಮನಿಸಬಹುದು.
(6 / 8)
ಹೆಸರಾಂತ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ ಹಲಸು ಹುಡುಕಿ ಮೈಸೂರು ಹಲಸಿನ ಹಬ್ಬಕ್ಕೆ ಬಂದಿದ್ದರು. ಅವರಿಗೆ ಹಲಸಿನ ಉಡುಗೊರೆ ಕೊಟ್ಟವರು ಚಿನ್ನಸ್ವಾಮಿ ವಡ್ಡಗೆರೆ,
(7 / 8)
ಎಂ.ಕೆ. ಕೈಲಾಸಮೂರ್ತಿ ಹೆಸರಾಂತ ಸಹಜ ಕೃಷಿಕರು. ಕೊಳ್ಳೇಗಾಲ ಸಮೀಪದ ದೊಡ್ಡಿಂದುವಾಡಿಯ ಸಹಜ ಕೃಷಿ ತೋಟದಲ್ಲಿ 350 ಹಲಸು ನೆಟ್ಟಿದ್ದಾರೆ.ಅವು ಅಂತಿಂಥ ಹಲಸಲ್ಲ. ದಕ್ಷಿಣ ಭಾರತವನ್ನು ಸುತ್ತಿ, ಆಯ್ದು ತಂದ ವಿಷೇಷ ಗುಣಗಳ ಹಲಸಿನ ತಳಿಗಳು.
ಇತರ ಗ್ಯಾಲರಿಗಳು